ADVERTISEMENT

ಕ್ವಾಲ್ಕಾಂ : ಮೊಬೈಲ್‌ ತಯಾರಿಕೆಗೆ ಆಸಕ್ತಿ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2016, 19:30 IST
Last Updated 29 ಆಗಸ್ಟ್ 2016, 19:30 IST
ಕ್ವಾಲ್ಕಾಂ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಪೌಲ್‌ ಜಾಕೋಬ್ಸ್‌  ಸೋಮವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು –ಪಿಟಿಐ ಚಿತ್ರ
ಕ್ವಾಲ್ಕಾಂ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಪೌಲ್‌ ಜಾಕೋಬ್ಸ್‌ ಸೋಮವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು –ಪಿಟಿಐ ಚಿತ್ರ   

ನವದೆಹಲಿ: ಅಮೆರಿಕ ಮೂಲದ ಚಿಪ್‌ ತಯಾರಿಕಾ ಸಂಸ್ಥೆ ಕ್ವಾಲ್ಕಾಂ , ಭಾರತದಲ್ಲಿ ಮೊಬೈಲ್‌ ತಯಾರಿಸಲು ಒಲವು ವ್ಯಕ್ತಪಡಿಸಿದೆ. ಭಾರತಕ್ಕೆ ಭೇಟಿ ನೀಡಿರುವ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಪೌಲ್‌ ಜಾಕೋಬ್ಸ್‌ ಅವರು ಸೋಮವಾರ ಇಲ್ಲಿ ಈ ಮಾಹಿತಿ ನೀಡಿದರು.

ಸಚಿವ ರವಿ ಶಂಕರ್‌ ಪ್ರಸಾದ್‌ ಅವರನ್ನು ಭೇಟಿಯಾದ ಸಂದರ್ಭದಲ್ಲಿ  ಮೊಬೈಲ್‌ಗಳಂತಹ ಸಂಪರ್ಕ ಸಾಧನಗಳಲ್ಲಿ ಬಳಕೆಯಾಗುವ ಚಿಪ್‌ ತಯಾರಿಕೆ ಮತ್ತು ಸಂಸ್ಥೆಯ ಉಪಗ್ರಹ ಸಂಪರ್ಕ ಯೋಜನೆಗಳ ಬಗ್ಗೆ ಮಾತುಕತೆ ನಡೆಸಿದರು.

ಮೊಬೈಲ್‌ ತಂತ್ರಜ್ಞಾನ ರಂಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಟಾರ್ಟ್‌ಅಪ್‌ಗಳಲ್ಲಿ ₹ 1,005 ಕೋಟಿ ಬಂಡವಾಳ ತೊಡಗಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.