ADVERTISEMENT

ಪ್ಯಾನಸೋನಿಕ್‌ ಕೌಶಲ ಅಭಿವೃದ್ಧಿ ಕೇಂದ್ರ

ಪಿಟಿಐ
Published 23 ಮೇ 2017, 19:30 IST
Last Updated 23 ಮೇ 2017, 19:30 IST
ಸಂಶೋಧನಾ ಕೇಂದ್ರದ ಉದ್ಘಾಟನೆಯಲ್ಲಿ ಪಾನಸೋನಿಕ್‌ ಸಿಇಒ ಮನಿಷ್‌ ಶರ್ಮಾ, ಟಿಸಿಎಸ್‌ನ ಉಪಾಧ್ಯಕ್ಷ ರೇಗು ಅಯ್ಯಸ್ವಾಮಿ, ಪಾನಸೋನಿಕ್‌ನ ಹಿರಿಯ ವ್ಯವಸ್ಥಾಪಕ ನಿರ್ದೇಶಕ ಯೋಷಿಯುಕಿ ಮಿಯಾಬೆ, ನಿರ್ದೇಶಕ ಮಂಡಳಿ ಸದಸ್ಯ  ಡೈಜೊ ಇಟೊ ಅವರು ಭಾಗವಹಿಸಿದ್ದರು
ಸಂಶೋಧನಾ ಕೇಂದ್ರದ ಉದ್ಘಾಟನೆಯಲ್ಲಿ ಪಾನಸೋನಿಕ್‌ ಸಿಇಒ ಮನಿಷ್‌ ಶರ್ಮಾ, ಟಿಸಿಎಸ್‌ನ ಉಪಾಧ್ಯಕ್ಷ ರೇಗು ಅಯ್ಯಸ್ವಾಮಿ, ಪಾನಸೋನಿಕ್‌ನ ಹಿರಿಯ ವ್ಯವಸ್ಥಾಪಕ ನಿರ್ದೇಶಕ ಯೋಷಿಯುಕಿ ಮಿಯಾಬೆ, ನಿರ್ದೇಶಕ ಮಂಡಳಿ ಸದಸ್ಯ ಡೈಜೊ ಇಟೊ ಅವರು ಭಾಗವಹಿಸಿದ್ದರು   

ಬೆಂಗಳೂರು:  ಗೃಹೋಪಯೋಗಿ ಮತ್ತು ಎಲೆಕ್ಟ್ರಾನಿಕ್‌ ಉಪಕರಣಗಳ ತಯಾರಿಕೆಯಲ್ಲಿ  ಮುಂಚೂಣಿಯಲ್ಲಿರುವ ಪ್ಯಾನಸೋನಿಕ್ ಇಂಡಿಯಾ ಸಂಸ್ಥೆ, ಟಾಟಾ ಕನ್ಸಲ್‌ಟೆನ್ಸಿ   ಸರ್ವಿಸಸ್‌ (ಟಿಸಿಎಸ್‌) ಸಹಯೋಗದಲ್ಲಿ ಬೆಂಗಳೂರಿನಲ್ಲಿ ಕೌಶಲ ಅಭಿವೃದ್ಧಿ ಕೇಂದ್ರ  ಆರಂಭಿಸಿದೆ.

ಈ ಕೇಂದ್ರದ ನೆರವಿನಿಂದ ಸಾರಿಗೆ, ಇಂಧನ, ಕೈಗಾರಿಕೆ, ಹಣಕಾಸು ಸೇವೆ ಮತ್ತು ಸಮುದಾಯ ಸೇವೆಗಳಿಗೂ  ಒತ್ತು ನೀಡುವುದಾಗಿ ಸಂಸ್ಥೆ   ಪ್ರಕಟಿಸಿದೆ. ಕೌಶಲ ಅಭಿವೃದ್ಧಿ ಕೇಂದ್ರದ ಮೂಲಕ ಗ್ರಾಹಕ ಬಳಕೆ ಎಲೆಕ್ಟ್ರಾನಿಕ್ಸ್ ಉಪಕರಣಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಈಗಾಗಲೇ ಸಂಸ್ಥೆ ಬಳಿ ಇರುವ ತಂತ್ರಜ್ಞಾನವನ್ನು ಬಳಸಿಕೊಂಡು ಹೊಸ ಸೇವೆಗಳನ್ನು ಒದಗಿಸಲಾಗುವುದು.

‘ಬೆಂಗಳೂರಿನಲ್ಲಿ ಕೌಶಲ ಅಭಿವೃದ್ಧಿ ಕೇಂದ್ರದಲ್ಲಿ ತಂತ್ರಜ್ಞಾನ ಮತ್ತು ಸಂಶೋಧನೆಗಳನ್ನು ಒಂದೇ ಸೂರಿನಡಿ ಒದಗಿಸಲಾಗುವುದು’ ಎಂದು ಸಂಸ್ಥೆಯ ವ್ಯವಸ್ಥಾಪಕ ಕಾರ್ಯಕಾರಿ ಅಧಿಕಾರಿ ದಯಜೊ ಇಟೊ, ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ‘ಭಾರತ ಮತ್ತು ವಿದೇಶಿ ಗ್ರಾಹಕರ ಅಗತ್ಯಗಳನ್ನು ಪೂರೈಸುವ ಕೇಂದ್ರ ಇದಾಗಲಿದೆ’ ಎಂದು ಹೇಳಿದರು.

ADVERTISEMENT

‘ಭಾರತ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾ ರಾಷ್ಟ್ರಗಳಲ್ಲಿ ಸಂಸ್ಥೆಯ ವಹಿವಾಟು ಹೆಚ್ಚಿಸುವುದು ತಂತ್ರಜ್ಞಾನ ಅಭಿವೃದ್ಧಿ ಮಾಡುವುದು ಈ ಕೌಶಲ ಕೇಂದ್ರದ ಮುಖ್ಯ ಉದ್ದೇಶ’ ಎಂದು ಪ್ಯಾನಸೋನಿಕ್ ಇಂಡಿಯಾ  ಅಧ್ಯಕ್ಷ ಮತ್ತು ಕಾರ್ಯನಿರ್ವಹಣಾಧಿಕಾರಿ ಮನೀಶ್‌ ಶರ್ಮ ತಿಳಿಸಿದರು.

‘ಟಿಸಿಎಸ್‌ ಸಹಯೋಗದೊಂದಿಗೆ ಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪಿಸಿ ಯುವಜನರಿಗಾಗಿ ಕ್ರಿಯಾಶೀಲವಾದ ವೇದಿಕೆ ನಿರ್ಮಿಸಿದ್ದೇವೆ. ಇದರ ಮೂಲಕ ಉದ್ಯಮದ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲಿದ್ದೇವೆ’ ಎಂದು ಹೇಳಿದರು. ಟಿಸಿಎಸ್‌ನ ಉಪಾಧ್ಯಕ್ಷ ರೆಗು ಅಯ್ಯಸ್ವಾಮಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.