ADVERTISEMENT

ಬ್ಯಾಂಕಿಂಗ್‌ ಪ್ರಗತಿ ನಕಾರಾತ್ಮಕ: ಮೂಡೀಸ್‌

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2014, 19:30 IST
Last Updated 29 ಅಕ್ಟೋಬರ್ 2014, 19:30 IST

ಮುಂಬೈ(ಪಿಟಿಐ): ಭಾರತದ ಬ್ಯಾಂಕಿಂಗ್‌ ವ್ಯವಸ್ಥೆ ಪ್ರಗತಿ ನಕಾರಾತ್ಮಕ ವಾಗಿದೆ ಎಂದು ರೇಟಿಂಗ್‌ ಏಜೆನ್ಸಿ ಮೂಡೀಸ್‌ ಹೇಳಿದೆ.
2011ರ ನವೆಂಬರ್‌ನಿಂದಲೂ ಭಾರತದಲ್ಲಿನ ಬ್ಯಾಂಕಿಂಗ್‌ ಕ್ಷೇತ್ರ ನಕಾರಾತ್ಮಕ ಶ್ರೇಣಿಯಲ್ಲಿಯೇ ಉಳಿದುಕೊಂಡಿದೆ.

ಬ್ಯಾಂಕ್‌ಗಳು ಕಾರ್ಪೊರೇಟ್‌ ವಲಯಕ್ಕೆ ದೊಡ್ಡ ಮಟ್ಟದ ಸಾಲ ನೀಡಿವೆ. ಈ ಬಾಬ್ತು ಮರು ಪಾವತಿಯಾಗಿ ಬ್ಯಾಂಕ್‌ನ ಆಸ್ತಿಯ ಮೌಲ್ಯ ಹೆಚ್ಚಲಿದೆ ಎಂಬುದನ್ನು ಖಚಿತವಾಗಿ ನಿರೀಕ್ಷಿಸುವುದು ಅಷ್ಟು ಸುಲಭವಲ್ಲ ಎಂದು ಮೂಡೀಸ್‌ ಹೇಳಿದೆ.

ಪ್ರಸ್ತುತ ಬ್ಯಾಂಕ್‌ಗಳ ವಸೂಲಾಗದ ಸಾಲ ಪ್ರಮಾಣ (ಎನ್‌ಪಿಎ) ತಿಂಗಳಿಂದ ತಿಂಗಳಿಗೆ ಹೆಚ್ಚುತ್ತಲೇ ಇದೆ. ಸದ್ಯ ಎನ್‌ಪಿಎ ಶೇ 4.5ಕ್ಕೇರಿದೆ. ಇದು ಒಂದೆಡೆ ಬಂಡವಾಳ ಕೊರತೆಗೆ ಕಾರಣವಾದರೆ, ಇನ್ನೊಂದೆಡೆ ಬ್ಯಾಂಕ್‌ಗಳ ಲಾಭದ ಪ್ರಮಾಣವನ್ನೂ ತಗ್ಗಿಸುತ್ತಿದೆ. ಈ ಎಲ್ಲ ಅಂಶಗಳೂ ಭಾರತದ ಬ್ಯಾಂಕ್‌ಗಳು ಪ್ರಗತಿಯ ಹಾದಿಯಲ್ಲಿ ಮುನ್ನಡೆಯಲಾರದೆ ಮುಗ್ಗರಿಸುತ್ತಿವೆ ಎಂಬುದನ್ನು ಎತ್ತಿ ತೋರುತ್ತಿದೆ ಎಂದು ರೇಟಿಂಗ್‌ ಸಂಸ್ಥೆ ವಿಶ್ಲೇಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT