ADVERTISEMENT

‘ರೆಜಿನ್‌’ ವೈರಸ್‌ ಸಿಮ್ಯಾಂಟೆಕ್‌ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2014, 19:30 IST
Last Updated 25 ನವೆಂಬರ್ 2014, 19:30 IST

ಲಂಡನ್‌ (ಪಿಟಿಐ): ಕಳೆದ ಆರು ವರ್ಷ­ಗಳಿಂದ ಭಾರತ ಸೇರಿದಂತೆ ವಿಶ್ವ­ದಾದ್ಯಂತ  ಸರ್ಕಾರಗಳ, ಕಂಪೆನಿಗಳ ಮತ್ತು ಶೈಕ್ಷಣಿಕ ಸಂಸ್ಥೆಗಳ ಸೂಕ್ಷ ಮಾಹಿತಿ­ಗಳನ್ನು ದೋಚುತ್ತಿರುವ ಆಧುನಿಕ  ಬೇಹುಗಾರ ತಂತ್ರಾಂಶ­ವೊಂದು (ಸ್ಪೈ ಸಾಫ್ಟ್‌ವೇರ್‌) ಪತ್ತೆ­ಯಾಗಿದೆ ಎಂದು ಅಮೆರಿಕದ ಭದ್ರತಾ ಕಂಪೆನಿ ಸಿಮ್ಯಾಂಟೆಕ್‌ ಹೇಳಿದೆ.

‘ರೆಜಿನ್‌’ ಹೆಸರಿನ ಈ ಬೇಹುಗಾರ ತಂತ್ರಾಂಶವನ್ನು ಯಾವೊದೋ ಒಂದು ದೇಶಕ್ಕಾಗಿ ಕೆಲಸ ಮಾಡುತ್ತಿರುವ ಕಂಪ್ಯೂಟರ್‌ ಪರಿಣತರು ಸೃಷ್ಟಿಸಿದ್ದಾರೆ ಎಂದು ಸಿಮ್ಯಾಂಟೆಕ್‌ ವರದಿ ತಿಳಿಸಿದೆ. ಆದರೆ ಇದರ ಹಿಂದೆ ಯಾವ ಸರ್ಕಾರದ ಕೈವಾಡವಿದೆ ಎಂದು ವರಿದಯಲ್ಲಿ ಹೇಳಿಲ್ಲ.

ಕೆಲವೇ ಮಾಲ್‌ವೇರ್‌ಗಳು ಮಾತ್ರ ಬಹಳ ಅಪಾಯಕಾರಿ ಅಥವಾ ಹೆಚ್ಚು ಹಾನಿ ಮಾಡುವ ಸಾಧ್ಯತೆ ಇರುವವು. ಇಂತಹ ಮಾಲ್‌ವೇರ್‌ಗಳ ಸಾಲಿಗೆ ಈ ರೆಜಿನ್‌ ಸೇರಿದ್ದು ಎಂದು ವರದಿ ಮಾಹಿತಿ ನೀಡಿದೆ.

ರಷ್ಯಾ ಗರಿಷ್ಠ ಶೇ28ರಷ್ಟು ‘ರೆಜಿನ್‌’ ದಾಳಿಗೆ ತುತ್ತಾಗಿದೆ. ಐರ್ಲೆಂಡ್‌, ಮೆಕ್ಸಿಕೊ, ಇರಾನ್‌, ಭಾರತ, ಬೆಲ್ಜಿಯಂ, ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ಕೂಡಾ ಈ ವೈರಸ್‌ ದಾಳಿಗೆ ಒಳಗಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.