ADVERTISEMENT

ಸಿಂಡ್‌ ಬ್ಯಾಂಕ್‌ 40 ‘ಅನನ್ಯ’ ಶಾಖೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2017, 20:02 IST
Last Updated 27 ಮಾರ್ಚ್ 2017, 20:02 IST
ಸಿಂಡ್‌ ಬ್ಯಾಂಕ್‌ 40 ‘ಅನನ್ಯ’ ಶಾಖೆ
ಸಿಂಡ್‌ ಬ್ಯಾಂಕ್‌ 40 ‘ಅನನ್ಯ’ ಶಾಖೆ   

ಬೆಂಗಳೂರು: ದೇಶದ ಪ್ರಮುಖ ವಾಣಿಜ್ಯ ಬ್ಯಾಂಕುಗಳಲ್ಲಿ ಒಂದಾದ ಸಿಂಡಿಕೇಟ್‌ ಬ್ಯಾಂಕ್‌ನ 40 ನವೀಕೃತ ಅನನ್ಯ ಶಾಖೆಗಳು ಮತ್ತು ಮೊದಲ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮ (ಎಂಎಸ್‌ಎಂಇ) ಕೇಂದ್ರವನ್ನು ಸೋಮವಾರ ಉದ್ಘಾಟಿಸಲಾಯಿತು.

‘ಬದಲಾವಣೆ ಕಡೆಗಿನ ಪಯಣ’ ಎಂಬ ಧ್ಯೇಯ ವಾಕ್ಯದೊಂದಿಗೆ ಅಸ್ತಿತ್ವಕ್ಕೆ ಬಂದ  ಎರಡು ವರ್ಷದ ಅವಧಿಯ ಯೋಜನೆಯ ಅಡಿ ದೇಶದ 372 ಶಾಖೆಗಳನ್ನು ಹಂತ, ಹಂತವಾಗಿ ಆಧುನೀಕರಣಗೊಳಿಸಲಾಗುತ್ತಿದೆ. ಮೊದಲ ಹಂತದಲ್ಲಿ ಬೆಂಗಳೂರಿನ 40 ಶಾಖೆಗಳನ್ನು ಮರು ವಿನ್ಯಾಸಗೊಳಿಸಲಾಗಿದೆ.  

‘ಅನನ್ಯ’ ಶಾಖೆ  ಉದ್ಘಾಟಿಸಿದ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ಅರುಣ್‌ ಶ್ರೀವಾಸ್ತವ ಅವರು, ‘ಬದಲಾವಣೆಗೆ  ತೆರೆದುಕೊಳ್ಳದಿದ್ದರೆ ಅಸ್ತಿತ್ವವಿಲ್ಲ. ಬ್ಯಾಂಕಿಂಗ್‌ ವಲಯದಲ್ಲಿ ಹೆಚ್ಚುತ್ತಿರುವ ಪೈಪೋಟಿ ಮತ್ತು ಗ್ರಾಹಕರ ಬೇಡಿಕೆ ಗಮನದಲ್ಲಿಟ್ಟುಕೊಂಡು ಬದಲಾವಣೆಗೆ ತೆರೆದುಕೊಂಡಿದ್ದೇವೆ’ ಎಂದರು.
‘ಕೇವಲ ವಿನ್ಯಾಸ ಮಾತ್ರವಲ್ಲ.  ಕಾರ್ಯವೈಖರಿಯಲ್ಲಿ ಆಮೂಲಾಗ್ರ ಬದಲಾವಣೆ ತರಲಾಗಿದೆ.  ಸಾಲ ಮಂಜೂರಾತಿ, ಖಾತೆ ತೆರೆಯುವ ಪ್ರಕ್ರಿಯೆ ಸೇರಿದಂತೆ ಎಲ್ಲ ರೀತಿಯ ಬ್ಯಾಂಕಿಂಗ್‌ ವಹಿವಾಟು ಚುರುಕುಗೊಳಿಸಲಾಗಿದೆ’ ಎಂದರು. ‘ಈ ಬದಲಾವಣೆ  ಬ್ಯಾಂಕ್‌ ವಹಿವಾಟು ಹೆಚ್ಚಿಸಲು ನೆರವಾಗಲಿದೆ’ ಎಂದು ಕಾರ್ಯನಿರ್ವಾಹಕ ನಿರ್ದೇಶಕರಾದ ರವಿಶಂಕರ್‌ ಪಾಂಡೆ ಮತ್ತು ಸಿಎಚ್‌. ಎಸ್‌.ಎಸ್‌. ಮಲ್ಲಿಕಾರ್ಜುನ ರಾವ್  ಆಶಯ ವ್ಯಕ್ತಪಡಿಸಿದರು.   

ADVERTISEMENT

‘ಸಣ್ಣ ಉದ್ಯಮಿಗಳಿಗೆ ಸಾಲ ಮಂಜೂರಾತಿ ಸರಳಗೊಳಿಸಲು ಆರಂಭಿಸಲಾದ ಎಂಎಸ್‌ಎಂಇ ಕೇಂದ್ರ ನಗರದ 150 ಶಾಖೆಗಳಲ್ಲೂ ಕಾರ್ಯನಿರ್ವಹಿಸಲಿದೆ’ ಎಂದು ಬಿಪಿಆರ್‌  ಜನರಲ್‌ ಮ್ಯಾನೇಜರ್‌ ಕೆ.ಟಿ. ರೈ ತಿಳಿಸಿದರು. ‘ಬ್ಯಾಂಕ್‌ನ ಎಲ್ಲ ವಹಿವಾಟು ತ್ವರಿತ ಮತ್ತು ಸರಳಗೊಳಿಸಲಾಗಿದ್ದು,  ಡಿಜಿಟಲ್‌ ವ್ಯವಸ್ಥೆ ಜಾರಿಗೊಳಿಸಲಾಗಿದೆ’ ಎಂದು ಎಫ್‌ಜಿಎಂಒ ಜನರಲ್‌ ಮ್ಯಾನೇಜರ್‌ ಅತುಲ್‌ ಕುಮಾರ್‌  ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.