ADVERTISEMENT

ಆಸ್ಟ್ರೇಲಿಯಾ: ಆ್ಯಂಟನಿ ಅಲ್ಬನೆಸ್‌ ನೂತನ ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 21 ಮೇ 2022, 19:48 IST
Last Updated 21 ಮೇ 2022, 19:48 IST
ಆ್ಯಂಟನಿ ಆಲ್ಬನೆಸ್
ಆ್ಯಂಟನಿ ಆಲ್ಬನೆಸ್   

ಸಿಡ್ನಿ: ಆಸ್ಟ್ರೇಲಿಯಾಸಂಸತ್ತಿಗೆ ನಡೆದ ಚುನಾವಣೆಯ ಪ್ರಾಥಮಿಕ ಫಲಿತಾಂಶ ಹೊರಬಿದ್ದಿದ್ದು, ಪ್ರಧಾನಿ ಸ್ಕಾಟ್‌ ಮಾರಿಸನ್‌ ನೇತೃತ್ವದ ಕನ್ಸರ್ವೇಟಿವ್‌ ಪಕ್ಷಕ್ಕೆ ಹಿನ್ನಡೆಯಾಗಿದೆ.

ವಿರೋಧ ಪಕ್ಷವಾಗಿದ್ದ ಲೇಬರ್ ಪಾರ್ಟಿ ಮುನ್ನಡೆ ಸಾಧಿಸಿದ್ದು,ಆ್ಯಂಟನಿ ಅಲ್ಬನೆಸ್‌ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವುದು ನಿಶ್ಚಿತವಾಗಿದೆ. ‘ತಮ್ಮ ನೇತೃತ್ವ ತಂಡವು ಸೋಮವಾರ ಪ್ರಮಾಣವಚನ ಸ್ವೀಕರಿಸಲಿದೆ’ ಎಂದೂ ಆ್ಯಂಟನಿ ಪ್ರಕಟಿಸಿದ್ದಾರೆ.

ಆ್ಯಂಟನಿ ಅಲ್ಬನೆಸ್‌ ನೇತೃತ್ವದ ಪಕ್ಷ 2007ರ ನಂತರ ಇದೇ ಮೊದಲಿಗೆ ಅಧಿಕಾರ ಗಳಿಸುವತ್ತ ಮುನ್ನಡೆದಿದೆ. ಅಲ್ಪಮತದ ಸರ್ಕಾರ ರಚನೆಯ ಸೂಚನೆ ಸ್ಪಷ್ಟವಾಗಿದೆ. ಹಿಂದೆ 2010–13ರಲ್ಲಿ ಅತಂತ್ರ ಸಂಸತ್ತು ರಚನೆಯಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.