ADVERTISEMENT

ಹೆಚ್ಚುವರಿ ನಿರ್ದೇಶಕ

ಪಿಟಿಐ
Published 14 ಜನವರಿ 2017, 19:30 IST
Last Updated 14 ಜನವರಿ 2017, 19:30 IST

ನವದೆಹಲಿ: ಟಾಟಾ ಸ್ಟೀಲ್‌ ಕಂಪೆನಿಯ ಹೆಚ್ಚುವರಿ ನಿರ್ದೇಶಕರಾಗಿ ಎನ್‌. ಚಂದ್ರಶೇಖರನ್‌ ಅವರನ್ನು ನೇಮಿಸಲಾಗಿದೆ.

ಚಂದ್ರಶೇಖರನ್‌ ಅವರ ನೇಮಕಕ್ಕೆ ಕಂಪೆನಿ ಆಡಳಿತ ಮಂಡಳಿ ಸರ್ವಾನುಮತದ ಒಪ್ಪಿಗೆ ಸೂಚಿಸಿದೆ. ಶುಕ್ರವಾರದಿಂದಲೇ ಜಾರಿಗೆ ಬರುವಂತೆ ಅವರು ಆಡಳಿತ ಮಂಡಳಿಯನ್ನು ಸೇರಿದ್ದಾರೆ ಎಂದು ಕಂಪೆನಿ ಪ್ರಕಟಣೆ ತಿಳಿಸಿದೆ.

ಟಿಸಿಎಸ್‌ ಮುಖ್ಯಸ್ಥರಾಗಿದ್ದ ಚಂದ್ರಶೇಖರನ್‌ ಅವರನ್ನು ಟಾಟಾ ಸನ್ಸ್‌ನ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಜನವರಿ 12 ರಂದು ನೇಮಕ ಮಾಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.