ADVERTISEMENT

ತಲಾ ಜಿಡಿಪಿ: ದೇಶದ ಸ್ಥಾನ ಏರಿಕೆ

ಪಿಟಿಐ
Published 19 ನವೆಂಬರ್ 2017, 19:30 IST
Last Updated 19 ನವೆಂಬರ್ 2017, 19:30 IST
ತಲಾ ಜಿಡಿಪಿ: ದೇಶದ ಸ್ಥಾನ ಏರಿಕೆ
ತಲಾ ಜಿಡಿಪಿ: ದೇಶದ ಸ್ಥಾನ ಏರಿಕೆ   

ನವದೆಹಲಿ : ತಲಾ ಜಿಡಿಪಿ ಲೆಕ್ಕದಲ್ಲಿ ವಿಶ್ವದ 200 ದೇಶಗಳ ಪಟ್ಟಿಯಲ್ಲಿ ಭಾರತವು ಈ ವರ್ಷ ಒಂದು ಸ್ಥಾನ ಮೇಲಕ್ಕೆ ಏರಿದೆ.

ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಬಿಡುಗಡೆ ಮಾಡಿರುವ ವಿಶ್ವದ ಆರ್ಥಿಕ ಮುನ್ನೋಟದ ಇತ್ತೀಚಿನ ವರದಿಯಲ್ಲಿ, ಭಾರತವು 200 ದೇಶ
ಗಳಲ್ಲಿ 126ನೆ ಸ್ಥಾನಕ್ಕೆ ಏರಿದೆ.

ಕರೆನ್ಸಿಗಳ ಖರೀದಿ ಸಾಮ್ಯತೆ ಆಧರಿಸಿದ ತಲಾ ಜಿಡಿಪಿ ಶ್ರೇಯಾಂಕದಲ್ಲಿ ಭಾರತ ಈಗಲೂ ‘ಬ್ರಿಕ್ಸ್‌’ ದೇಶಗಳಿಗಿಂತ ಕೆಳಗಿದೆ.

ADVERTISEMENT

ಭಾರತದ ತಲಾ ಜಿಡಿಯು 2017ರಲ್ಲಿ ₹ 4.46 ಲಕ್ಷ ಇದೆ. 2016ರಲ್ಲಿ ಇದು ₹ 4.34 ಲಕ್ಷ ಇತ್ತು. ಕತಾರ್‌ ಮೊದಲ ಸ್ಥಾನದಲ್ಲಿ ( ₹ 81.20 ಲಕ್ಷ), ಮಕಾವ್‌ ಮತ್ತು ಲಕ್ಷೆಂಬರ್ಗ್ ನಂತರದ ಸ್ಥಾನಗಳಲ್ಲಿ ಇವೆ. ಅಮೆರಿಕವು ಮುಂಚೂಣಿ 10 ಸ್ಥಾನಗಳಲ್ಲಿ ಇರುವ ಹೆಗ್ಗಳಿಕೆಗೆ ಎರವಾಗಿ 13ನೇ ಸ್ಥಾನದಲ್ಲಿದೆ.

‘ಬ್ರಿಕ್ಸ್‌’ ದೇಶಗಳ ಪೈಕಿ ಭಾರತದ ತಲಾ ಜಿಡಿಪಿ ಅತ್ಯಂತ ಕಡಿಮೆ ಇದೆ. ಇತ್ತೀಚಿನ ಕ್ರೆಡಿಟ್‌ ಸ್ವೇಸ್‌ ಜಾಗತಿಕ ಸಂಪತ್ತು ವರದಿ ಪ್ರಕಾರ, ಭಾರತವು 2.45 ಲಕ್ಷ ಕೋಟ್ಯಧಿಪತಿಗಳನ್ನು ಹೊಂದಿದ್ದು, ಒಟ್ಟಾರೆ ಕೌಟುಂಬಿಕ ಸಂಪತ್ತು ₹ 325 ಲಕ್ಷ ಕೋಟಿಗಳಷ್ಟಿದ್ದರೂ ತಲಾ ಜಿಡಿಪಿ ಮಾತ್ರ ಕಡಿಮೆ ಮಟ್ಟದಲ್ಲಿ ಇದೆ.

ಏನಿದು ತಲಾ ಜಿಡಿಪಿ

ದೇಶ ತಲಾ ಜಿಡಿಪಿ ಎಂದರೆ, ದೇಶದಲ್ಲಿನ ಸರಕು ಮತ್ತು ಸೇವೆಗಳ ಒಟ್ಟು ಉತ್ಪನ್ನವನ್ನು ದೇಶದ ಜನಸಂಖ್ಯೆಯಿಂದ ಭಾಗಿಸಿದಾಗ ಬರುವ ಮೊತ್ತ. ದೇಶಗಳ ಮಧ್ಯೆ ಹೋಲಿಕೆ ಮಾಡುವಾಗ ಈ ಮಾನದಂಡವನ್ನು ಬಳಸಿಕೊಳ್ಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.