ADVERTISEMENT

ವೊಡಾಫೋನ್‌ ಆಹ್ವಾನ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2017, 19:30 IST
Last Updated 21 ನವೆಂಬರ್ 2017, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿನ ರಿಲಯನ್ಸ್ ಕಮ್ಯುನಿಕೇಷನ್ಸ್ ಗ್ರಾಹಕರು ತಮ್ಮ ಹಾಲಿ ನಂಬರ್ ಉಳಿಸಿಕೊಂಡು ವೊಡಾಫೋನ್‌ ಚಂದಾದಾರರಾಗಲು ಅವಕಾಶ ಕಲ್ಪಿಸಿಕೊಡಲಾಗಿದೆ.

ಗ್ರಾಹಕರು ನೆಟ್‍ವರ್ಕ್ ಕಡಿತವಿಲ್ಲದೇ ಸರಾಗವಾಗಿ ವೊಡಾಫೋನ್‌ ಚಂದಾದಾರರಾಗಲು (ನಂಬರ್ ಪೋರ್ಟ್) ಸೌಲಭ್ಯ ಕಲ್ಪಿಸಲಾಗಿದೆ. ಮೊಬೈಲ್‌ನಲ್ಲಿನ ನೆಟ್‍ವರ್ಕ್ ಸೆಟ್ಟಿಂಗ್‌ಗೆ ಹೋಗಿ  ಮ್ಯಾನುಯೆಲ್ ಆಗಿ ವೊಡಾಫೋನ್ ನೆಟ್‍ವರ್ಕ್ ಆಯ್ಕೆಮಾಡಿಕೊಳ್ಳಬೇಕು. ನಂತರ, ‘ಪೋರ್ಟ್ <ರಿಲಯನ್ಸ್ ಗ್ರಾಹಕರ ಸಂಖ್ಯೆ>’ ಎಸ್‌ಎಂಎಸ್‌ ಅನ್ನು 1900 ಸಂಖ್ಯೆಗೆ ಕಳುಹಿಸಿ ಎಂಎನ್‍ಪಿ ಕೋಡ್ ಪಡೆದು ದಾಖಲೆಗಳನ್ನು ಸಲ್ಲಿಸಬೇಕು ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT