ADVERTISEMENT

‘ಶಾಲೆ ನಮ್ಮದೆಂಬ ಭಾವ ಬೆಳೆಯಲಿ’

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2017, 5:35 IST
Last Updated 20 ಸೆಪ್ಟೆಂಬರ್ 2017, 5:35 IST

ಹುನಗುಂದ: ಅದು ಕೇಂದ್ರ ಶಾಲೆ. ಒಂದು ಕಾಲಕ್ಕೆ ಸಾವಿರಾರು ವಿದ್ಯಾರ್ಥಿ ಗಳಿಂದ ತುಂಬಿರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಖಾಸಗಿ ಶಾಲೆಗಳ ಅಬ್ಬರ, ಜನರ ಕಾನ್ವೆಂಟ್ ಭ್ರಮೆಯಿಂದಾಗಿ ಸಂಖ್ಯೆಯಲ್ಲಿ ಸೊರಗಿದೆ.

ಸಾಕಷ್ಟು ಕೋಣೆಗಳು, ವಿಶಾಲ ಆಟದ ಮೈದಾನ, ಎಲ್ಲ ಮೂಲ ಸೌಲಭ್ಯ ಗಳಿದ್ದು ಜನರು ಯಾಕೆ ಸರ್ಕಾರಿ ಶಾಲೆ ಗಳತ್ತ ಬರುತ್ತಿಲ್ಲ ಎಂಬುವುದು ಕಾಡಿ ದಾಗ ಶಾಲೆಯ ಹಳೆಯ ವಿದ್ಯಾರ್ಥಿಗಳು ಸೇರಿ ಶಾಲಾ ಆಕರ್ಷಣೆಗೆ ಮುಂದಾಗಿ ರುವ ಅಪರೂಪದ ಕ್ಷಣಕ್ಕೆ ಈ ಶಾಲೆ ಶನಿವಾರ ಸಾಕ್ಷಿಯಾಯಿತು.

ಅದೇ ಶಾಲೆಯಲ್ಲಿ ಓದಿ ಇಂದು ಸಮಾಜದ ವಿವಿಧ ಸ್ಥಾನಗಳಲ್ಲಿರುವ ವೀರಣ್ಣ ಇಳಕಲ್ಲ, ಮಹಾಂತೇಶ ಹಳ್ಳೂರ, ಶೇಖರಪ್ಪ ಹಳಪೇಟಿ, ಡಿ.ಕೆ. ಶಶಿಮಠ, ನೀಲಪ್ಪ ಕುರಿ ಮುಂತಾದ ವರೆಲ್ಲ ಸೇರಿ ಶಾಲೆ ಅಂದಚೆಂದದ ಆಕರ್ಷಣೆಯ ಕಾರ್ಯಕ್ಕೆ ಮುಂದಾದರು.

ADVERTISEMENT

ಇದಕ್ಕೆ ಶಾಲೆಯ ಶಿಕ್ಷಕ ವೃಂದವೂ ಕೈಗೂಡಿಸಿತು. ಪರಿಣಾಮವಾಗಿ ಈಚೆಗೆ ಇಡೀ ಶಾಲೆಯ ಆವರಣವನ್ನು ಸ್ವಚ್ಛ ಗೊಳಿಸಿದ್ದಲ್ಲದೇ 110 ಸಸಿಗಳನ್ನು ಹಚ್ಚಿ ಮಕ್ಕಳಿಗೆ ಪರಿಸರ ಮತ್ತು ಓಝೋನ್ ಜಾಗೃತಿಯ ಪಾಠ ಮಾಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಇಒ ಡಾ.ಗುರುನಾಥ ಹೂಗಾರ ಮಾತನಾಡಿ, ಶಾಲೆ ಸಮುದಾಯದ ಆಸ್ತಿ ಎಂಬುವುದನ್ನು ಸಕರಾತ್ಮಕವಾಗಿ ತೆಗೆದು ಕೊಳ್ಳಬೇಕು. ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತ ಎಸ್‌ಡಿಎಂಸಿ ಹಾಗೂ ಹಳೆಯ ವಿದ್ಯಾರ್ಥಿ ಗಳ ಜೊತೆಗೂಡಿ ಅಭಿವೃದ್ಧಿ ಕಾರ್ಯ ಸೂಚಿ ಮತ್ತು ಗುಣಾತ್ಮಕ ಶಿಕ್ಷಣದ ಬಗ್ಗೆ ಚಿಂತನೆ ಮಾಡಿದರೆ ನಮ್ಮ ಶೈಕ್ಷಣಿಕ ಉದ್ದೇಶ ಸಾಧಿಸುತ್ತದೆ ಎಂದು ಹೇಳಿದರು.

ಸ್ವಚ್ಛತೆಯ ನೇತೃತ್ವ ವಹಿಸಿದ್ದ ವೀರಣ್ಣ ಇಳಕಲ್ಲ ಪ್ರತಿಕ್ರಿಯಿಸಿ, ಶಾಲೆ ನಮ್ಮದೆ ನ್ನುವ ಮನೋಭಾವ ಎಲ್ಲರಲ್ಲೂ ಬರ ಬೇಕು. ಸಮುದಾಯ ಶಾಲಾ ಕಟ್ಟಡ ವನ್ನು ಯಾವ ಕಾರಣಕ್ಕೂ ದುರ್ಬಳಕೆ ಮಾಡಿಕೊಳ್ಳಬಾರದು. ಎಂಥ ಸಂದರ್ಭದಲ್ಲಿಯೂ ಯಾರೂ ಅನಾದರ ತೋರದೇ ಕಾರ್ಯದಲ್ಲಿ ಮುಂದಾದಲ್ಲಿ ಯಶಸ್ಸು ತಾನಾಗಿ ದೊರೆಯುತ್ತದೆ. ಅದ ರಂತೆ ಅಲ್ಲಿನ ಸಿಬ್ಬಂದಿ ಹೆಚ್ಚಿನ ಜವಾ ಬ್ದಾರಿಕೆಯನ್ನು ತೋರಬೇಕು ಎಂದು ಹೇಳಿದರು.

ಮುಖ್ಯಶಿಕ್ಷಕ ಬಿ.ಬಿ.ಲಮಾಣಿ, ಉರ್ದು ಪ್ರೌಢಶಾಲೆ ಮುಖ್ಯ ಶಿಕ್ಷಕ ಹೊಸಮನಿ, ಸಿಆರ್‌ಪಿ ಹಳ್ಳಿ, ಶಿಕ್ಷಕರಾದ ಎಂ.ಟಿ.ನಡುವಿನಮನಿ, ಶಂಕರ ಹುನಗುಂದ, ಬಿ.ಎಚ್.ಕರಡಿ ಭಾಗವಹಿಸಿದ್ದರು. ಈರಣ್ಣ ಇಳಕಲ್ಲ ತಮ್ಮ ಈ ಜನಹಿತ ಕಾರ್ಯಕ್ಕೆ ನೆರವಾದವರಿಗೆ ಕೃತಜ್ಞತೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.