ADVERTISEMENT

ಸೂಚ್ಯಂಕ ಹೊಸ ಮೈಲುಗಲ್ಲು

ಪಿಟಿಐ
Published 25 ಮೇ 2017, 19:30 IST
Last Updated 25 ಮೇ 2017, 19:30 IST
ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) ಗುರುವಾರದ ವಹಿವಾಟಿನಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಿದೆ.
 
448 ಅಂಶಗಳಷ್ಟು ಏರಿಕೆ ಕಂಡು, 30,750 ಅಂಶಗಳಿಗೆ ತಲುಪುವ ಮೂಲಕ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಅಳಿಸಿ ಹಾಕಿದೆ. ಈ ಹಿಂದೆ ಮಾರ್ಚ್‌ 14 ರಂದು ಸೂಚ್ಯಂಕ 496 ಅಂಶಗಳಷ್ಟು ಗರಿಷ್ಠ ಏರಿಕೆ ಕಂಡಿತ್ತು.
 
ಇನ್ನು, ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 149 ಅಂಶ ಹೆಚ್ಚಾಗಿ 9,510 ಅಂಶಗಳ ಗರಿಷ್ಠ ಮಟ್ಟವನ್ನು ತಲುಪಿತು. ಸದ್ಯಕ್ಕೆ ಬಡ್ಡಿದರ ಏರಿಕೆ ಮಾಡುವುದಿಲ್ಲ.  
 
ಆರ್ಥಿಕ ಪ್ರಗತಿಯನ್ನು ಗಮನಿಸಿ ಬಡ್ಡಿದರ ಏರಿಕೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಫೆಡರಲ್‌ ರಿಸರ್ವ್ ಹೇಳಿದೆ. ಈ ಸುದ್ದಿಯು  ಷೇರುಪೇಟೆಯಲ್ಲಿ ಹೂಡಿಕೆ ಚಟುವಟಿಕೆ ಹೆಚ್ಚುವಂತೆ ಮಾಡಿ, ಸೂಚ್ಯಂಕಗಳ ಏರುಮುಖ ಚಲನೆಗೆ ಕಾರಣವಾಯಿತು ಎಂದು ತಜ್ಞರು ಹೇಳಿದ್ದಾರೆ.
 
ಮೇ ತಿಂಗಳ ವಾಯಿದಾ ವಹಿವಾಟು ಅವಧಿ  ಮುಕ್ತಾಯದ ದಿನವಾಗಿದ್ದು ಸಹ ಸಕಾರಾತ್ಮಕ ಚಟುವಟಿಕೆಗೆ ನೆರವಾಯಿತು ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.