ADVERTISEMENT

ಸೂಚ್ಯಂಕ ದಾಖಲೆ ಏರಿಕೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2014, 10:31 IST
Last Updated 2 ಸೆಪ್ಟೆಂಬರ್ 2014, 10:31 IST

ಮುಂಬೈ (ಪಿಟಿಐ): ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಮಂಗಳವಾರದ ವಹಿವಾಟಿನಲ್ಲಿ 151 ಅಂಶಗಳಷ್ಟು ಏರಿಕೆ ಪಡೆದು ಇದೇ ಮೊದಲ ಬಾರಿಗೆ 27 ಸಾವಿರ ಅಂಶಗಳ ಗಡಿ ದಾಟಿದೆ. ಇದು ಸಾರ್ವಕಾಲಿಕ ದಾಖಲೆ.

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ 5.7ರಷ್ಟು ಜಿಡಿಪಿ ಪ್ರಗತಿ ದಾಖಲಾಗಿರುವುದು ಹಣಕಾಸು ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಮೂಡಿಸಿದೆ. ಇದರಿಂದ ದೊಡ್ಡ ಪ್ರಮಾಣದಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆ (ಎಫ್‌ಐಐ) ಹರಿದು ಬರುತ್ತಿದೆ. ಸೂಚ್ಯಂಕ ಜಿಗಿತಕ್ಕೆ ಇದೇ ಪ್ರಮುಖ ಕಾರಣ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಸೋಮವಾರವೇ ಬಿಎಸ್‌ಇ ಸೂಚ್ಯಂಕ ದಾಖಲೆ ಮಟ್ಟವಾದ 26,867 ಅಂಶಗಳಿಗೆ ಜಿಗಿದಿತ್ತು. ಮಂಗಳವಾರ  27,019 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿದೆ.

ರಾಷ್ಟ್ರೀಯ ಷೇರು ಸೂಚ್ಯಂಕ ‘ನಿಫ್ಟಿ’ ಕೂಡ 55 ಅಂಶಗಳಷ್ಟು ಏರಿಕೆ ಪಡೆದು 8 ಸಾವಿರದ ಗಡಿ ದಾಟಿ 8,083ರಲ್ಲಿ ದಿನದ ವಹಿವಾಟು ಕೊನೆಗೊಳಿಸಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.