ADVERTISEMENT

ನೋಡಿ: ಭಾರತೀಯ ನೆಲದ ಶಿಕ್ಷಣದಲ್ಲಿ ಮಾತ್ರ ಮೌಲ್ಯ ಶಿಕ್ಷಣ –ಬಾಲಕಿ ಮನಸ್ವಿ 

​ಪ್ರಜಾವಾಣಿ ವಾರ್ತೆ
Published 8 ಜೂನ್ 2021, 12:12 IST
Last Updated 8 ಜೂನ್ 2021, 12:12 IST
ಬಾಲಕಿ ಮನಸ್ವಿ
ಬಾಲಕಿ ಮನಸ್ವಿ    

ಉಡುಪಿ: ಕಾರ್ಕಳ ತಾಲೂಕಿನ ಕಲಂಬಾಡಿ ಪದವು ಸರ್ಕಾರಿ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ ಮನಸ್ವಿ ಕುಲಾಲ್ ಮೌಲ್ಯ ಶಿಕ್ಷಣ ಕುರಿತು ಮಾತನಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಬ್ರಿಟಿಷರ ಮೆಕಾಲೆ ಶಿಕ್ಷಣ ಪದ್ಧತಿಯೇ ನಮ್ಮಲ್ಲಿ ಮಾನವೀಯ ಮೌಲ್ಯಗಳ ಸವಕಳಿಗೆ ಕಾರಣ ಎಂದು ಮನಸ್ವಿ ಪ್ರತಿಪಾದಿಸಿದ್ದಾರೆ.

ಮಹರ್ಷಿ ಅರವಿಂದ್‌, ವಿವೇಕಾನಂದ, ರವೀಂದ್ರನಾಥ್‌ ಟಾಗೋರ್‌ರ ಶಿಕ್ಷಣ ಪದ್ಧತಿ ಜಾರಿಯಾಗಬೇಕಿತ್ತು ಎಂದು ಮನಸ್ವಿ ಕುಲಾಲ್ ಅಭಿಪ್ರಾಯಪಟ್ಟಿದ್ದಾರೆ. ‌ವೃದ್ಧಾಶ್ರಮದಲ್ಲಿ ಹಿರಿಯರನ್ನು ಭೇಟಿ ಮಾಡಿರುವ ಅನುಭವಗಳನ್ನು ಮನಸ್ವಿ ವಿಡಿಯೊದಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT

ಚಿಟಪಟ ಚಿನಕುರಳಿಯಂತಹ ಮನಸ್ವಿ ಮಾತುಗಳು ಇಷ್ಟವಾಗದೇ ಇರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.