ADVERTISEMENT

ಜಯಲಲಿತಾ ಕಾವೇರಿ ನೀರಿಗೆ ಅನುಸರಿಸಿದ ನಿಲುವು ನಮ್ಮದಾಗಲಿ

​ಪ್ರಜಾವಾಣಿ ವಾರ್ತೆ
Published 24 ಮೇ 2017, 10:02 IST
Last Updated 24 ಮೇ 2017, 10:02 IST

ಜಮಖಂಡಿ: ಕುಡಿಯಲು ನೀರು ಬೇಕು ಎಂದು ಬೇಡಿಕೆ ಮಂಡಿಸಿ ಪ್ರತಿ ವರ್ಷ ಬೇಸಿಗೆಯಲ್ಲಿ ಮಹಾರಾಷ್ಟ್ರ ಜಲಾಶಯ ದಿಂದ ಕೃಷ್ಣಾ ನದಿಗೆ ನೀರು ಬಿಡಿಸಿ ಕೊಳ್ಳುವುದು ತಪ್ಪು ಎಂದು ಮಾಜಿ ಶಾಸಕ ಬಾಬುರೆಡ್ಡಿ ತುಂಗಳ ಟೀಕಿಸಿದ್ದಾರೆ.

ತಮಿಳುನಾಡಿನ ಮಾಜಿ ಮುಖ್ಯ ಮಂತ್ರಿ ದಿವಂಗತ ಜೆ. ಜಯಲಲಿತಾ ಕುಡಿ ಯಲು ಕಾವೇರಿ ನೀರು ಬಿಡಿ ಎಂದು ಒಮ್ಮೆಯೂ ಬೇಡಿಕೆ ಇಟ್ಟಿರಲಿಲ್ಲ. ಜಮೀನುಗಳಲ್ಲಿ ಬೆಳೆದು ನಿಂತ ಸಾಂಬಾ (ಮುಂಗಾರು) ಬೆಳೆಗಳನ್ನು ಉಳಿಸಿ ಕೊಳ್ಳಲು ನೀರು ಬೇಕು ಎಂಬುವುದು ಅವರ ಗಟ್ಟಿಯಾದ ನಿಲುವು ಆಗಿತ್ತು ಎಂದರು.

ಪ್ರಸಕ್ತ ಬೇಸಿಗೆಯುಲ್ಲಿ ಮಹಾರಾಷ್ಟ್ರ ಜಲಾಶಯದಿಂದ ಕೃಷ್ಣಾ ನದಿಗೆ ಈ ಮೊದಲು ಹರಿಸಿದ್ದ ಹಾಗೂ ಈಗ  ಹರಿ ಸುತ್ತಿರುವ ನೀರು ಕುಡಿಯಲು ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಸಂಗತಿ ಎನಿಸಿದೆ ಎಂದು ಟೀಕಿಸಿದ್ದಾರೆ.

ADVERTISEMENT

ಪ್ರತಿ ಗ್ರಾಮದಲ್ಲಿ ಈಗ ಶುದ್ಧ ಕುಡಿ ಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಬಹುಪಾಲು ಜನರು ಶುದ್ಧ ಕುಡಿಯುವ ನೀರಿನ ಘಟಕದಿಂದ ಕುಡಿಯುವ ನೀರು ಪಡೆಯುತ್ತಾರೆ. ಆದರೆ, ನೀರು ಬಿಡಿಸುವ ವಿಷಯದಲ್ಲಿ ನಡೆಯುತ್ತಿರುವ ಸ್ಪರ್ಧೆ ನೋಡಿದರೆ ಅತ್ಯಂತ ನಾಚಿಕೆಗೇಡಿನ ಸಂಗತಿ ಎನಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾವು ನೀರು ಬಿಡಿಸಿದ್ದೇವೆ ಎಂದು ಒಂದು ರಾಜಕೀಯ ಪಕ್ಷದವರು ಹೇಳಿ ಕೊಂಡರೆ ಇನ್ನೊಂದು ಪಕ್ಷ ತಾವು ನೀರು ಬಿಡಿಸಿರುವುದಾಗಿ ಹೇಳಿ ಕೃಷ್ಣೆಯ ಪೂಜೆ ಗಾಗಿ ಊದಿನ ಕಡ್ಡಿ, ಕುಂಕುಮ ಹಿಡಿದು ಕೊಂಡು ನಿಂತಿರುತ್ತಾರೆ. ಈ ಸ್ಪರ್ಧೆಯಲ್ಲಿ ಲಕ್ಷಾಂತರ ಎಕರೆ ಜಮೀನಿನಲ್ಲಿ ಬೆಳೆದ ಬೆಳೆಗಳು ಒಣಗಿ ಹೋದರೂ ಯಾರಿಗೂ ಕಾಣುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

2017ರ ಮೇ 17 ರಂದು ತಾಲ್ಲೂ ಕಿನ ಬಿದರಿ ಗ್ರಾಮದಲ್ಲಿ ನಡೆದಿದ್ದ ಸಮಾ ರಂಭವೊಂದರಲ್ಲಿ ಶಾಸಕ ಸಿದ್ದು ನ್ಯಾಮ ಗೌಡ ಮಾತನಾಡಿ, ಸಂಜೆ 4 ಗಂಟೆಯೊ ಳಗಾಗಿ ಬೆಳಗಾವಿ ತಲುಪಿ ಅಲ್ಲಿಂದ ವಿಮಾನ ಮೂಲಕ ಬೆಂಗಳೂರು ತಲುಪಿ ಅಲ್ಲಿಂದ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಅವರ ಜೊತೆಗೂಡಿ ಮುಂಬೈಗೆ ಹೋಗಿ ಮಹಾರಾಷ್ಟ್ರ ಜಲಾ ಶಯದಿಂದ ಕೃಷ್ಣಾನದಿಗೆ ನೀರು ಬಿಡಿಸ ಬೇಕಾಗಿದೆ ಎಂದು ಹೇಳಿ ತಮ್ಮ ಭಾಷಣ ವನ್ನು ಮಧ್ಯದಲ್ಲಿಯೇ ಮುಗಿಸಿ ವೇದಿಕೆ ಯಿಂದ ನಿರ್ಗಮಿಸಿದ್ದರು.

ಆದರೆ, ಮರು ದಿವಸ ಅವರು ಎಲ್ಲಿಯೂ ಹೋಗಿರಲಿಲ್ಲ. ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನೀರಾ ವರಿ ಇಲಾಖೆಗಳ ಕಾರ್ಯದರ್ಶಿಗಳ ಮಟ್ಟದಲ್ಲಿ ನಡೆದ ಮಾತುಕತೆಗಳ ಪರಿಣಾಮವಾಗಿ ಈಗ ರಾಜಾಪುರ ಬ್ಯಾರೇಜ್‌ನಿಂದ ಕೃಷ್ಣಾನದಿಗೆ ನೀರು ಹರಿದು ಬರುತ್ತಿದೆ. ನೀರಿನ ರಾಜಕೀಯ ದಲ್ಲಿ ರಾಜಕಾರಣಿಗಳು ಸುಳ್ಳು ಹೇಳು ವುದರಲ್ಲಿ ನಿಸ್ಸೀಮರು ಎಂಬುವುದನ್ನು ಇದು ಸಾಬೀತುಪಡಿಸಿದೆ ಎಂದು ಟೀಕಿಸಿದರು.

ನೀರಿನ ರಾಜಕೀಯ ಕುರಿತು ಬಿಜೆಪಿ ಧುರೀಣ ಬಿ.ಎಸ್‌. ಸಿಂಧೂರ ಪತ್ರಿಕೆಗಳಿಗೆ ನೀಡಿರುವ ಹೇಳಿಕೆಯನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ. ಯಾರೋ ಬಿಡಿಸಿದ ನೀರನ್ನು ನಾನೇ ಬಿಡಿಸಿದ್ದೇನೆ ಎಂದು ಜನರನ್ನು ವಂಚಿಸು ವುದು ಬಹಳ ದಿನಗಳ ಕಾಲ ನಡೆ ಯುದಿಲ್ಲ ಎಂದರು.

ಕೃಷ್ಣಾನದಿಯ ಎರಡೂ ದಂಡೆಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತ ಮಾಡ ಲಾಗುತ್ತದೆ. ಹೀಗಾಗಿ ಒಂದು ಹನಿ  ನೀರು ಬೆಳೆಗಳಿಗೆ ತಲುಪುವುದಿಲ್ಲ. ಹರಿಯುವ ಅಶುದ್ಧ ನೀರನ್ನು ಜನರೂ ಕುಡಿಯುವುದಿಲ್ಲ. ಹೀಗಿದ್ದರೂ ಕುಡಿಯಲು ನೀರು ಬಿಡಿಸಿರುವುದಾಗಿ ಹೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.