ADVERTISEMENT

Video: ಜಸ್ಟ್‌ ಮ್ಯೂಸಿಕ್‌–14 | ಮತ್ತೆ ಹಾಡಿತು ಕೋಗಿಲೆ!

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2021, 0:51 IST
Last Updated 27 ಮಾರ್ಚ್ 2021, 0:51 IST

ಡಾ.ಗಂಗೂಬಾಯಿ ಹಾನಗಲ್‌ ಅವರು ತಮ್ಮ ಮಗಳು, ವಿದುಷಿ ಕೃಷ್ಣಾ ಹಾನಗಲ್‌ ಮೃತಪಟ್ಟ ನಂತರ ಹಾಡುವುದನ್ನೇ ನಿಲ್ಲಿಸಿದ್ದರು. ಸಹಗಾಯಕಿಯಾಗಿ 50 ವರ್ಷ ಜೊತೆಯಲ್ಲಿ ಹಾಡಿದ್ದ ಮಗಳ ಸಾವನ್ನು ಸಹಿಸಲು ಗಂಗಜ್ಜಿಗೆ ಸಾಧ್ಯವಾಗಲಿಲ್ಲ. 2 ವರ್ಷ ಅವರು ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿಲ್ಲ. 2006ರಲ್ಲಿ ಖ್ಯಾತ ತಬಲಾವಾದಕ ಪಂಡಿತ್‌ ರವೀಂದ್ರ ಯಾವಗಲ್‌ ಅವರ ಪ್ರೀತಿಯ ಕರೆಗೆ ಮಣಿದು‘ರಾಮಕಲಾ ವೇದಿಕೆ’ ಉದ್ಘಾಟನಾ ಸಮಾರಂಭದಲ್ಲಿ ಗಂಗಜ್ಜಿ ಅತಿಥಿಯಾಗಿ ಭಾಗವಹಿಸಿದ್ದರು. ಪಂಡಿತ್‌ ಹರಿಪ್ರಸಾದ್‌ ಚೌರಾಸಿಯಾ ಅವರ ಕೊಳಲುವಾದನ ಕಛೇರಿ ನಿಗದಿಯಾಗಿತ್ತು. ಚೌರಾಸಿಯಾ ಅವರ ಕರೆಗೆ ಓಗೊಟ್ಟು ಆ ಕಾರ್ಯಕ್ರಮದಲ್ಲಿ ಗಂಗಜ್ಜಿ ದುರ್ಗಾ ರಾಗದಲ್ಲಿ ನಾದಸುಧೆ ಹರಿಸಿದರು. ಗಂಗಜ್ಜಿ ನಾದಕ್ಕೆ ಹರಿಪ್ರಸಾದ್‌ ಚೌರಾಸಿಯಾ ಕೊಳಲಿನ ನಿನಾದ ಆನಂದದ ಹೊನಲು ಸೃಷ್ಟಿಸಿತು. ಕಿಕ್ಕಿರಿದು ತುಂಬಿದ್ದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾವುಕ ಸನ್ನಿವೇಶ ನಿರ್ಮಾಣವಾಗಿತ್ತು. ಮಗಳು ಮೃತಪಟ್ಟ 2 ವರ್ಷದ ನಂತರ ಗಂಗಜ್ಜಿ ಮತ್ತೆ ಹಾಡಿದರು. ‘ಮತ್ತೆ ಹಾಡಿತು ಕೋಗಿಲೆ’ ಎಂಬ ಭಾವ ಸೃಷ್ಟಿಯಾಯಿತು. ಆ ಗಾಯನ ಕೇಳಿದ ಪ್ರತಿಯೊಬ್ಬ ಸಂಗೀತ ಪ್ರೇಮಿಯ ಕಣ್ಣಾಲಿಗಳು ತುಂಬಿಬಂದಿದ್ದವು. ಆ ಘಟನೆ ಇಂದಿಗೂ ಐತಿಹಾಸಿಕ ದಾಖಲೆಯಾಗಿ ಉಳಿದಿದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.