ADVERTISEMENT

ಈರುಳ್ಳಿ ಆವಕ; ತಗ್ಗಿದ ಬೆಲೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2015, 19:30 IST
Last Updated 3 ಅಕ್ಟೋಬರ್ 2015, 19:30 IST
ಈರುಳ್ಳಿ ಆವಕ; ತಗ್ಗಿದ ಬೆಲೆ
ಈರುಳ್ಳಿ ಆವಕ; ತಗ್ಗಿದ ಬೆಲೆ   

ಹುಬ್ಬಳ್ಳಿ: ರಾಜ್ಯದ ಅತಿದೊಡ್ಡ ಈರುಳ್ಳಿ ಮಾರುಕಟ್ಟೆ ಎನಿಸಿದ ಹುಬ್ಬಳ್ಳಿ ಎಪಿಎಂಸಿಗೆ ಕಳೆದೊಂದು ವಾರದಲ್ಲಿ ದಾಖಲೆಯ ಪ್ರಮಾಣದ ಈರುಳ್ಳಿ ಆವಕಗೊಂಡಿದ್ದು, ಬೆಲೆಯಲ್ಲಿ ಗಣನೀಯ ಇಳಿಕೆಯಾಗಿದೆ.

ಈ ಹಂಗಾಮಿನಲ್ಲಿ ಅತಿಹೆಚ್ಚು ಈರುಳ್ಳಿಯ ಆವಕ ಕಳೆದ ಭಾನುವಾರದಿಂದ ಈಚೆಗೆ ಆಗಿದ್ದು, ಏಳು ದಿನಗಳಲ್ಲಿ 98,289 ಕ್ವಿಂಟಲ್ ಇಲ್ಲಿನ ಅಮರಗೋಳದ ಎಪಿಎಂಸಿ ಪ್ರಾಂಗಣಕ್ಕೆ ಬಂದಿದೆ.

ವಿಜಯಪುರ ಭಾಗದಿಂದ ತೆಲಗಿ ತಳಿ ಆವಕವೂ ಹೆಚ್ಚಿದ್ದು, ಬಾಗಲಕೋಟೆ, ಧಾರವಾಡ, ಕೊಪ್ಪಳ, ಗದಗ, ಬೆಳಗಾವಿ, ಹಾವೇರಿ ಜಿಲ್ಲೆಗಳಿಂದ ರೈತರು ಭಾರೀ ಪ್ರಮಾಣದಲ್ಲಿ ಈರುಳ್ಳಿ ತರುತ್ತಿದ್ದಾರೆ. ಶನಿವಾರ ಸ್ಥಳೀಯ ತಳಿ ಕ್ವಿಂಟಲ್‌ಗೆ ಗರಿಷ್ಠ ₹3,350ಕ್ಕೆ ಮಾರಾಟವಾದರೆ, ಮಾದರಿ ಬೆಲೆ ₹1300 ಇತ್ತು. ತೆಲಗಿ ತಳಿ ಕ್ವಿಂಟಲ್‌ಗೆ ₹3500 ಗರಿಷ್ಠ ಬೆಲೆ ಹೊಂದಿದ್ದು, ಮಾದರಿ ಬೆಲೆ ₹1400 ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.