ADVERTISEMENT

ಸ್ಯಾಮ್ಸಂಗ್‌ ಎಸ್‌8 ಮೊಬೈಲ್‌ ಬಿಡುಗಡೆ

ಪಿಟಿಐ
Published 21 ಏಪ್ರಿಲ್ 2017, 4:32 IST
Last Updated 21 ಏಪ್ರಿಲ್ 2017, 4:32 IST
ಸ್ಯಾಮ್ಸಂಗ್‌ ಎಸ್‌8 ಮೊಬೈಲ್‌ ಬಿಡುಗಡೆ
ಸ್ಯಾಮ್ಸಂಗ್‌ ಎಸ್‌8 ಮೊಬೈಲ್‌ ಬಿಡುಗಡೆ   

ನವದೆಹಲಿ: ಮೊಬೈಲ್‌ ತಯಾರಿಕಾ  ಜಾಗತಿಕ ದೈತ್ಯ ಸಂಸ್ಥೆ ಸ್ಯಾಮ್ಸಂಗ್‌, ತನ್ನ ಮುಂಚೂಣಿ ಸ್ಮಾರ್ಟ್‌ಫೋನ್‌ ಗ್ಯಾಲಕ್ಸಿ ಎಸ್‌8 ಅನ್ನು ಬುಧವಾರ ಇಲ್ಲಿ ಭಾರತದ ಮಾರುಕಟ್ಟೆಗೆ ಪರಿಚಯಿಸಿತು.

ಎಸ್‌8 ಮತ್ತು ಎಸ್‌8 ಪ್ಲಸ್‌ –ಎರಡು ಮಾದರಿಯಲ್ಲಿ  ಲಭ್ಯ ಇರಲಿದೆ. ಸ್ಯಾಮ್ಸಂಗ್‌ ಮಳಿಗೆ, ಆಯ್ದ ಚಿಲ್ಲರೆ ಮಳಿಗೆ  ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಮೇ 5ರಿಂದ ಖರೀದಿಗೆ ಲಭ್ಯ ಇರಲಿದೆ.  ಮುಂಗಡ ಬುಕಿಂಗ್‌ ಬುಧವಾರದಿಂದಲೇ ಆರಂಭಗೊಂಡಿದೆ.

‘ಈ ಎರಡೂ ದುಬಾರಿ ಫೋನ್‌ಗಳು ಆ್ಯಪಲ್‌ನ ಐಫೋನ್‌, ಸೋನಿ, ಎಲ್‌ಜಿ  ಸ್ಮಾರ್ಟ್‌ಫೋನ್‌ಗಳಿಗೆ ಸ್ಪರ್ಧೆ ಒಡ್ಡಲಿದೆ. ಈ  ಸ್ಮಾರ್ಟ್‌ಫೋನ್‌ಗಳನ್ನು ಬಹಳ ದಿನಗಳಿಂದ ಎದುರು ನೋಡಲಾಗುತ್ತಿತ್ತು.  ವಿಶ್ವದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ಸ್ಯಾಮ್ಸಂಗ್‌ ಇಂಡಿಯಾದ ಹಿರಿಯ ಉಪಾಧ್ಯಕ್ಷ ಅಸಿಂ ವಾರ್ಸಿ ಹೇಳಿದ್ದಾರೆ.
‘ಸ್ಯಾಮ್ಸಂಗ್‌ ಡೆಕ್ಸ್‌ (DeX) ನೆರವಿನಿಂದ  ಸ್ಮಾರ್ಟ್‌ಫೋನ್‌ನಲ್ಲಿ  ಬಳಕೆದಾರರು ಪೂರ್ಣ ಪ್ರಮಾಣದ ಡೆಸ್ಕ್‌ಟಾಪ್‌  ಸ್ವರೂಪದ ಅನುಭವ ಪಡೆಯಬಹುದು’ ಎಂದು ಅವರು ಹೇಳಿದ್ದಾರೆ.

ADVERTISEMENT

ಈ ಎರಡೂ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವ ಗ್ರಾಹಕರು ₹ 309 ಪಾವತಿಸಿ ರಿಲಯನ್ಸ್‌ ಜಿಯೊ ಸಿಮ್‌ ಬಳಸಿದರೆ, 8 ತಿಂಗಳ ಕಾಲ 448 ಜಿಬಿಗಳಷ್ಟು ‘4ಜಿ’ ಡೇಟಾ ಪಡೆಯಬಹುದು.

ಸಂಸ್ಥೆ ಕಳೆದ ವರ್ಷ ಪರಿಚಯಿಸಿದ್ದ ‘ಗ್ಯಾಲಕ್ಸಿ ನೋಟ್‌ 7’ನ ಕೆಲ ಸ್ಮಾರ್ಟ್‌ಫೋನ್‌ಗಳು ವಿಶ್ವದಾದ್ಯಂತ ಬ್ಯಾಟರಿ ಸಮಸ್ಯೆಯಿಂದಾಗಿ ಬೆಂಕಿಗೆ ಆಹುತಿಯಾಗಿದ್ದರಿಂದ ಸಂಸ್ಥೆಯು ಅವುಗಳನ್ನು ವಾಪಸ್‌ ಕರೆಯಿಸಿಕೊಂಡಿತ್ತು. ಈ ಫೋನ್‌ಗಳು ಭಾರತದಲ್ಲಿ ಲಭ್ಯ ಇದ್ದಿರಲಿಲ್ಲ. ಇದರಿಂದಾಗಿ ಸಂಸ್ಥೆಗೆ ಕೋಟ್ಯಂತರ ಡಾಲರ್‌ಗಳ ನಷ್ಟ ಉಂಟಾಗಿತ್ತು.

ವೈಶಿಷ್ಟ್ಯಗಳು
ಎಸ್‌8 – 5.8 ಇಂಚು  ಪರದೆ
ಎಸ್‌8 ಪ್ಲಸ್‌ – 6.1 ಇಂಚು ಪರದೆ
12 ಎಂಪಿ  – ಹಿಂಭಾಗದ ಕ್ಯಾಮೆರಾ
8 ಎಂಪಿ – ಮುಂಭಾಗದ ಕ್ಯಾಮೆರಾ

ಮಾದರಿ – ಬೆಲೆ
ಗ್ಯಾಲಕ್ಸಿ ಎಸ್‌8 –  ₹ 57,900
ಗ್ಯಾಲಕ್ಸಿ ಎಸ್‌8 ಪ್ಸಸ್‌ – ₹ 64,900

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.