ADVERTISEMENT

ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಇಸ್ರೇಲ್ ವಿಜ್ಞಾನಿಗಳ ತಂಡ ಭೇಟಿ

​ಪ್ರಜಾವಾಣಿ ವಾರ್ತೆ
Published 17 ಮೇ 2017, 9:09 IST
Last Updated 17 ಮೇ 2017, 9:09 IST

ಬಾಗಲಕೋಟೆ: ಇಸ್ರೇಲ್ ಅಭಿವೃದ್ಧಿಪಡಿಸಿದ ತೋಟಗಾರಿಕೆ ಬೆಳೆಗಳು ಹಾಗೂ ಅವುಗಳ ತಾಂತ್ರಿಕತೆ ಕುರಿತು ಇಲ್ಲಿನ ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಸೋಮವಾರ ಭೇಟಿ ನೀಡಿದ ಇಸ್ರೇಲ್ ವಿಜ್ಞಾನಿಗಳ ತಂಡದ ಜೊತೆ ವಿದ್ಯಾರ್ಥಿಗಳು ಚರ್ಚೆ ನಡೆಸಿದರು.

ದಾಳಿಂಬೆ ಬೆಳೆಯ ಉತ್ಪಾದನಾ ಸಮಸ್ಯೆ, ರೋಗ ನಿರ್ವಹಣಾ ತಂತ್ರಜ್ಞಾನ ಹಾಗೂ ಕೊಯ್ಲಿನ ನಂತರದ ತಾಂತ್ರಿಕತೆಗಳ ವಿಚಾರದ ಕುರಿತು ವಿಜ್ಞಾನಿ ಶಿಮೋನ್ ಆಂಯಟ್ಮನ್ ಮತ್ತು ತಂಡ ಅನುಭವ ಹಂಚಿಕೊಳ್ಳುವ ಮೂಲಕ ಸಲಹೆ ಹಾಗೂ ಸೂಚನೆ ನೀಡಿತು.

ಸಂರಕ್ಷಿತ ಕೃಷಿಯಲ್ಲಿ ವಿಶೇಷ ತಂತ್ರಜ್ಞಾನ ರೂಪಿಸಿರುವ ಇಸ್ರೇಲ್ ದೇಶದ ವಿಜ್ಞಾನಿಗಳು, ನಮ್ಮ ದೇಶದಲ್ಲಿ ಅಳವಡಿ ಸುವ ಬಗ್ಗೆ ಕೈಗೊಳ್ಳಬಹುದಾದ ಕಾರ್ಯ ಕ್ರಮ ಹಾಗೂ ಒಡಂಬಡಿಕೆಗಳ ಸಾಧ್ಯತೆ ಬಗ್ಗೆ ಕುಲಪತಿ ಡಾ.ಡಿ.ಎಲ್.ಮಹೆಶ್ವರ್ ಅವರು ಅಧಿಕಾರಿಗಳ ಜೊತೆ ವಿಚಾರ ವಿನಿಮಯ ನಡೆಸಿದರು. ಕುಲಸಚಿವ ಡಾ.ಎ.ಬಿ.ಪಾಟೀಲ, ಡಾ.ಎಚ್.ಬಿ. ಲಿಂಗಯ್ಯ, ವೈ.ಕೆ.ಕೋಟಿಕಲ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.