ADVERTISEMENT

ಪ್ರಾಣಿ ಜಗತ್ತು: ನಿಮಗೆಷ್ಟು ಗೊತ್ತು?

ಎನ್.ವಾಸುದೇವ್
Published 24 ಜೂನ್ 2017, 19:30 IST
Last Updated 24 ಜೂನ್ 2017, 19:30 IST
ಪ್ರಾಣಿ ಜಗತ್ತು: ನಿಮಗೆಷ್ಟು ಗೊತ್ತು?
ಪ್ರಾಣಿ ಜಗತ್ತು: ನಿಮಗೆಷ್ಟು ಗೊತ್ತು?   

1. ಸ್ತನಿ ವರ್ಗದ ಕೆಲವಾರು ಪ್ರಾಣಿಗಳು ಪಡೆದಿರುವ ಶಿರಾಲಂಕಾರದ ಎರಡು ಪ್ರಧಾನ ವಿಧಗಳಾದ "ಕೊಂಬು ಮತ್ತು ಕವಲು ಕೊಂಬು " ಕ್ರಮವಾಗಿ ಚಿತ್ರ-1 ಮತ್ತು ಚಿತ್ರ-2 ರಲ್ಲಿವೆ. ಈ ಕೆಳಗೆ ಹೆಸರಿಸಿರುವ ಪ್ರಾಣಿಗಳಲ್ಲಿ ಕೊಂಬಿನ, ಕವಲುಕೊಂಬಿನ ಮತ್ತು ಕೊಂಬೇ ಇಲ್ಲದ ಪ್ರಾಣಿಗಳನ್ನು ಗುರುತಿಸಬಲ್ಲಿರಾ?
ಅ. ವೈಲ್ಡ್ ಬೀಸ್ಟ್
ಬ. ಆನೆ
ಕ. ಜೀಬ್ರಾ
ಡ. ಕ್ಯಾರಿಬೂ
ಇ. ಗೆಜ಼ೆಲ್
ಈ. ಎಲ್ಕ್
ಉ. ಆರಿಕ್ಸ್
ಟ. ಮೂಸ್

2. ಹಣ್ಣನ್ನು ತಿನ್ನುತ್ತಿರುವ ಹಕ್ಕಿಯೊಂದು ಚಿತ್ರ-3 ರಲ್ಲಿದೆ. ಹಕ್ಕಿಗಳ ಈ ಕ್ರಿಯೆಯಿಂದ ನಿಸರ್ಗದಲ್ಲಿ ಸಸ್ಯಗಳಿಗಾಗುತ್ತಿರುವ ಮಹತ್ವದ ಪ್ರಯೋಜನ ಏನು?
ಅ. ಪರಾಗ ಸ್ಪರ್ಶ
ಬ. ಪಿಡುಗು ನಿವಾರಣೆ
ಕ. ಬೀಜ ಪ್ರಸಾರ
ಡ. ಪೋಷಕಾಂಶಗಳ ಪೂರೈಕೆ

3. ಸೂಕ್ಷ್ಮ ದರ್ಶಕದ ಮೂಲಕ ಪಡೆದಿರುವ ವೃಕ್ಷಕಾಂಡವೊಂದರ ವಿಸ್ತೃತ ರೂಪದ ಚಿತ್ರಣ ಚಿತ್ರ-4 ರಲ್ಲಿದೆ. ಈ ದೃಶ್ಯ ಇವುಗಳಲ್ಲಿ ಯಾವುದು?

ADVERTISEMENT

ಅ. ವೃಕ್ಷದುಂಗುರಗಳು
ಬ. ತೊಗಟೆಯ ಸ್ವರೂಪ
ಕ. ಚೇಗು ( ಹಾರ್ಟ್ ವುಡ್ )
ಡ. ಕಾಂಡದ ಜಲವಾಹಕ
ಜೀವಕೋಶಗಳು

4. ನಮ್ಮ ದೇಶದ ರಾಷ್ಟ್ರ ಪಕ್ಷಿ ‘ನವಿಲು' ಚಿತ್ರ-5ರಲ್ಲಿದೆ. ಭಾರತವನ್ನು ಬಿಟ್ಟು ಈ ಕೆಳಗಿನ ಬೇರೆ ಯಾವ ಯಾವ ದೇಶಗಳಲ್ಲಿ ನವಿಲುಗಳು ನೈಸರ್ಗಿಕವಾಗಿ ನೆಲಸಿವೆ?

ಅ. ಶ್ರೀಲಂಕಾ
ಬ. ಕೆನಡ
ಕ. ಚೀನಾ
ಡ. ಥಾಯ್ ಲ್ಯಾಂಡ್
ಇ. ಅರ್ಜೆಂಟೈನ
ಈ. ಮಲೇಶಿಯಾ
ಉ. ದಕ್ಷಿಣ ಆಫ್ರಿಕ
ಟ. ಈಜಿಪ್ಟ್

5. ಆಕರ್ಷಕ ಪ್ರಣಯ ನರ್ತನದಲ್ಲಿ ಮಗ್ನವಾಗಿರುವ ಹಕ್ಕಿಜೋಡಿಯೊಂದು ಚಿತ್ರ-6 ರಲ್ಲಿದೆ.
ಅ. ಈ ಹಕ್ಕಿ ಯಾವುದು ?
ಬ. ಈ ಹಕ್ಕಿಯ ವಿಶ್ವ ದಾಖಲೆ ಏನು ?

6. ದೇಹ ರಕ್ಷಣೆಗೆಂದು ದೃಢವಾದ ಚರ್ಮದ ಗಟ್ಟಿ ಕವಚವನ್ನು ನೈಸರ್ಗಿಕವಾಗಿಯೇ ಪಡೆದಿರುವ ಪ್ರಾಣಿಯೊಂದು ಚಿತ್ರ- 7 ರಲ್ಲಿದೆ. ಯಾವುದು ಈ ಪ್ರಾಣಿ, ಗೊತ್ತೇ ?
ಅ. ಪ್ಯಾಂಗೋಲಿನ್
ಬ. ಮುಳ್ಳು ಹಂದಿ
ಕ. ಇರುವೆ ಭಕ್ಷಕ
ಡ. ಆರ್ಮಡಿಲ್ಲೋ

7. ಆಹಾರಕ್ಕೂ, ಬದುಕಿಗೂ ಸಾಗರವನ್ನೇ ಆಶ್ರಯಿಸಿರುವ ಹಲವಾರು ಪ್ರಸಿದ್ಧ ಪ್ರಾಣಿಗಳಲ್ಲೊಂದಾದ " ಸೀಲ್" ಚಿತ್ರ-8 ರಲ್ಲಿದೆ. ಸೀಲ್ ಗಳಂತೆಯೇ ಈ ಪಟ್ಟಿಯಲ್ಲಿರುವ ಇತರ ಸಾಗರ ಪ್ರಾಣಿಗಳನ್ನು ಗುರುತಿಸಿ:
ಅ. ವಾಲ್ರಸ್
ಬ. ಲೀಮರ್
ಕ. ಡ್ಯೂಗಾನ್
ಡ. ಹಿಮ ಕರಡಿ
ಇ. ಬೆಲ್ಯೂಗಾ
ಈ. ಕ್ಯಾಪಿಬ್ಯಾರಾ
ಉ. ಪ್ಲಾಟಿಪಸ್
ಟ. ಮ್ಯಾನೆಟೀ

8. ಕಡಲಲ್ಲಿ ಉಂಗುರಾಕಾರದ ಕೋಟೆ ಗೋಡೆಯಂತೆ ನಿರ್ಮಾಣಗೊಂಡು " ದ್ವೀಪ " ವಾಗಿ ಉಳಿಯುವ ಜೀವಿಮೂಲ ನಿರ್ಮಿತಿ "ಎಟಾಲ್" ಚಿತ್ರ-9 ರಲ್ಲಿದೆ. ಇಂತಹ ನಿರ್ಮಾಣಗಳಿಗೆ ಕಾರಣವಾದ ಪ್ರಾಣಿ ಯಾವುದು ?
ಅ. ಬೀವರ್
ಬ. ಮೃದ್ವಂಗಿ
ಕ. ಹವಳದ ಜೀವಿ
ಡ. ಸ್ಟಿಕಲ್ ಬ್ಯಾಕ್ ಮೀನು

9. ವಿಶಿಷ್ಟ ಜಲ ಸಸ್ಯದಲ್ಲಿ ಅರಳಿರುವ ವಿಖ್ಯಾತ ಬೃಹತ್ ಕುಸುಮ ಚಿತ್ರ-10 ರಲ್ಲಿದೆ. ಈ ಹೂವು ಯಾವುದು ಗುರುತಿಸಿ:
ಅ. ಲಿಲ್ಲೀ
ಬ. ತಾವರೆ
ಕ. ಟ್ಯೂಲಿಪ್
ಡ. ರಾಫ್ಲೀಸಿಯಾ

10. ಕೀಟ ಸಾಮ್ರಾಜ್ಯದಲ್ಲಿ ಲಕ್ಷಾಂತರ ಪ್ರಭೇದಗಳನ್ನು ಹೊಂದಿರುವ ದುಂಬಿ ವರ್ಗದ ವಿಸ್ಮಯಕರ ಪ್ರಭೇದವೊಂದು ಚಿತ್ರ-11 ರಲ್ಲಿದೆ. ರೂಪಾನ್ವಯ ಹೆಸರನ್ನೇ ಪಡೆದಿರುವ ಈ ದುಂಬಿಯ ಹೆಸರೇನು ಗೊತ್ತೇ?
ಅ. ಸಗಣಿ ದುಂಬಿ
ಬ. ಜಿರಾಫ್ ದುಂಬಿ
ಕ. ಕಡವೆ ದುಂಬಿ
ಡ. ಆನೆ ದುಂಬಿ

11. ಸುಪ್ರಸಿದ್ಧ ನಿಶಾಚರ ಪ್ರಾಣಿ " ಗೂಬೆ " ಚಿತ್ರ-12 ರಲ್ಲಿದೆ. ಈ ಕೆಳಗೆ ಹೆಸರಿಸಿರುವ ಪ್ರಾಣಿಗಳಲ್ಲಿ ನಿಶಾಚರರು ಯಾವುವು?
ಅ. ಲೋರಿಸ್
ಬ. ಬ್ಯಾಡ್ಜರ್
ಕ. ಮೊಸಳೆ
ಡ. ಒಪಾಸಂ
ಇ. ಕೂವಾಲೇ
ಈ. ಇಂಪಾಲಾ
ಉ. ಕಪ್ಪೆ
ಟ. ರಣಹದ್ದು

12. ಚಿತ್ರ-13 ರಲ್ಲಿರುವ ಸಸ್ಯವನ್ನು - ವಿಶೇಷವಾಗಿ ಅದರ ಎಲೆಗಳನ್ನು- ಗಮನಿಸಿ. ಈ ವಿಶೇಷ ಸಸ್ಯವನ್ನು ಗುರುತಿಸಬಲ್ಲಿರಾ?
ಅ. ಕಳ್ಳಿ ಗಿಡ
ಬ. ಬ್ರಹ್ಮ ಕಮಲ
ಕ. ಎಕ್ಕದ ಗಿಡ
ಡ. ಸಿಲ್ವರ್ ಸ್ವೋರ್ಡ್ ( ಬೆಳ್ಳಿ ಕತ್ತಿ)

13. ಚಿತ್ರ-14 ರಲ್ಲಿರುವ ಸೋಜಿಗದ ಸೃಷ್ಟಿಗಳನ್ನು ಗಮನಿಸಿ. ವಿಸ್ಮಯದ ರೂಪದ ಈ ಮರಿಹುಳುಗಳು ಕೆಳಗೆ ಹೆಸರಿಸಿರುವ ಯಾವ ಪ್ರಾಣಿಗೆ ಸಂಬಂಧಿಸಿವೆ - ತಿಳಿಸಬಲ್ಲಿರಾ?
ಅ. ದುಂಬಿ
ಬ. ಚಿಟ್ಟೆ-ಪತಂಗ
ಕ. ಮಿಡತೆ
ಡ. ಶತಪದಿ

14. ಹೊಸ ಜಗತ್ತಿನ ಪುಟ್ಟ ಮಂಗ ವಿಧವೊಂದು ಚಿತ್ರ-15 ರಲ್ಲಿದೆ. ಅದೇ ಪ್ರದೇಶದ ಈ ಮಂಗಗಳಲ್ಲಿ ಚಿತ್ರದಲ್ಲಿರುವ ಮಂಗ ಯಾವುದು, ಪತ್ತೆ ಮಾಡಿ:
ಅ. ಜೇಡ ಕೋತಿ
ಬ. ಅಳಿಲು ಮಂಗ
ಕ. ಮಾರ್ಮಾಸೆಟ್
ಡ. ಗೂಬೆ ಮಂಗ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.