ADVERTISEMENT

ಐಫೋನ್‌ನಲ್ಲಿನ್ನು ವಾಟ್ಸ್‌ಆ್ಯಪ್‌ ವಾಯ್ಸ್‌ ಸ್ಟೇಟಸ್‌ ಅಪ್‌ಡೇಟ್‌ ಮಾಡಬಹುದು!

ಏಜೆನ್ಸೀಸ್
Published 14 ಮಾರ್ಚ್ 2023, 11:21 IST
Last Updated 14 ಮಾರ್ಚ್ 2023, 11:21 IST
   

ಸ್ಯಾನ್‌ ಫ್ರಾನ್ಸಿಸ್ಕೊ: ಮೆಟಾ-ಮಾಲೀಕತ್ವದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸ್‌ಆ್ಯಪ್‌, ಐಓಎಸ್‌ನಲ್ಲಿ ‘ವಾಯ್ಸ್ ಸ್ಟೇಟಸ್ ಅಪ್‌ಡೇಟ್’ಸೇವೆಯನ್ನು ಪರಿಚಯಿಸುತ್ತಿದೆ.

ಈ ಹೊಸ ವೈಶಿಷ್ಟ್ಯದೊಂದಿಗೆ, ಬಳಕೆದಾರರು ವಾಟ್ಸ್‌ಆ್ಯಪ್‌ನಲ್ಲಿ ವಾಯ್ಸ್‌ ನೋಟ್‌ ರೆಕಾರ್ಡ್ ಮಾಡಿ ಸ್ಟೇಟಸ್ ಮೂಲಕ ಹಂಚಿಕೊಳ್ಳಬಹುದು ಎಂದು ವರದಿಗಳು ಹೇಳಿವೆ.

ವಾಯ್ಸ್‌ ಸ್ಟೇಟಸ್‌ ರೆಕಾರ್ಡ್ ಮಾಡಲು, ಸ್ಟೇಟಸ್‌ ಟ್ಯಾಬ್‌ಗೆ ನ್ಯಾವಿಗೇಟ್ ಮಾಡಿ, ಪೆನ್ಸಿಲ್ ಐಕಾನ್ ಅನ್ನು ಟ್ಯಾಪ್ ಮಾಡಿ ಮತ್ತು ಮೈಕ್ರೊಫೋನ್ ಐಕಾನ್ ಹೋಲ್ಡ್‌ ಮಾಡಬೇಕು.

ADVERTISEMENT

ವಾಯ್ಸ್‌ ಸ್ಟೇಟಸ್‌ ಗರಿಷ್ಠ ರೆಕಾರ್ಡಿಂಗ್ ಸಮಯ 30 ಸೆಕೆಂಡುಗಳು ಮತ್ತು ಬಳಕೆದಾರರು ತಮ್ಮ ಚಾಟ್‌ಗಳಿಂದ ಸ್ಟೇಟಸ್‌ಗೆ ಫಾರ್ವರ್ಡ್ ಮಾಡುವ ಆಯ್ಕೆಯನ್ನು ಸಹ ಹೊಂದಿರುತ್ತಾರೆ.

ಇದಲ್ಲದೆ, ಕಂಪನಿಯು ‘ಪಿಕ್ಚರ್-ಇನ್-ಪಿಕ್ಚರ್’ ವೈಶಿಷ್ಟ್ಯವನ್ನು ಹೊರತರುತ್ತಿದೆ. ಇದು ಬಳಕೆದಾರರು ತಮ್ಮ ವಾಟ್ಸ್‌ಆ್ಯಪ್‌ ಕರೆ ವೇಳೆ ವಿಡಿಯೊವನ್ನು ನಿಲ್ಲಿಸದೆ ಮಲ್ಟಿಟಾಸ್ಕ್ ಮಾಡಲು ಅನುಮತಿಸುತ್ತದೆ.

ಕೆಲವು ಬಳಕೆದಾರರಿಗೆ ಮುಂಬರುವ ವಾರಗಳಿಂದಲೇ ಈ ವೈಶಿಷ್ಟ್ಯಗಳು ಲಭ್ಯವಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.