ಬೆಂಗಳೂರು: ಮನೋರಂಜನಾ ಪಾರ್ಕ್ ನಿರ್ವಹಣಾ ಸಂಸ್ಥೆ ವಂಡರ್ಲಾ ಹಾಲಿಡೇಸ್ ಲಿಮಿಟೆಡ್ನ ಎರಡನೇ ತ್ರೈಮಾಸಿಕದಲ್ಲಿನ ಒಟ್ಟು ವರಮಾನವು ₹ 62 ಕೋಟಿಗಳಿಗೆ ಏರಿಕೆಯಾಗಿದೆ.
ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಇದು ಶೇ 15ರಷ್ಟು ಹೆಚ್ಚಳ ದಾಖಲಿಸಿದೆ.
ಈ ವರ್ಷದ ಮೊದಲಾರ್ಧದಲ್ಲಿನ ಒಟ್ಟು ವರಮಾನ ₹ 156.68 ಕೋಟಿಗಳಾಗಿದೆ.
ನಿವ್ವಳ ಲಾಭವು₹ 2.33 ಕೋಟಿಗಳಾಗಿದೆ. ವರ್ಷದ ಹಿಂದೆ ಇದು ₹ 3.7 ಕೋಟಿಗಳಷ್ಟಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.