ADVERTISEMENT

ಇಸುಜು ಎಸ್‌ಯುವಿ ‘ಎಂಯು–ಎಕ್ಸ್‌ ’ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 21 ಮೇ 2017, 19:36 IST
Last Updated 21 ಮೇ 2017, 19:36 IST
ಇಸುಜು ಎಸ್‌ಯುವಿ ‘ಎಂಯು–ಎಕ್ಸ್‌ ’ಬಿಡುಗಡೆ
ಇಸುಜು ಎಸ್‌ಯುವಿ ‘ಎಂಯು–ಎಕ್ಸ್‌ ’ಬಿಡುಗಡೆ   

ಬೆಂಗಳೂರು: ಜಪಾನಿನ ಇಸುಜು ಮೋಟಾರ್ಸ್ ಇಂಡಿಯಾ ಬಹುನಿರೀಕ್ಷಿತ ಎಸ್‌ಯುವಿ ‘ಎಂಯು–ಎಕ್ಸ್‌’ನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದೆ.

‘ಶಕ್ತಿಶಾಲಿ ಎಂಜಿನ್‌, ಭಾರಿ ಗಾತ್ರದ ಸೇನಾ ಟ್ರಕ್‌ ಮತ್ತು ಸರಕು ಸಾಗಣೆಯಂತಹ ವಾಣಿಜ್ಯ ವಾಹನ ತಯಾರಿಸುತ್ತಿದ್ದ ಇಸುಜು ಎಸ್‌ಯುವಿ ತಯಾರಿಸುವ ಸಾಹಸಕ್ಕೆ ಕೈಹಾಕಿ ಯಶಸ್ವಿಯಾಗಿದೆ’ ಎಂದು ಸಂಸ್ಥೆಯ ಉಪ ವ್ಯವಸ್ಥಾಪಕ ನಿರ್ದೇಶಕ ಹಿತೋಶಿ ಕೋನೊ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಎಲ್ಲ ಬಗೆಯ ಭೂಪ್ರದೇಶಗಳಲ್ಲೂ ಸರಾಗವಾಗಿ ಸಂಚರಿಸುವುದು ಈ ವಾಹನದ ವಿಶೇಷತೆ’ ಎಂದು ಬಣ್ಣಿಸಿದರು.
‘ಆಂಧ್ರದ  ಶ್ರೀಸಿಟಿಯಲ್ಲಿರುವ ಹೊಸ ವಾಹನ ತಯಾರಿಕಾ ಘಟಕದಲ್ಲಿ ಇಸುಜು ವಾಹನ ತಯಾರಿಸಲಾಗುತ್ತದೆ’ ಎಂದು ಕಂಪೆನಿ ಸಿಇಒ ಹಿರೋಶಿ ನಕಾಗವ ತಿಳಿಸಿದರು.

‘ಹಿಂಬದಿ ಆಸನಗಳಲ್ಲಿ ಸಾಕಷ್ಟು ಸ್ಥಳಾವಕಾಶ,  ಏಳು ಆಸನ, 3.0 ಲೀಟರ್‌ನ ಇಸುಜು ಎಂಜಿನ್‌, ಒಂದೇ ಗುಂಡಿ ಒತ್ತಿದರೆ ಮಡಚಿಕೊಳ್ಳುವ ಎರಡನೇ ಸಾಲಿನ ಆಸನ ಇದರ ವೈಶಿಷ್ಟ್ಯ’ ಎಂದು ಹಿರಿಯ ಜನರಲ್‌ ಮ್ಯಾನೇಜರ್‌ ಜೆ. ಶಂಕರ್‌ ಶ್ರೀನಿವಾಸ ತಿಳಿಸಿದರು.

ಎರಡು ಮಾದರಿಯಲ್ಲಿ ಲಭ್ಯವಿದ್ದು ಎಕ್ಸ್‌ ಷೋರೂಂ ಬೆಲೆ ₹24,36,269 ಮತ್ತು ₹26,39,376 ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.