ADVERTISEMENT

ರಿಚರ್ಡ್ ಬ್ರಾನ್ಸನ್ ಜೊತೆ ಬಾಹ್ಯಾಕಾಶ ತಲುಪಿ ಬಂದ ಶಿರೀಷಾ ಬಂಡ್ಲ ಯಾರು?

ಶಿರೀಷಾ ಹೊತ್ತು ಕುಣಿದ ಬ್ರಾನ್ಸನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜುಲೈ 2021, 18:40 IST
Last Updated 12 ಜುಲೈ 2021, 18:40 IST
ರಿಚರ್ಡ್ ಬ್ರಾನ್ಸನ್ ಜೊತೆ ಶಿರೀಷಾ ಬಂಡ್ಲ (ಮಧ್ಯದಲ್ಲಿ) ಎ.ಎಫ್.ಪಿ ಚಿತ್ರ
ರಿಚರ್ಡ್ ಬ್ರಾನ್ಸನ್ ಜೊತೆ ಶಿರೀಷಾ ಬಂಡ್ಲ (ಮಧ್ಯದಲ್ಲಿ) ಎ.ಎಫ್.ಪಿ ಚಿತ್ರ   

ವಾಷಿಂಗ್ಟನ್‌; ಖ್ಯಾತ ಉದ್ಯಮಿ, ಚಿಂತಕ, ಸಾಹಸಿ ರಿಚರ್ಡ್ ಬ್ರಾನ್ಸನ್ ಅವರು ಕಳೆದ ಎರಡು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಅವರು ತಮ್ಮ ಬಹುದಿನದ ಕನಸನ್ನು ನನಸು ಮಾಡಿಕೊಂಡು ಅದ್ವಿತೀಯ ಪರಾಕ್ರಮ ಮೆರೆದಿದ್ದಾರೆ‌.

ರಿಚರ್ಡ್ ಬ್ರಾನ್ಸನ್ ಬಾಹ್ಯಾಕಾಶಕ್ಕೆ ಹೋಗಿ ಯಶಸ್ವಿಯಾಗಿ ಮರಳಿ ಭೂಮಿಗೆ ಬಂದಿದ್ದಾರೆ. ಅವರು ತಮ್ಮ ಇತರ ಐದು ಸಹಚರರೊಡನೆ ಈ ಯಾನ ಕೈಗೊಂಡು ಬಂದಿದ್ದಾರೆ. ಇದರಲ್ಲಿ ಭಾರತೀಯ ಸಂಜಾತೆ ಅಮೆರಿಕದ ಗಗನಯಾನಿ ಶಿರೀಷಾ ಬಂಡ್ಲ ಅವರು ಜೊತೆಯಾಗಿದ್ದರು.

ಭಾನುವಾರ ವರ್ಜಿನ್ ಗ್ಯಾಲಾಕ್ಟಿಕ್ ಯುನಿಟಿ 22 ಗಗನ ನೌಕೆಯ ಮೂಲಕ ಬ್ರಾನ್ಸನ್ ತಂಡ ಬಾಹ್ಯಾಕಾಶ ತಲುಪಿ ನ್ಯೂ ಮೆಕ್ಸಿಕೋಕ್ಕೆ ಬಂದು ತಲುಪಿದರು. ಈ ವೇಳೆ ಬ್ರಾನ್ಸನ್ ತಮ್ಮ ಅಪಾರ ಸಂತೋಷವನ್ನು ಹಂಚಿಕೊಂಡರು. ಈ ವೇಳೆ ಅವರು ಶಿರೀಷಾ ಬಂಡ್ಲ ಅವರನ್ನು ತಮ್ಮ ಹೆಗಲ ಮೇಲೆ ಹೊತ್ತು ಕುಣಿದು ಕುಪ್ಪಳಿಸಿದರು‌.

ADVERTISEMENT

ಶಿರೀಷಾ ಬಂಡ್ಲ ಅವರು ಆಂಧ್ರಪ್ರದೇಶದ ಕಡಪಾ ಮೂಲದವರಾಗಿದ್ದು ಅಮೆರಿಕದ ಗಗನಯಾನಿಯಾಗಿದ್ದಾರೆ. ಸದ್ಯ ಅವರು ವರ್ಜಿನ್ ಸಂಸ್ಥೆಯಲ್ಲಿ ಗಗನಯಾನಕ್ಕೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿದ್ದಾರೆ. ಕಲ್ಪನಾ ಚಾವ್ಲಾ, ಸುನೀತಾ ವಿಲಿಯಮ್ಸ್ ನಂತರ ಭಾರತದ ಮೂರನೇ ಗಗನಯಾನಿ ಶಿರಿಶಾ ಆಗಿದ್ದಾರೆ.

ಭೂಮಿಯಿಂದ ಸುಮಾರು 85 ಕಿ.ಮೀ ಎತ್ತರದವರೆಗೂ ವಿಎಸ್‌ಎಸ್‌ ಯೂನಿಟಿ ನೌಕೆ ತಲುಪಿತ್ತು. ಅಲ್ಲಿ ಉಂಟಾಗುವ ತೇಲುವ ಅನುಭವ ಮತ್ತು ಭೂಮಿಯ ಗೋಳಾಕಾರವನ್ನು ಕಣ್ತುಂಬಿಕೊಳ್ಳುವ ವಿಶೇಷ ಅವಕಾಶವನ್ನು ರಿಚರ್ಡ್‌ ಹಾಗೂ ಅವರ ತಂಡ ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.