ADVERTISEMENT

ಸಂವೇದಿ ಸೂಚ್ಯಂಕ 517 ಅಂಶ ಏರಿಕೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2015, 10:36 IST
Last Updated 30 ಮಾರ್ಚ್ 2015, 10:36 IST

ಮುಂಬೈ (ಪಿಟಿಐ): ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಗಣನೀಯವಾಗಿ ತಗ್ಗಿದ್ದರಿಂದ ಸೋಮವಾರದ ವಹಿವಾಟಿನಲ್ಲಿ  ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 517 ಅಂಶಗಳಷ್ಟು ದಾಖಲೆ ಏರಿಕೆ ಕಂಡಿದೆ.

ವಹಿವಾಟಿನ ಅಂತ್ಯಕ್ಕೆ ಬಿಎಸ್‌ಇ ಸೂಚ್ಯಂಕ 27,975 ಅಂಶಗಳಿಗೆ ಏರಿಕೆ ಕಂಡರೆ, ರಾಷ್ಟ್ರೀಯ ಷೇರು ಸೂಚ್ಯಂಕ ‘ನಿಫ್ಟಿ’ 150 ಅಂಶಗಳಷ್ಟು ಜಿಗಿತ ಕಂಡು 8,492 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು.

ಶುಕ್ರವಾರ 27,458 ಅಂಶಗಳಲ್ಲಿ ಬಿಎಸ್‌ಇ ವಹಿವಾಟು ಕೊನೆಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.