ADVERTISEMENT

ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ಆರಂಭ

ಕನಿಷ್ಠ ಮೊತ್ತದ ನಿಬಂಧನೆ ಇಲ್ಲ; ಠೇವಣಿಗೆ ವಾರ್ಷಿಕ ಶೇ 4 ರಷ್ಟು ಬಡ್ಡಿ

ಪಿಟಿಐ
Published 23 ಮೇ 2017, 19:30 IST
Last Updated 23 ಮೇ 2017, 19:30 IST
ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ಆರಂಭ
ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ಆರಂಭ   

ನವದೆಹಲಿ: ಮೊಬೈಲ್‌ ವಾಲೆಟ್‌ ಸಂಸ್ಥೆ ಪೇಟಿಎಂ, ತನ್ನ ಪೇಮೆಂಟ್ಸ್‌ ಬ್ಯಾಂಕ್‌ಗೆ ಮಂಗಳವಾರ ಚಾಲನೆ ನೀಡಿದೆ. ಖಾತೆಯಲ್ಲಿ ಕನಿಷ್ಠ ಮೊತ್ತ ಇರಿಸಬೇಕಾದ ಅಗತ್ಯ ಇಲ್ಲ, ಠೇವಣಿಗಳ ಮೇಲೆ ವಾರ್ಷಿಕ ಶೇ 4ರಷ್ಟುಬಡ್ಡಿ  ಮತ್ತು ₹ 25 ಸಾವಿರ ಠೇವಣಿ ಇರಿಸಿದರೆ ₹ 250 ಹಣ ಮರಳಿಸುವುದಾಗಿ ಸಂಸ್ಥೆ ತಿಳಿಸಿದೆ.

ಆನ್‌ಲೈನ್‌ ಮೂಲಕ ನಡೆಸುವ (ಎನ್‌ಇಎಫ್‌ಟಿ, ಆರ್‌ಟಿಜಿಎಸ್‌, ಐಎಂಪಿಎಸ್‌) ವಹಿವಾಟುಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ವರ್ತಕರಿಗಾಗಿ ಚಾಲ್ತಿ ಖಾತೆ ಸೌಲಭ್ಯವೂ ಇರಲಿದೆ. ಏರ್‌ಟೆಲ್‌ ಮತ್ತು ಅಂಚೆ ಇಲಾಖೆ ನಂತರ ಪೇಮೆಂಟ್ಸ್‌ ಬ್ಯಾಂಕ್‌ ಆರಂಭಿಸಿದ ಮೂರನೇ ಸಂಸ್ಥೆ ಇದಾಗಿದೆ.

‘ಹೊಸ ಸ್ವರೂಪದ ಬ್ಯಾಂಕಿಂಗ್‌ ಮಾದರಿ ರೂಪಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ ನಮಗೆ ಅವಕಾಶ ನೀಡಿದೆ.  ನಮ್ಮ ಗ್ರಾಹಕರ ಠೇವಣಿ ಹಣವನ್ನು ಸರ್ಕಾರಿ ಬಾಂಡ್‌ಗಳಲ್ಲಿ ತೊಡಗಿಸಿ ದೇಶ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುವುದು. ನಮ್ಮಲ್ಲಿನ ಯಾವುದೇ ಠೇವಣಿಗಳನ್ನು ನಷ್ಟಕ್ಕೆ ಅವಕಾಶ ಇರುವೆಡೆ ಹೂಡಿಕೆ ಮಾಡುವುದಿಲ್ಲ’ ಎಂದು ಬ್ಯಾಂಕ್‌ನ ಅಧ್ಯಕ್ಷ ವಿಜಯ್‌ ಶೇಖರ್‌ ಶರ್ಮಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಈಗಾಗಲೇ ಗ್ರಾಹಕರು ಬಳಸುತ್ತಿರುವ ಪೇಟಿಎಂ ಮೊಬೈಲ್‌ ಆ್ಯಪ್‌ ಅನ್ನು ಮೇಲ್ದರ್ಜೆಗೆ ಏರಿಸಿ, ಆಧಾರ್‌ ಸಂಖ್ಯೆ ಮತ್ತು ಹೆಸರುಗಳನ್ನು ನಮೂದಿಸಿ ದೃಢೀಕರಿಸಿ ಬ್ಯಾಂಕಿಂಗ್‌ ಸೇವೆ ಬಳಸಬಹುದು.  ಪೇಟಿಎಂ ಗ್ರಾಹಕರು ಈ ಮೊದಲಿನಂತೆಯೇ ತಮ್ಮ ಆ್ಯಪ್‌ ಬಳಕೆ ಮುಂದುವರೆಸಬಹುದು.

ಬ್ಯಾಂಕ್‌ನಿಂದ ಗ್ರಾಹಕರಿಗೆ ವರ್ಚುವಲ್‌ ರೂಪೆ  ಡೆಬಿಟ್‌ ಕಾರ್ಡ್‌  ಮತ್ತು ಗ್ರಾಹಕರ ಕೋರಿಕೆ ಮೇರೆಗೆ ಭೌತಿಕ ಸ್ವರೂಪದ ಕಾರ್ಡ್‌ ವಿತರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.