ADVERTISEMENT

Video | ಶಫೀಕ್‌ ಖಾನ್‌: ಜೇನು ದಾಳಿಯಿಂದ ರಕ್ಷಿಸಿದ ಸ್ವೆಟರ್‌, ಶರ್ಟ್‌!

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2020, 1:22 IST
Last Updated 26 ಡಿಸೆಂಬರ್ 2020, 1:22 IST

ಉತ್ತರ ಪ್ರದೇಶದ ರೂಡಕಿ ಎಂಬಲ್ಲಿ ಉಸ್ತಾದ್‌ ಶಫೀಕ್‌ ಖಾನ್‌ ಅವರ ಸಿತಾರ್ ಕಛೇರಿ ನಿಗದಿಯಾಗಿರುತ್ತದೆ. ಅಲ್ಲಿ ವಿಪರೀತ ಚಳಿ ಇರುತ್ತದೆ. ಚಳಿಯಿಂದ ರಕ್ಷಣೆ ಮಾಡಿಕೊಳ್ಳಲು 4 ಶರ್ಟ್‌, ಸ್ವೆಟ್‌ ಧರಿಸಿ ಅದರ ಮೇಲೆ ಜುಬ್ಬಾ ಹಾಕಿಕೊಳ್ಳುತ್ತಾರೆ.

ಕಛೇರಿ ಇನ್ನೇನು ಆರಂಭ ಆಗಬೇಕು ಎನ್ನುವಷ್ಟರಲ್ಲಿ ಜೇನು ಹುಳುಗಳು ದಾಳಿ ಮಾಡುತ್ತವೆ. ಹುಳುಗಳ ಕಡಿತದಿಂದ ಕೆಲವರು ಅಸ್ವಸ್ಥರಾಗುತ್ತಾರೆ. ಶಫೀಕ್‌ ಖಾನ್‌ ಅವರು ಶಾಲು ಹೊದ್ದು ನೆಲದ ಮೇಲೆ ಮಲಗಿ ಬಿಡ್ತಾರೆ. ಕಛೇರಿ ರದ್ದಾಗುತ್ತೆ. ‌

ತನಗೆ ಏನೂ ಆಗಿಲ್ಲ ಎಂದುಕೊಂಡು ಶಫೀಕ್‌ ಖಾನ್‌ ನಿಟ್ಟುಸಿರು ಬಿಡುತ್ತಾರೆ. ಆದರೆ ಜುಬ್ಬಾ, ಸ್ವೆಟರ್‌ ತೆಗೆದಾಗ ಅವರಿಗೆ ತಿಳಿಯುತ್ತದೆ. ಅವರಿಗೆ 20 ಜೇನು ನೊಣಗಳು ಕಚ್ಚಿರುತ್ತವೆ. ಹುಳುಗಳ ಮುಳ್ಳುಗಳು ಸ್ವೆಟರ್‌, ಶರ್ಟ್‌ಗಳ ನಡುವೆ ಸಿಕ್ಕಿಹಾಕಿಕೊಂಡಿರುತ್ತವೆ. ಪ್ರಾಣ ರಕ್ಷಣೆ ಮಾಡಿದ ಚಳಿ, ಸ್ವೆಟರ್‌, ಶರ್ಟ್‌ಗಳಿಗೆ ಶಫೀಕ್‌ ಖಾನ್‌ ಥ್ಯಾಂಕ್ಸ್‌ ಹೇಳಿದರು. ಪ್ರತಿ ಚಳಿಗಾಲದಲ್ಲಿ ಈ ಘಟನೆ ಅವರಿಗೆ ಮತ್ತೆ ಮತ್ತೆ ಕಾಡುತ್ತದೆ.

ADVERTISEMENT

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಮತ್ತಷ್ಟು ವಿಡಿಯೊಗಳಿಗಾಗಿ: ಯೂಟ್ಯೂಬ್‌ ನೋಡಿ

ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ ವೆಬ್‌ಸೈಟ್‌ ನೋಡಿ

ಫೇಸ್‌ಬುಕ್‌: ಲೈಕ್ ಮಾಡಿ

ಟ್ವಿಟರ್‌: ಫಾಲೋ ಮಾಡಿ

ತಾಜಾ ಸುದ್ದಿಗಳಿಗಾಗಿ: ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.