ADVERTISEMENT

ಕಚ್ಚುವೆ ಏಕೆ ಸೊಳ್ಳೆಪ್ಪಾ...

ಡಾ.ಕರವೀರಪ್ರಭು ಕ್ಯಾಲಕೊಂಡ
Published 4 ಫೆಬ್ರುವರಿ 2017, 19:30 IST
Last Updated 4 ಫೆಬ್ರುವರಿ 2017, 19:30 IST
ಕಚ್ಚುವೆ ಏಕೆ ಸೊಳ್ಳೆಪ್ಪಾ...
ಕಚ್ಚುವೆ ಏಕೆ ಸೊಳ್ಳೆಪ್ಪಾ...   

ಸಂಜೆಯ ಸಮಯದಿ
ಸೊಯ್‌ ಸೊಯ್‌ ಸಪ್ಪಳ
ಮಾಡುತ ಬೆರುವೆ ಯಾಕಪ್ಪಾ
ಓದುತ ಕುಳಿತ
ಮಕ್ಕಳ ಪಕ್ಕನೆ
ಕಚ್ಚುವೆ ಏಕೆ ಸೊಳ್ಳೆಪ್ಪಾ...

ನಿಂತ ನೀರಲಿ
ಮರಿಗಳ ಮಾಡುವ
ಗುಟ್ಟನು ಬಿಡಿಸಿ ಹೇಳಪ್ಪಾ
ಜುಳು ಜುಳು ಹರಿಯುವ
ಸ್ವಚ್ಛನ ನೀರನು
ಕಂಡರೆ ಭಯವು ಯಾಕಪ್ಪಾ

ಗಡಗಡ ಗಡಗಡ
ನಡುಗುವ ಜಡ್ಡನು
ನೀಡುವೆ ಕಚ್ಚಿ ನಮಗಪ್ಪಾ
ಕಹಿ ಕಹಿ ಗುಳಿಗೆಯ
ನುಂಗಲು ನಮ್ಮನು
ಬಿಡುವುದು ಜಡ್ಡು ನೋಡಪ್ಪಾ

ADVERTISEMENT

ಗುರುಗುರು ನಿದ್ದೆಯ
ಮಾಡಲು ಜನರಿಗೆ
ಸೊಳ್ಳೆಯ ಪರದೆ ಬೇಕಪ್ಪಾ
ಸೊಳ್ಳೆಯ ಪರದೆಯ
ಒಳಗಡೆ ನುಗ್ಗಲು
ಆಗದು ನಿನಗೆ ಯಾಕಪ್ಪಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.