ADVERTISEMENT

ವ್ಯಾಲೆಂಟೈನ್ಸ್ ಡೇ: ಮಧುರ ನೆನಪು ಹಂಚಿಕೊಳ್ಳಿರಿ, ಸ್ಮಾರ್ಟ್ ಸ್ಪೀಕರ್ ಗೆಲ್ಲಿರಿ!

ನಿಮ್ಮ ಸಂಗಾತಿಗೆ ನೀವು ಪ್ರಪೋಸ್ ಮಾಡಿದ್ದು ಹೇಗೆ? ನಮಗೆ ತಕ್ಷಣ ಬರೆದು ಕಳುಹಿಸಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 2:35 IST
Last Updated 5 ಫೆಬ್ರುವರಿ 2020, 2:35 IST
ಮಧುರ ನೆನಪು ಹಂಚಿಕೊಳ್ಳಿರಿ, ಅಮೆಜಾನ್ ಇಕೋ ಡಾಟ್ ಗೆಲ್ಲಿರಿ
ಮಧುರ ನೆನಪು ಹಂಚಿಕೊಳ್ಳಿರಿ, ಅಮೆಜಾನ್ ಇಕೋ ಡಾಟ್ ಗೆಲ್ಲಿರಿ   

ಸೈಂಟ್ ವ್ಯಾಲೆಂಟೈನ್ಸ್ ಹೆಸರಿನಲ್ಲಿ ಪ್ರತಿ ವರ್ಷ ಫೆ.14ರಂದು ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತಿದೆ. ಈ ಪಾಶ್ಚಾತ್ಯ ಸಂಭ್ರಮವು ಭಾರತಕ್ಕೆ ಬಂದು ಸಾಕಷ್ಟು ಕಾಲವೇ ಆಗಿದೆ. ವ್ಯಾಲೆಂಟೈನ್ಸ್ ಡೇ ಹೆಸರಿನಲ್ಲಿ ಸ್ವೇಚ್ಛೆಯಿಂದ ರಾದ್ಧಾಂತಗಳನ್ನು ಮಾಡುವವರೂ ಇದ್ದಾರೆ. ಆದರೆ ಈ ದಿನವನ್ನು ತಮ್ಮ ಪ್ರೀತಿ ಪಾತ್ರರಲ್ಲಿ ನಿಷ್ಕಲ್ಮಶ ಪ್ರೇಮ ನಿವೇದನೆ ಮಾಡಿಕೊಳ್ಳುವುದಕ್ಕೂ ಹಲವರು ಬಳಸುತ್ತಾರೆ. ನಿಮ್ಮ ಸಂಗಾತಿಗೆ ನೀವು ಹೇಗೆ ಪ್ರೇಮ ನಿವೇದನೆ ಮಾಡಿದಿರಿ? ಈ ಸವಿ ನೆನಪುಗಳನ್ನು300 ಪದಗಳೊಳಗೆ ಪ್ರಜಾವಾಣಿ ಜೊತೆಗೆ ಹಂಚಿಕೊಳ್ಳಿರಿ.

ವಿಷಯ: ನೀವು ಇಷ್ಟಪಟ್ಟ ವ್ಯಕ್ತಿಗೆ ಹೇಗೆ ಪ್ರಪೋಸ್ ಮಾಡಿದಿರಿ?

ನಿಮ್ಮ ಮನದಲ್ಲಿ ಬೆಚ್ಚಗೆ ಅಡಗಿರುವ ನೆನಪುಗಳನ್ನು ಹಂಚಿಕೊಳ್ಳಲು ಪ್ರಜಾವಾಣಿ ಜಾಲತಾಣವು ವೇದಿಕೆ ಒದಗಿಸುತ್ತಿದೆ. ಆಯ್ದ ಬರಹಗಳನ್ನು Prajavani.net ನಲ್ಲಿ ಪ್ರಕಟಿಸಲಾಗುವುದು.

ADVERTISEMENT

ಮಾತ್ರವಲ್ಲ, ಅವುಗಳಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದ ಮೂರು ಬರಹಗಳಿಗೆ ಅಮೆಜಾನ್ ಇಕೋ-ಡಾಟ್ ಎಂಬ ಸ್ಮಾರ್ಟ್ ಸ್ಪೀಕರ್ ಬಹುಮಾನವೂ ಇದೆ. ಹಾಗಿದ್ದರೆ ತಡವೇಕೆ? ತಕ್ಷಣವೇ ಆ ಹಿಂದಿನ ದಿನಗಳನ್ನು ಮೆಲುಕು ಹಾಕಿಕೊಳ್ಳುತ್ತಾ, ಕೀಬೋರ್ಡ್‌ನಲ್ಲಿ ಟೈಪ್ ಮಾಡಲು ಸಿದ್ಧರಾಗಿ.

* ಕನ್ನಡ ಯುನಿಕೋಡ್‌ನಲ್ಲಿ ಟೈಪ್ ಮಾಡಿದ ಬರಹಗಳನ್ನು pvonline@prajavani.co.in ವಿಳಾಸಕ್ಕೆ ಇಮೇಲ್ ಕಳಿಸಿ
* ನಿಮ್ಮ ಹೆಸರು, ವಿಳಾಸ ಮತ್ತು ಸಂಪರ್ಕ ಸಂಖ್ಯೆ ಇರಲಿ.

* ನೀವು ಬರೆಯುವ ಪುಟ್ಟ ಲೇಖನವು ಸೋಷಿಯಲ್ ಮೀಡಿಯಾ, ನಿಯತಕಾಲಿಕ, ಯಾವುದೇ ಪತ್ರಿಕೆ, ಬ್ಲಾಗ್ ಸೇರಿದಂತೆ ಬೇರೆಲ್ಲೂಪ್ರಕಟವಾಗಿರಬಾರದು ಎಂಬುದು ನೆನಪಿರಲಿ.
* ಹೆಸರು ಗೌಪ್ಯವಾಗಿರಿಸಬೇಕು ಎಂದಿದ್ದಲ್ಲಿ ಅದನ್ನೂ ನಮೂದಿಸಿ.
* ನಿಮ್ಮ ಬರಹಗಳು ನಮ್ಮನ್ನು ತಲುಪಲು 2020ಫೆಬ್ರುವರಿ 10 ಕೊನೆಯ ದಿನ.
* ತೀರ್ಪುಗಾರರ ನಿರ್ಣಯವೇ ಅಂತಿಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.