ADVERTISEMENT

ದಾಂಡೇಲಿ: ಆಸ್ಪತ್ರೆಗೆ ಬಂದು ಗಾಯಕ್ಕೆ ಮುಲಾಮು ಹಚ್ಚಿಸಿಕೊಂಡ ಕೋತಿ, ವಿಡಿಯೊ ವೈರಲ್

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 14:44 IST
Last Updated 6 ಜೂನ್ 2020, 14:44 IST
ಗಾಯಗೊಂಡಿರುವ ಕೋತಿಗೆ ದಾಂಡೇಲಿಯ ನರ್ಸಿಂಗ್ ಹೋಂ ಹೊರಗೆ ಚಿಕಿತ್ಸೆ ನೀಡುತ್ತಿರುವುದು
ಗಾಯಗೊಂಡಿರುವ ಕೋತಿಗೆ ದಾಂಡೇಲಿಯ ನರ್ಸಿಂಗ್ ಹೋಂ ಹೊರಗೆ ಚಿಕಿತ್ಸೆ ನೀಡುತ್ತಿರುವುದು   
""

ಕಾರವಾರ: ಬೆನ್ನಿನ ಭಾಗಕ್ಕೆ ಗಾಯವಾಗಿದ್ದ ಕೋತಿಯೊಂದು ದಾಂಡೇಲಿಯ ನರ್ಸಿಂಗ್ ಹೋಂಗೆ ಬಂದು ಮುಲಾಮು ಹಚ್ಚಿಸಿಕೊಂಡ ವಿಡಿಯೊ ವೈರಲ್ ಆಗಿದೆ.

ಜನರ ಮಧ್ಯೆಯೇ ನಡೆದುಕೊಂಡು ಬಂದ ಕೋತಿಯು, ನರ್ಸಿಂಗ್ ಹೋಂನ ಬಾಗಿಲಿನ ಬಳಿ ಕುಳಿತಿತ್ತು. ಅದನ್ನು ಆಸ್ಪತ್ರೆಯ ಸಿಬ್ಬಂದಿ ಹಾಗೂ ಅಲ್ಲಿದ್ದ ಸಾರ್ವಜನಿಕರು ಓಡಿಸಲು ಪ್ರಯತ್ನಿಸಿದರೂ ಅದು ಹೋಗಲಿಲ್ಲ. ಬದಲಾಗಿ, ಬೆನ್ನಿಗಾದ ಗಾಯವನ್ನು ತನ್ನ ಕೈಯಿಂದ ತೋರಿಸಲು ಯತ್ನಿಸಿತು.

ಕೋತಿಯವೇದನೆಗೆ ಮಿಡಿದ ಕೆಲವರು, ಅದನ್ನು ಎತ್ತಿಕೊಂಡು ಕಟ್ಟೆಯ ಮೇಲೆ ಕೂರಿಸಿದರು. ಆಸ್ಪತ್ರೆಯ ಸಿಬ್ಬಂದಿಯಿಂದ ಮುಲಾಮು ಪಡೆದು ಗಾಯಕ್ಕೆ ಹಚ್ಚಿದರು. ಈ ವೇಳೆಯಲ್ಲಿ ಕೋತಿಯು ಯಾರನ್ನೂ ಬೆದರಿಸದೇ ಸುಮ್ಮನೆ ಕುಳಿತಿದ್ದು ನೋಡಿ ಅಲ್ಲಿದ್ದವರು ಅಚ್ಚರಿ ವ್ಯಕ್ತಪಡಿಸಿದರು. ಮುಲಾಮು ಹಚ್ಚಿಸಿಕೊಂಡ ಬಳಿಕವೇ ಅದು ಅಲ್ಲಿಂದ ಹೋಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.