ADVERTISEMENT

ನೋಡಿ: ಪಿಪಿಇ ಕಿಟ್ ಧರಿಸಿ ಮದುವೆಯಾದ ಜೋಡಿ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2021, 16:22 IST
Last Updated 27 ಏಪ್ರಿಲ್ 2021, 16:22 IST

ಭೋಪಾಲ್: ಅಂತರಿಕ್ಷದಲ್ಲಿ ಪ್ಯಾರಾಚೂಟ್‌ಗಳಲ್ಲಿ ತೇಲಿಕೊಂಡು.. ನೀರಿನಲ್ಲಿ ಮುಳುಗಿ ವಿವಾಹವಾದ ವೈರಲ್ ವಿಡಿಯೊಗಳನ್ನು ನೋಡಿದ್ದೀವಿ. ಇದೀಗ, ಮಧ್ಯಪ್ರದೇಶದ ಜೋಡಿಯೊಂದು ಪಿಪಿಇ ಕಿಟ್ ಹಾಕಿಕೊಂಡು ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿರಿಸಿದೆ. ಅಂದಹಾಗೆ, ಇದು ಕೋವಿಡ್ ಕಾಲದಲ್ಲಿ ಇರಲಿ ಅಂತಾ ಪಿಪಿಇ ಕಿಟ್ ಧರಿಸಿ ಆದ ಮದುವೆಯಲ್ಲ. ವರನಿಗೆ ಕೋವಿಡ್ ಪಾಸಿಟಿವ್ ಆಗಿದ್ದ ಹಿನ್ನೆಲೆಯಲ್ಲಿ ವಧುವರರಿಬ್ಬರೂ ಪಿಪಿಇ ಕಿಟ್ ಧರಿಸಿ ಹಸೆಮಣೆ ಏರಿದ್ದಾರೆ. ರತ್ನಂ ಪ್ರದೇಶ ಕಲ್ಯಾಣ ಮಂಟಪ ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದೆ. ಸ್ಥಳಿಯಾಡಳಿತದ ಅನುಮತಿ ಮೇರೆಗೆ ಈ ಮದುವೆ ನಡೆದಿದೆ. ಪೊಲೀಸರು ಮತ್ತು ಕುಟುಂಬ ಸದಸ್ಯರು ಮದುವೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.