ADVERTISEMENT

ಅಮೆರಿಕ ಪ್ರವಾಸಿಗರಿಗೆ ಸ್ಥಳೀಯವಾಗಿಯೇ ವೀಸಾ: ಚಿಂತನೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2014, 19:30 IST
Last Updated 21 ಸೆಪ್ಟೆಂಬರ್ 2014, 19:30 IST

ನವದೆಹಲಿ (ಪಿಟಿಐ): ಭಾರತಕ್ಕೆ ಭೇಟಿ ನೀಡುವ ಅಮೆರಿಕದ ಪ್ರವಾಸಿಗರಿಗೆ ಇಲ್ಲಿಗೆ ಬಂದಿಳಿಯುತ್ತಿದ್ದಂತೆಯೇ ವೀಸಾ ನೀಡುವ ವ್ಯವಸ್ಥೆ ಜಾರಿಗೊಳಿಸಲು ಕೇಂದ್ರ ಸರ್ಕಾರ ಉತ್ಸುಕವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಮುಂದಿನ ವಾರದ ಅಮೆರಿಕ ಭೇಟಿ ಸಂದರ್ಭದಲ್ಲಿ ಇದನ್ನು ಪ್ರಕಟಿಸುವ ನಿರೀಕ್ಷೆ ಇದೆ.

ಪ್ರಧಾನಿಯವರ ಅಮೆರಿಕ ಭೇಟಿ ವೇಳೆಗೆ ಈ ಸಂಬಂಧ ಎಲ್ಲಾ ವಿಧಿ ವಿಧಾನಗಳನ್ನು ಮುಗಿಸಲು ವಿದೇಶಾಂಗ ಸಚಿವಾಲಯ ಶತಾಯಗತಾಯ ಪ್ರಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಭಾರತದಲ್ಲಿ ವಸತಿ ವ್ಯವಸ್ಥೆಗೆ ಮನೆಯನ್ನು ಹೊಂದಿಲ್ಲದ ಅಥವಾ ಇಲ್ಲಿ ಉದ್ಯೋಗವನ್ನೂ ಹೊಂದಿಲ್ಲದ ಪ್ರವಾಸದ ಏಕಮಾತ್ರ ಉದ್ದೇಶದಿಂದ ಬರುವ ಅಮೆರಿಕದ ಪ್ರವಾಸಿಗರಿಗೆ ಇದರಿಂದ ಅನುಕೂಲವಾಗಲಿದೆ.

ಈ ವೀಸಾವು 30 ದಿನಗಳವರೆಗೆ ಮಾನ್ಯತೆ ಹೊಂದಿರುತ್ತದೆಂದು ಹೇಳಲಾಗಿದೆ. ಪ್ರವಾಸಿಗರಿಗೆ ಸ್ಥಳೀಯವಾಗಿಯೇ ವೀಸಾ ನೀಡುವ ಪದ್ಧತಿಯನ್ನು ಭಾರತವು 2010ರ ಜನವರಿಯಲ್ಲಿ ಜಾರಿಗೊಳಿಸಿತು. ಆರಂಭದಲ್ಲಿ ಐದು ದೇಶಗಳ ಜನರಿಗೆ ನೀಡಲಾಗುತ್ತಿದ್ದ ಈ ಮಾದರಿಯ ವೀಸಾವನ್ನು ಈಗ 11 ರಾಷ್ಟ್ರಗಳ ಪ್ರವಾಸಿಗರಿಗೆ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT