ADVERTISEMENT

ಮೌಲ್ಯ ತಿಳಿಯದೇ...

ಕೆ.ಎಸ್.ಪಾರ್ಥಸಾರಥಿ
Published 9 ಸೆಪ್ಟೆಂಬರ್ 2017, 19:30 IST
Last Updated 9 ಸೆಪ್ಟೆಂಬರ್ 2017, 19:30 IST
ಚಿತ್ರ: ಈಶ್ವರ ಬಡಿಗೇರ
ಚಿತ್ರ: ಈಶ್ವರ ಬಡಿಗೇರ   

ಇಂದು ಮಾತ್ರ ನನ್ನಿಂದ ಆಗೋಲ್ಲಪ್ಪೋ...

ಸಾಕಾಯಿತು ಜೀವನವೆಲ್ಲ ನೀ ಹೇಳಿದಂತೆ ಮಾಡಿ

ಆ ಹೆಬ್ಬಂಡೆ ಮೆದುಳುಗಳೊಳಗೆ

ADVERTISEMENT

ಸಂಚಲನವೇ ಆಗಲಿಲ್ಲ

ಸುತ್ತಿಗೆ ಹುಡುಕುತ್ತಿದ್ದೇನೆ

ಹುಡುಕುತ್ತಿದ್ದೇನೆ

ಏಕೆಂದರೆ

ಅದು ಬೇಡವೆಂದು ಎಲ್ಲೋ ಬಿಸಾಕಿದ್ದೆ

ತುಕ್ಕುಹಿಡಿದಿದೆಯೋ ಏನೋ

ಇಲ್ಲ ರಾಜೇಂದ್ರ!

ಆಯುಧಗಳನ್ನು ಹರಿತವಾಗೇ ಇಟ್ಟುಕೊಂಡಿರಬೇಕು

ಕೈಗೆ ಸಿಗುವಂತೆ

ಎಲ್ಲ ವಿಫಲವಾದಾಗ

ಬೇಕಾಗಬಹುದೆಂದು

ಆತ್ಮರಕ್ಷಣೆಗಾದರೂ...ಇನ್ನಷ್ಟು ಕೆಲಸ ಮಾಡಲು ಬದುಕುಳಿಯಬೇಕೆಂದು

ಜೈಮುನೀ ಮುನಿ

ಲೋಕಕ್ಕೆ ವ್ಯಾಕರಣ ನೀಡಿದ ತಪಿಸಿ

ತಪಿಸುತ್ತಲೇ ಘನ ಗೊಂಡಾರಣ್ಯದಲಿ

ಹಿಂಸೆ ಅರಿಯದೆ

ಕಣ್ಣು ಮುಚ್ಚಿ ತಪೋನಿರತನಾಗಿದ್ದ

ಆದರೆ ಆ ಮೃಗಕ್ಕೆ ಅದರ ಹಸಿವಿಗೆ

ಅವನ ಮೆದುಳಿನ ಮೌಲ್ಯ

ತಿಳಿಯದೇ ತನ್ನ ಹಸಿವಿಂಗಿಸಿಕೊಂಡಿತು

ಅವನ ತಲೆಯ ಸವರಿ ಸ್ವಾದಿಷ್ಟವಾಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.