ADVERTISEMENT

ಮಹಿಳೆಯರಿಗಾಗಿ ಸರಳ ಫಿಟ್‌ನೆಸ್‌ ಮಂತ್ರ

​ಪ್ರಜಾವಾಣಿ ವಾರ್ತೆ
Published 7 ಜುಲೈ 2019, 19:30 IST
Last Updated 7 ಜುಲೈ 2019, 19:30 IST
Yoga lovers, students of various Yoga centres participated in 5th World Yoga Day, Yoga for Heart programme organised by Health and Family welfare, AYSUH (Ayurveda, Yoga and Naturopathy, Unani, Siddha and Homoeopathy) Department in association with Karnataka State Olympic Association and various Yoga centers at Sree Kanteerava Stadium in Bengaluru on Friday. Photo by S K Dinesh
Yoga lovers, students of various Yoga centres participated in 5th World Yoga Day, Yoga for Heart programme organised by Health and Family welfare, AYSUH (Ayurveda, Yoga and Naturopathy, Unani, Siddha and Homoeopathy) Department in association with Karnataka State Olympic Association and various Yoga centers at Sree Kanteerava Stadium in Bengaluru on Friday. Photo by S K Dinesh   

ಮಹಿಳೆಯರು ತಮ್ಮ ಕುಟುಂಬ ಮತ್ತು ವೃತ್ತಿ ಬದುಕನ್ನೂ ನಿಭಾಯಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ನಿತ್ಯವೂ ದುಡಿಮೆಯಲ್ಲಿ ತೊಡಗುವ ಮಹಿಳೆಯರಿಗೆ ಆರೋಗ್ಯ ಕಾಳಜಿ ಬಹಳ ಮುಖ್ಯ. ದೈಹಿಕ ಮತ್ತು ಮಾನಸಿಕವಾಗಿ ಸದೃಡರಾಗಿರಬೇಕೆಂದರೆ ವ್ಯಾಯಾಮದಲ್ಲಿ ತೊಡಗುವುದು ಅಗತ್ಯವಾಗಿದೆ. ಹೀಗಾಗಿ ದುಡಿಯುವ ಮಹಿಳೆಯರಿಗಾಗಿ ಕೆಲವು ಸರಳ ಫಿಟ್‌ನೆಸ್‌ ಮಂತ್ರಗಳು ಇಲ್ಲಿವೆ.

ದಿನಪೂರ್ತಿ ಚಟುವಟಿಕೆಯಿಂದಿರುವುದು

ಹೆಚ್ಚು ಆರೋಗ್ಯಕರವಾಗಿ ಮಾತನಾಡುವುದನ್ನು ಮತ್ತು ಇತರರೊಂದಿಗೆ ಬೆರೆಯುವುದನ್ನು ರೂಢಿಸಿಕೊಳ್ಳಬೇಕು. ಕಚೇರಿಯಲ್ಲಿ ಕೆಲಸ ಇಲ್ಲದ ಸಮಯದಲ್ಲಿ ಅಥವಾ ಬಿಡುವಿನಲ್ಲಿ ಆದಷ್ಟು ನಡೆದಾಡುವುದು ಸೂಕ್ತ.

ADVERTISEMENT

ಆರೋಗ್ಯಕರ ಆಹಾರ ನಿಮ್ಮದಾಗಲಿ

ಸ್ನಾಕ್ಸ್‌ ತಿನ್ನುವ ಅಭ್ಯಾಸವಿದ್ದಲ್ಲಿ ಆರೋಗ್ಯಕರವಾದ ತಿಂಡಿಗಳನ್ನು ಮಾತ್ರವೇ ಸೇವಿಸಿ. ತರಕಾರಿಗಳನ್ನು ಹೆಚ್ಚು ತಿನ್ನುವುದು ಉತ್ತಮ. ತಾಜಾ ಹಣ್ಣುಗಳಲ್ಲಿರುವ ಗ್ಲೂಕೋಸ್‌ ಅಂಶ ಆರೋಗ್ಯಕ್ಕೆ ಅತ್ಯಗತ್ಯ. ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ ಆಹಾರದ ಸೇವನೆ ಕಡಿಮೆ ಮಾಡಬೇಕು. ಸಂಸ್ಕರಿಸಿದ ಕುಕ್ಕೀಸ್‌, ಚಾಕಲೇಟ್ಸ್‌, ಜೇನು ಮತ್ತು ಅನ್ನ ತಿನ್ನುವುದನ್ನು ಸಹ ಮಿತಿಗೊಳಿಸಬೇಕು.ಇಂತಹ ಆಹಾರವನ್ನು ಹೆಚ್ಚು ಸೇವಿಸಿದ್ದಲ್ಲಿ ಸಕ್ಕರೆ ಖಾಯಿಲೆ ಮಟ್ಟವು ಹೆಚ್ಚಾಗುವ ಸಾಧ್ಯತೆ ಇದೆ ಹಾಗೂ ದೇಹದಲ್ಲಿ ಬೊಜ್ಜು ಬೆಳೆಯಬಹುದು.

ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಿ

ಪ್ರತಿನಿತ್ಯ ಅನುಕೂಕರವಾದ ವ್ಯಾಯಾಮಕ್ರಮವನ್ನು ಅನುಸರಿಸಿ. ವಾರದಲ್ಲಿ ಕನಿಷ್ಠ ಎರಡು ಬಾರಿ 20 ನಿಮಿಷಗಳ ಕಾಲ ವ್ಯಾಯಾಮ ತರಬೇತಿ ಪಡೆಯಬೇಕು. ಅಭ್ಯಾಸ ಮಾಡಲು ಸೂಕ್ತವೆನಿಸಿದ ವ್ಯಾಯಾಮವನ್ನು ಮಾಡುವುದು ಉತ್ತಮ.

ಟ್ರೆಡ್‌ಮಿಲ್‌ ಮ್ಯಾಜಿಕ್‌

10 ನಿಮಿಷಗಳ ಕಾಲ ಟ್ರೆಡ್‌ ಮಿಲ್‌ ಅಭ್ಯಾಸ ಮಾಡಬೇಕು. ಇತರ ಯಾವುದೇ ವ್ಯಾಯಾಮ ಅಭ್ಯಾಸ ಮಾಡಿದರೂ ಸರಿಯೇ. ಒಟ್ಟಿನಲ್ಲಿ ವ್ಯಾಯಾಮ ಮಾಡಬೇಕು. ಸ್ನಾಯುಗಳು ಆರೋಗ್ಯಕರವಾಗಿರಲು ಇಂತಹ ವ್ಯಾಯಮಗಳನ್ನು ರೂಢಿಸಿಕೊಳ್ಳಬೇಕು.

ಕ್ರಂಚಸ್‌ ತಂತ್ರ

ನೆಲದಲ್ಲಿ ಕೂತು ಕೈಗಳ ಸಹಾಯವಿಲ್ಲದೆ ಎರಡು ಕಾಲುಗಳನ್ನು ಅರ್ಧಭಾಗ ಮೇಲೆತ್ತಬೇಕು. ಈ ರೀತಿ ಮಾಡಿದ್ದಲ್ಲಿ ಕಿಬ್ಬೊಟ್ಟೆಯ ಸ್ನಾಯುವನ್ನು ಬಲಗೊಳಿಸಬಹುದು. ಹೊಟ್ಟೆ ಕರಗಿಸಲು ಈ ವ್ಯಾಯಾನು ಸಹಾಯಕವಾಗಿದೆ.

ಹೆಚ್ಚು ನೀರು ಕುಡಿಯಿರಿ

ನಮ್ಮ ದೇಹದ ಆರೋಗ್ಯಕ್ಕೆ ಸಾಕಷ್ಟು ನೀರು ಕುಡಿಯುವ ಅಗತ್ಯವಿದೆ. ಪ್ರತಿದಿನ ಯಾವುದೇ ಕೆಲಸದಲ್ಲಿದ್ದರೂ ನೀರು ಕುಡಿಯುವುದನ್ನು ಮರೆಯಬೇಡಿ. ಇದರಿಂದ ’ಡಿ ಹೈಡ್ರೆಟ್‌’ ಸಮಸ್ಯೆಯಿಂದ ದೂರ ಇರಬಹುದು.

ಪೂರ್ವಾಭ್ಯಾಸ

ಸ್ನಾಯು ಬಲ ಹೆಚ್ಚಿಸುವ ವ್ಯಾಯಾಮಗಳು ಅಥವಾ ವರ್ಕ್‌ಔಟ್‌ಗಳನ್ನು ಮಾಡುವಾಗ ಪೂರ್ವಾಭ್ಯಾಸ ಅಗತ್ಯ. ಆದ್ದರಿಂದ ವರ್ಕ್‌ಔಟ್‌ ಮಾಡುವಾಗ ಸ್ನಾಯುಗಳಿಗೆ ಅಥವಾ ದೇಹದ ಯಾವುದೇ ಭಾಗಗಳಿಗೆ ತೊಂದರೆಯಾಗದಂತೆ ಮುಂಜಾಗೃತೆ ವಹಿಸಬೇಕು. ಮೊದಲು ಕಡಿಮೆ ವೇಗದಿಂದ ಅಭ್ಯಾಸ ಮಾಡಿ ನಂತರ ನಿಧಾನವಾಗಿ ವೇಗ ಹೆಚ್ಚಿಸಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.