ADVERTISEMENT

ಬಡ್ತಿ ಮೀಸಲಾತಿ ಉಳಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2017, 5:46 IST
Last Updated 13 ಮಾರ್ಚ್ 2017, 5:46 IST
ಮುಧೋಳದಲ್ಲಿ  ಭಾನುವಾರ  ಬಹುಜನ ವಿದ್ಯಾರ್ಥಿ ಸಂಘ  ಬಡ್ತಿ ಮೀಸಲಾತಿ ಆಗ್ರಹಿಸಿ ಶಾಸಕ ಗೋವಿಂದ ಕಾರಜೋಳ ಅವರಿಗೆ ಮನವಿ ಸಲ್ಲಿಸಿದರು
ಮುಧೋಳದಲ್ಲಿ ಭಾನುವಾರ ಬಹುಜನ ವಿದ್ಯಾರ್ಥಿ ಸಂಘ ಬಡ್ತಿ ಮೀಸಲಾತಿ ಆಗ್ರಹಿಸಿ ಶಾಸಕ ಗೋವಿಂದ ಕಾರಜೋಳ ಅವರಿಗೆ ಮನವಿ ಸಲ್ಲಿಸಿದರು   

ಮುಧೋಳ: ಎಸ್‌ಸಿ ಹಾಗೂ ಎಸ್.ಟಿ ಜನಾಂಗದ ನೌಕರರ ಬಡ್ತಿ ಮೀಸಲಾತಿ ತೀರ್ಪಿನ ವಿರುದ್ಧ ಮರು ಪರಿಶೀಲನಾ ಅರ್ಜಿ ಸಲ್ಲಿಸಿ ಬಡ್ತಿ ಮೀಸಲಾತಿಯನ್ನು ಉಳಿಸಲು ತುರ್ತು ಕ್ರಮ ಜರುಗಿಸಬೇಕು ಎಂದು ಹೋರಾಟಗಾರ ಎಂ.ಬಿ.ಸಿದಗೋಣಿ ಆಗ್ರಹಿಸಿದರು.

ಭಾನುವಾರ ಪ್ರತಿಭಟನೆಯಲ್ಲಿ ಮಾತನಾಡಿ ನ್ಯಾಯಾಲಯದ ತೀರ್ಪುನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ಸಂವಿಧಾನ ಬದ್ಧ ಹಕ್ಕನ್ನು ರಕ್ಷಿಸಲು ಧಾವಿಸಬೇಕು ಎಂದರು.

ಅಶೋಕ ಮೀಸಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಖಾಸಗಿ ವಲಯದ ಉದ್ಯೋಗಗಳಲ್ಲೂ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು. ಮನವಿ ಸ್ವೀಕರಿಸಿದ ಶಾಸಕ ಗೋವಿಂದ ಕಾರಜೋಳ ಮಾತನಾಡಿ, ಪರಿಶಿಷ್ಟ ಹಾಗೂ ಹಿಂದುಳಿದ ಜನಾಂಗದವರಿಗೆ ನ್ಯಾಯ ಸಿಗಬೇಕಾಗಿದೆ ಎಂದರು.

ADVERTISEMENT

ಪ್ರಮುಖರಾದ ಬಿ.ಡಿ.ದೊಡಮನಿ, ಸಂತೋಷ ತಳಕೇರಿ, ವಿ.ಜಿ.ಭಜಂತ್ರಿ, ಹುಸೇನ್ ಚಲವಾದಿ,  ಮೀನಾಕ್ಷಿ ಚಲವಾದಿ, ಸತ್ಯವ್ವ ಮಾದರ, ಶ್ರೀಕಾಂತ ಮೇಗಾಡಿ ಸುಜ್ಞಾನಿ ಆಕಾಶಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.