ಜಭುವಾ (ಮಧ್ಯಪ್ರದೇಶ): ಅನ್ಯ ಜಾತಿಯ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧಹೊಂದಿರುವ ಆರೋಪದ ಮೇಲೆ ಗ್ರಾಮಸ್ಥರ ಗುಂಪೊಂದು ಮಹಿಳೆಗೆ ವಿಚಿತ್ರ ಶಿಕ್ಷೆ ವಿಧಿಸಿದೆ. ಪತಿಯನ್ನು ಭುಜದ ಮೇಲೆ ಕೂರಿಸಿಕೊಂಡು ಹೋಗುವ ಶಿಕ್ಷೆ ನೀಡಿ ಹಿಂಸಿಸಲಾಗಿದೆ.
ಮಧ್ಯಪ್ರದೇಶದ ಜಭುವಾ ಜಿಲ್ಲೆಯ ದೇವಿಗಢ ಗ್ರಾಮದಲ್ಲಿ ಶನಿವಾರಈಘಟನೆ ನಡೆದಿದೆ. ಸದ್ಯ ಈ ವಿಡಿಯೊಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದೆ. ಆನಂತರವೇ ಪ್ರಕರಣ ಬಯಲಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿದ್ದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆಎ.ಎನ್.ಐ ವರದಿ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.