ADVERTISEMENT

ಎಲ್‌ಟಿಸಿ: ದಾಖಲೆ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 3 ಮೇ 2016, 19:30 IST
Last Updated 3 ಮೇ 2016, 19:30 IST

ನವದೆಹಲಿ (ಪಿಟಿಐ):  ಆದಾಯ ತೆರಿಗೆ ಪಾವತಿಸುವ ವೇತನದಾರರು ಇನ್ನು ಮುಂದೆ ಪ್ರವಾಸ ರಜೆ ಭತ್ಯೆಗೆ (ಎಲ್‌ಟಿಸಿ /ಎಲ್‌ಟಿಎ) ತೆರಿಗೆ ಕಡಿತ ಸೌಲಭ್ಯ ಪಡೆಯಲು ಹೊಸ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ.

ಎಲ್‌ಟಿಸಿಗೆ ಸಂಬಂಧಿಸಿದಂತೆ ಪ್ರವಾಸಿ ವೆಚ್ಚದ ದಾಖಲೆಗಳನ್ನು ತಾವು ಕೆಲಸ ಮಾಡುವ ಸಂಸ್ಥೆಗೆ ಇನ್ನು ಮುಂದೆ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ನೇರ ತೆರಿಗೆ ಕೇಂದ್ರೀಯ ಮಂಡಳಿಯು (ಸಿಬಿಡಿಟಿ) ಸೂಚಿಸಿದೆ.  ಮನೆ ಬಾಡಿಗೆ ಭತ್ಯೆಗೆ ಸಂಬಂಧಿಸಿದಂತೆ ಹಣಕಾಸು ವರ್ಷವೊಂದರಲ್ಲಿ ₹ 1 ಲಕ್ಷಕ್ಕಿಂತ ಹೆಚ್ಚು ಬಾಡಿಗೆ ಪಾವತಿಸಿದ್ದರೆ, ಅರ್ಜಿ ನಮೂನೆ ‘12ಬಿಬಿ’ರಲ್ಲಿ ಮನೆ ಮಾಲೀಕರ ಹೆಸರು, ವಿಳಾಸ ಮತ್ತು ಪ್ಯಾನ್‌ ಸಂಖ್ಯೆ ನಮೂದಿ
ಸುವುದನ್ನು ಕಡ್ಡಾಯ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.