ADVERTISEMENT

Valentine Day | ಕ್ಲಾಸ್ ರೂಮಲ್ಲೇ ಪ್ರಪೋಸ್ ಮಾಡಿದೆ

ಪ್ರಜಾವಾಣಿ ವಿಶೇಷ
Published 13 ಫೆಬ್ರುವರಿ 2020, 13:36 IST
Last Updated 13 ಫೆಬ್ರುವರಿ 2020, 13:36 IST
   

ಅಂದು ದಿನಾಂಕ: 24.08.2016. ವಾತಾವರಣದಲ್ಲಿ ಏನೋ ಏರು ಪೇರು, ತಂಪಾಗಿ ಸೂಸುವ ಗಾಳಿ, ಮೋಡ ಕವಿದ ವಾತಾವರಣ, ಮೈನವಿರೇಳಿಸುವ ಚಳಿ, ಏನೋ ಹೋಸತನದ ಅನುಭವ, ನಿದ್ದೆನೇ ಬರ್ತಿಲ್ಲ, ಯಾಕೇಂತ ಗೊತ್ತಿಲ್ಲ. ಆದರೆ, ಇದೆಲ್ಲದರ ನಡುವೆಯೂ ಏನೋ ಖುಷಿ, ಇದಕ್ಕೆಲ್ಲ ಕಾರಣ ಸಂಜೆ 7 ಗಂಟೆಗೆ ಬಂದ ಆ ಒಂದು ಕರೆ.

ಸಂಜೆ ಸುಮಾರು 7 ಗಂಟೆಯ ಸಮಯ ನಾನು ಹಾಸ್ಟೆಲ್‌ನಲ್ಲಿ ಗೆಳೆಯರೊಂದಿಗೆ ಹರಟೆ ಹೊಡೆಯುತ್ತಿದ್ದೆ. ನನ್ನ ಮೊಬೈಲ್‌ ರಿಂಗ್‌ಆಗ ತೊಡಗಿತ್ತು. ಮೊಬೈಲ್‌ಹಿಡಿದು ನೋಡಿದಾಗ ಅದು ನನ್ನ ಕ್ಲಾಸ್‌ಮೇಟ್ಹುಡುಗಿಯ ಕರೆಯಾಗಿತ್ತು. ಎಂದಿನಂತೆ ಫೋನ್‌ ರಿಸೀವ್‌ಮಾಡಿ ಮಾತಾಡುತ್ತಾ ಹೊರನಡೆದೆ. ಏನ್ರೀ ಮ್ಯಾಡಮ್ಈ ಟೈಂ ಅಲ್ಲಿ ಫೋನ್‌ಮಾಡಿದಿರಿ ಏನ್ ವಿಶೇಷ? ಅಂದೆ ಅದಕ್ಕೆ ಅವಳು ನಾನು ನಿನ್ನ ಹತ್ರ ಏನೋ ಹೇಳ್ಬೇಕು ಅಂದ್ಲು, ಸರಿ ಏನ್ ಹೇಳು ಅಂದೆ ಅವಳು ನಾನು ನಿನ್ನನ್ನ ತುಂಬಾ ಇಷ್ಟ ಪಡ್ತಿದಿನಿ ಕಣೋ, ನಿನ್ ಅಂದ್ರೆ ನಂಗೆ ಇಷ್ಟ ಅಂದ್ಲು.

ನಂಗೆ ಶಾಕ್ ಆಗಿ ನಾನು ಮೌನ ತಳೆದೆ. ಮುಂದುವರೆದು ನೀನು ನನ್ನನ್ನ ಆರೈಕೆ ಮಾಡೋ ರೀತಿ, ನೀನು ಹುಡುಗಿಯರಿಗೆ ಕೋಡೊ ಮರ್ಯಾದೆ, ನಿನ್ನ ಆ ಮುಗುಳ್ನಗೆ, ನೀನು ಕ್ಲಾಸ್‌ನಲ್ಲಿ ಹೊಡೆಯೋ ಕಾಮೆಂಟ್ಸ್ ಎಲ್ಲಾ ನನ್ನನ್ನ ಹುಚ್ಚಿ ಆಗೋತರ ಮಾಡಿದೆ. I am in love with u, I love U ಎಂದು ತನ್ನ ಪ್ರೇಮ ನಿವೇದನೆ ಮಾಡಿಕೊಂಡಳು. ನನಗೆ ಏನ್ ಹೇಳ್ಬೇಕು ಗೊತ್ತಾಗ್ಲಿಲ್ಲ.

ADVERTISEMENT

ನಾನು ಇಷ್ಟ‌ಪಟ್ಟಿರೊ ಹುಡುಗಿ ಅವಳು. ಅವಳಿಗೆ ನನ್ನ ಪ್ರೇಮ ನಿವೇದನೆ ಮಾಡಲು ಧೈರ್ಯವಿಲ್ಲದೆ ಸುಮ್ಮನಿದ್ದೆ. ಆದರೆ ಇಷ್ಟಪಟ್ಟಿರೋ ಹುಡುಗಿನೆ ಬಂದು ತನ್ನ ಪ್ರೇಮ ನಿವೇದನೆ ಮಾಡಿಕೊಂಡಾಗ ಒಂತರಾ ಖುಷಿ. ಇಷ್ಟ‌ಪಟ್ಟಿರೊ ಹುಡುಗಿನೇ ಬಂದು ಪ್ರಪೋಸ್‌ಮಾಡಿದಾಗ ಇಲ್ಲ‌ ಅಂತ ಹೇಳೋಕೆ ಹೇಗಾದ್ರು ಮನಸ್ಸಾದಿತೂ ಮಾರ್ರೆ!.... ನಾನು ಬೆಳಿಗ್ಗೆ ಕಾಲೇಜ್‌ನಲ್ಲಿ ಮಾತಾಡುವುದಾಗಿ ತಿಳಿಸಿ ಕರೆ ಕಟ್ ಮಾಡಿ.

ಬೆಳಿಗ್ಗೆ ಬೇಗ ಕಾಲೇಜಿಗೆ ಬಾ ಅಲ್ಲೇ ಸಿಗ್ತೆನೆ ಎಂದು ಮೆಸೇಜ್ ಹಾಕಿ ಬೆಳಿಗ್ಗೆ ಬೇಗನೆ ಅವಳಿಗೆ ಇಷ್ಟವಾದ ಮಂಚ್ ಚಾಕೋಲೇಟ್ ತಗೊಂಡು ಹೋಗಿ ಕ್ಲಾಸ್ ನಲ್ಲೇ,
‘Roses are Red,
Sky is Blue,
And I am Only for U.....
Be with me Every Time dear,
I Love U’
ಎಂದು ಹೇಳಿ ನನ್ನ ಪ್ರೇಮ ನಿವೇದನೆ ಮಾಡಿಕೊಂಡೆ.

–ಪ್ರಶಾಂತ್‌ ಕುಮಾರ್‌ ಹಡಪದ

***

ಪ್ರೇಮ ಪ್ರಸ್ತಾವದ ಮಧುರ ನೆನಪುಗಳನ್ನು ಹಂಚಿಕೊಳ್ಳಲು ‘ಪ್ರಜಾವಾಣಿ’ ನೀಡಿದ ಕರೆಗೆ ಸಾಕಷ್ಟು ಜನರು ಓಗೊಟ್ಟರು. ಪ್ರಸ್ತಾವದ ಗಾಢ ನೆನಪುಗಳನ್ನು ಹೊಂದಿರುವ ಆಯ್ದ ಕೆಲ ಬರಹಗಳು ಇಲ್ಲಿವೆ. ನಿಮಗೆ ಯಾವ ಪ್ರಸ್ತಾವ ಇಷ್ಟವಾಯಿತು? ಕಾಮೆಂಟ್‌ ಮಾಡಿ ತಿಳಿಸಿ. ತೀರ್ಪುಗಾರರ ಆಯ್ಕೆಯ ಅತ್ಯುತ್ತಮ ಮೂರು ಬರಹಗಳಿಗೆ ‘ಅಮೆಜಾನ್‌ ಇಕೋ ಡಾಟ್‌‘ ಬಹುಮಾನವೂ ಇದೆ. ಫೆ.18ರಂದು ವಿಜೇತರ ವಿವರ ಪ್ರಕಟವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.