ADVERTISEMENT

ಕಲಾಂ ಕನಸು

​ಪ್ರಜಾವಾಣಿ ವಾರ್ತೆ
Published 6 ಮೇ 2017, 19:30 IST
Last Updated 6 ಮೇ 2017, 19:30 IST
ಕಲಾಂ ಕನಸು
ಕಲಾಂ ಕನಸು   

ಕಲಾಂ ಕನಸು


ಅಬ್ದುಲ್ ಕಲಾಂ ಬಾಲ್ಯದಿಂದಲೂ ಹಾರುವ ಕನಸು ಕಂಡವರು. ಭಾರತೀಯ ವಾಯುಪಡೆಯ ಪೈಲಟ್ ಆಗಬೇಕೆನ್ನುವುದು ಅವರ ಕನಸಾಗಿತ್ತು. ದೈಹಿಕ ಪರೀಕ್ಷೆಯಲ್ಲಿ ಅವರು ಪಾಸಾಗಲಿಲ್ಲ.

ರಾಷ್ಟ್ರಪತಿ ಆದಾಗ, ಈಡೇರದ ತಮ್ಮ ಬಯಕೆಯನ್ನು ವಾಯುಪಡೆಯ ಮುಖ್ಯಸ್ಥರಿಗೆ ಹೇಳಿದರು. ಅದನ್ನು ಕೇಳಿ ವಾಯುಪಡೆಯ ಮುಖ್ಯಸ್ಥರು ತರಬೇತಿ ಕೊಡಿಸುವ ವ್ಯವಸ್ಥೆ ಮಾಡಿದರು. 2006ರ ಜೂನ್‌ನಲ್ಲಿ ಕಲಾಂ ಫೈಟರ್ ವಿಮಾನವನ್ನು 40 ನಿಮಿಷ ಚಾಲನೆ ಮಾಡಿದರು.

ADVERTISEMENT

**

ನರಭಕ್ಷಕ ಸಸ್ಯಗಳು

ಬರಹಗಾರರು ನರಭಕ್ಷಕ ಸಸ್ಯಗಳನ್ನು ಸೃಷ್ಟಿಸಿದರು. ಕಥಾಹಂದರ ರೋಚಕಗೊಳ್ಳಲಿ ಎನ್ನುವುದು ಅವರ ಉದ್ದೇಶವಾಗಿತ್ತು. 

‘ಹ್ಯಾರಿ ಪಾಟರ್ ಅಂಡ್ ದಿ ಹಾಫ್ ಬ್ಲಡ್ ಪ್ರಿನ್ಸ್’ನಲ್ಲಿ ಹ್ಯಾರಿ, ರಾನ್ ಹಾಗೂ ಹರ್ಮಿಯೋನ್ ಮೂವರೂ ‘ಸ್ನ್ಯಾರ್ಗಾಲುಫ್‌’ ಎಂಬ ಮರದ ಬೊಡ್ಡೆಯ ಸವಾಲು ಎದುರಿಸುವ ಪ್ರಸಂಗವಿದೆ. ನರಬಲಿ ಹಿಡಿಯಲು ಅದು ಮುಳ್ಳುಗಳನ್ನು ಹೊರಚಿಮ್ಮುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.