ADVERTISEMENT

ಮಾರುಕಟ್ಟೆ ಮೌಲ್ಯ ಗರಿಷ್ಠ ಮಟ್ಟ ತಲುಪಿದ ಟಿಸಿಎಸ್‌

ಪಿಟಿಐ
Published 23 ಏಪ್ರಿಲ್ 2018, 19:35 IST
Last Updated 23 ಏಪ್ರಿಲ್ 2018, 19:35 IST

ನವದೆಹಲಿ: ದೇಶದ ಷೇರುಪೇಟೆಯ ನೋಂದಾಯಿತ ಸಂಸ್ಥೆಗಳಲ್ಲಿ   ₹ 6.80 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯ ಹೊಂದಿದ ಮೊದಲ ಸಂಸ್ಥೆಯಾಗಿ ಟಿಸಿಎಸ್ ಹೊರಹೊಮ್ಮಿದೆ.

ಸೋಮವಾರದ ವಹಿವಾಟಿನಲ್ಲಿ ಸಂಸ್ಥೆಯ ಷೇರುಗಳು ಶೇ 4 ರಷ್ಟು ಏರಿಕೆ ಕಂಡವು. ಇದರಿಂದ ಮಾರುಕಟ್ಟೆ ಮೌಲ್ಯ ಗರಿಷ್ಠ ಮಟ್ಟವನ್ನು ತಲುಪುವಂತಾಯಿತು.

‘ಟಿಸಿಎಸ್‌ ಹೊಸ ಇತಿಹಾಸ ಸೃಷ್ಟಿಸಿದೆ. ಡಿಜಿಟಲ್‌ ಯುಗವು ಸಂಸ್ಥೆಗೆ ಬಹುದೊಡ್ಡ ಅವಕಾಶವಾಗಿದೆ‘ ಎಂದು ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್‌ ಪ್ರತಿಕ್ರಿಯಿಸಿದ್ದಾರೆ.

ADVERTISEMENT

ತಂತ್ರಜ್ಞಾನ, ಸಾಮರ್ಥ್ಯ ಸೃಷ್ಟಿ, ನಾಯಕತ್ವ ಗುಣ, ಕೌಶಲ ವೃದ್ಧಿ, ಹೊಸ ಮಾರುಕಟ್ಟೆಗೆ ಪ್ರವೇಶ ಹಾಗೂ ವಿಶ್ವದರ್ಜೆಯ ಸೇವೆ ಒದಗಿಸುವ ವಿಚಾರಗಳಲ್ಲಿ ಸೂಕ್ತವಾದ ಹೂಡಿಕೆ ನಿರ್ಧಾರ ತೆಗೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.

ಕುಸಿತ: ಷೇರುಪೇಟೆಯ ವಹಿವಾಟಿನ ಅಂತ್ಯದಲ್ಲಿ ಮಾರುಕಟ್ಟೆ ಮೌಲ್ಯವು ₹ 6.53 ಲಕ್ಷ ಕೋಟಿಗೆ ಇಳಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.