ADVERTISEMENT

ಕಾಬೂಲ್‌ ವಿಮಾನ ನಿಲ್ದಾಣ: ಕೆಲಸಕ್ಕೆ ಮರಳಿದ ಮಹಿಳಾ ಸಿಬ್ಬಂದಿ

ಏಜೆನ್ಸೀಸ್
Published 12 ಸೆಪ್ಟೆಂಬರ್ 2021, 9:18 IST
Last Updated 12 ಸೆಪ್ಟೆಂಬರ್ 2021, 9:18 IST
ಅಫ್ಗಾನಿಸ್ತಾನದ ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ಕೆಲಸಕ್ಕೆ ಮರಳಿದ ಮಹಿಳಾ ಸಿಬ್ಬಂದಿ   –ಎಫ್‌ಪಿ ಚಿತ್ರ
ಅಫ್ಗಾನಿಸ್ತಾನದ ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ಕೆಲಸಕ್ಕೆ ಮರಳಿದ ಮಹಿಳಾ ಸಿಬ್ಬಂದಿ   –ಎಫ್‌ಪಿ ಚಿತ್ರ   

ಕಾಬೂಲ್‌: ಅಫ್ಗಾನಿಸ್ತಾನ ತಾಲಿಬಾನ್‌ ಕೈವಶವಾದ ಒಂದು ತಿಂಗಳೊಳಗೆ ಕಾಬೂಲ್‌ ವಿಮಾನ ನಿಲ್ದಾಣದ ಕೆಲ ಮಹಿಳಾ ಉದ್ಯೋಗಿಗಳು ಕೆಲಸಕ್ಕೆ ಮರಳಿದ್ದಾರೆ.

ಆಗಸ್ಟ್‌ 15ರಂದು ಅಫ್ಗನ್‌ನಲ್ಲಿ ತಾಲಿಬಾನ್‌ ಹಿಡಿತ ಸಾಧಿಸುವುದಕ್ಕೂ ಮೊದಲು 80ಕ್ಕೂ ಹೆಚ್ಚು ಮಹಿಳೆಯರು ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದರು. ಈ ಪೈಕಿ 12 ಮಹಿಳೆಯರು ಕೆಲಸಕ್ಕೆ ಮರಳಿದ್ದಾರೆ.

ಮುಂದಿನ ಆದೇಶದವರೆಗೆ ಕೆಲಸಗಳಿಗೆ ಹೋಗದಂತೆ ಮಹಿಳೆಯರಿಗೆ ತಾಲಿಬಾನ್‌ ಸೂಚಿಸಿತ್ತು. ಆದರೆ ಕೆಲವರಿಗೆ ಕೆಲಸಕ್ಕೆ ಮರಳಲು ಅನುಮತಿ ನೀಡಿತ್ತು.

ADVERTISEMENT

‘ಕಾಬೂಲ್‌ ವಿಮಾನ ನಿಲ್ದಾಣದ ಮುಖ್ಯ ದ್ವಾರದಲ್ಲಿ ಆರು ಮಹಿಳಾ ಸಿಬ್ಬಂದಿ ಶನಿವಾರ ಕಾರ್ಯನಿರ್ವಹಿಸುತ್ತಿದ್ದರು. ದೇಶೀಯ ವಿಮಾನದಲ್ಲಿ ಆಗಮಿಸಿದ ಮಹಿಳಾ ಪ್ರಯಾಣಿಕರ ಪರಿಶೀಲನಾ ಕಾರ್ಯದಲ್ಲಿ ಅವರು ತೊಡಗಿದ್ದರು’ ಎಂದು ಮೂಲಗಳು ಹೇಳಿವೆ.

‘ನನ್ನು ಕುಟುಂಬವನ್ನು ನೋಡಿಕೊಳ್ಳಲು ನನಗೆ ಹಣದ ಅವಶ್ಯಕತೆಯಿದೆ’ ಎಂದು 35 ವರ್ಷದ ರಾಬಿಯಾ ಜಮಾಲ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.