ADVERTISEMENT

ಹಸಿರು ಯಜ್ಞಕ್ಕೆ ಉತ್ಸಾಹಿಗಳ ಸಾಥ್ !

ವೆಂಕಟೇಶ್ ಜಿ.ಎಚ್
Published 11 ಸೆಪ್ಟೆಂಬರ್ 2017, 6:28 IST
Last Updated 11 ಸೆಪ್ಟೆಂಬರ್ 2017, 6:28 IST
ಬಾಗಲಕೋಟೆಯಲ್ಲಿ ಭಾನುವಾರ ಗಿಡ ನೆಡುವ ಪ್ರಕ್ರಿಯೆಯಲ್ಲಿ ತೊಡಗಿದ್ದವರು
ಬಾಗಲಕೋಟೆಯಲ್ಲಿ ಭಾನುವಾರ ಗಿಡ ನೆಡುವ ಪ್ರಕ್ರಿಯೆಯಲ್ಲಿ ತೊಡಗಿದ್ದವರು   

ಬಾಗಲಕೋಟೆ: ವೈದ್ಯರು, ಉದ್ಯಮ ಶೀಲರು, ವ್ಯಾಪಾರಸ್ಥರು, ಸರ್ಕಾರಿ ನೌಕ ರರು ಹೀಗೆ ಸಮಾಜದ ಬೇರೆ ಬೇರೆ ರಂಗದವರನ್ನು ಒಳಗೊಂಡಿರುವ ಬಾಗಲಕೋಟೆ ಸಾಮಾಜಿಕ ಕಾರ್ಯಕ ರ್ತರ ಪಡೆ (ಬಿಎಸ್‌ಡಬ್ಲ್ಯು) ಸದ್ದಿಲ್ಲದೇ ನಗರದಲ್ಲಿ ಹಸಿರೀಕರಣ ಪ್ರಕ್ರಿಯೆಗೆ ಕೈ ಹಾಕಿದೆ.

ಬಿಎಸ್‌ಡಬ್ಲ್ಯುನ ಈ ಕೈಂಕರ್ಯದಲ್ಲಿ ನಗರಸಭೆ ಆಡಳಿತ ಹಾಗೂ ಅರಣ್ಯ ಇಲಾಖೆ ಕೈ ಜೋಡಿಸಿವೆ. ಅರಣ್ಯ ಇಲಾಖೆ ಉಚಿತವಾಗಿ ಗಿಡಗಳನ್ನು ನೀಡಿದರೆ ನಗರಸಭೆ ಸಿಬ್ಬಂದಿ ನೀರಿನ ವ್ಯವಸ್ಥೆ ಮಾಡುವ ಜೊತೆಗೆ ಗುಂಡಿ ತೆಗೆಯಲು ನೆರವಾಗುತ್ತಿದ್ದಾರೆ. ಇದರಿಂದ ಕಳೆದ ಏಳು ವಾರಗಳಲ್ಲಿ 1400ಕ್ಕೂ ಹೆಚ್ಚು ಗಿಡಗಳನ್ನು ನಗರದ ವಿವಿಧೆಡೆಯ ಸರ್ಕಾರಿ ಜಾಗದಲ್ಲಿ ಹಾಗೂ ಸರ್ಕಾರಿ ಕಟ್ಟಡಗಳ ಅಂಗಳದಲ್ಲಿ ನೆಡಲಾಗಿದೆ.

ಕಳೆದ ವರ್ಷದ ಮಳೆಗಾಲದಲ್ಲಿ ಆರು ಸಾವಿರ ಗಿಡಗಳನ್ನು ನೆಡುವ ಮೂಲಕ ಗಮನಸೆಳೆದಿದ್ದ ಬಿಎಸ್‌ಡಬ್ಲ್ಯು ಈ ಬಾರಿ 10 ಸಾವಿರ ಗಿಡಗಳನ್ನು ನೆಡುವ ಗುರಿಯೊಂದಿಗೆ ಕಾರ್ಯೋನ್ಮುಖವಾಗಿದೆ. ಹಳೆ ಪ್ರವಾಸಿ ಮಂದಿರದ ಆವರಣ, ಲಯನ್ಸ್ ಶಾಲೆ ಹಿಂಭಾಗದ ಅರಣ್ಯ ಇಲಾಖೆಯ ಖಾಲಿ ಜಾಗ, ದಡ್ಡೇನವರ ಆಸ್ಪತ್ರೆ ಮುಂಭಾಗದ ಮೂರು ಎಕರೆ ಖಾಲಿ ಜಾಗ, ಹೌಸಿಂಗ್ ಕಾಲೊನಿಯಲ್ಲಿ ಸರ್ಕಾರಿ ಜಾಗಕ್ಕೆ ಹಸಿರು ಉಡಿಸುವ ಪ್ರಕ್ರಿಯೆ ಸಾಗಿದೆ. ಪ್ರತಿಷ್ಠಿತ ಆಸ್ಪತ್ರೆಗಳ ಹಿರಿಯ ವೈದ್ಯರು, ಈಗಷ್ಟೇ ಕೋರ್ಸ್ ಮುಗಿಸಿ ಬಂದ ಕಿರಿಯರು, ಅವರ ಕುಟುಂಬ ವರ್ಗದವರು ವಯಸ್ಸು, ಅಂತಸ್ತು, ಜಾತಿ–ಧರ್ಮದ ಬೇಧ ಮರೆತು ಬಿಎಸ್‌ಡಬ್ಲ್ಯುನ ಅಡಿ ಪ್ರತಿ ಭಾನುವಾರ ಈ ಹಸಿರು ಯಜ್ಞದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ADVERTISEMENT

ವಿದ್ಯಾರ್ಥಿಗಳಿಗೆ ಪರಿಸರ ಶಿಕ್ಷಣ: ‘ಖಾಲಿ ಜಾಗದಲ್ಲೊಂದು ಗಿಡ ನೆಟ್ಟು ಅಲ್ಲೊಂದು ಫೊಟೊ ತೆಗೆಸಿಕೊಂಡು ತೆರಳುವ ಕೆಲಸ ಮಾಡದೇ ಅವುಗಳ ಪಾಲನೆ–ಪೋಷಣೆಯ ಹೊಣೆಯನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಗಿಡ ನೆಟ್ಟ ಜಾಗದ ಸಮೀಪದ ಶಾಲೆ–ಕಾಲೇಜುಗಳ ವಿದ್ಯಾರ್ಥಿಗಳನ್ನು ಭೇಟಿಯಾಗಿ  ಅವುಗಳ ನಿರ್ವಹಣೆ ಜವಾಬ್ದಾರಿ ವಹಿಸುವ ಜೊತೆಗೆ ಅವರಿಗೂ ಪರಿಸರ ಜಾಗೃತಿಯ ಪಾಠ ಹೇಳಿಕೊಡುವ ಅರ್ಥಪೂರ್ಣ ಕೆಲಸವನ್ನು ಬಿಎಸ್‌ಡಬ್ಲ್ಯು ಮಾಡುತ್ತಿದೆ’ ಎಂದು ಹೇಳುತ್ತಾರೆ ಸಂಘಟನೆಯ ಸಂಚಾಲಕ ಶ್ರೀಧರ ದಾಸ್. ಮಕ್ಕಳು ಅವುಗಳ ನಿರ್ವಹಣೆ ಹೊಣೆ ಹೊರುತ್ತಿದ್ದಂತೆಯೇ ಗಿಡಗಳಿಗೆ ಅಗತ್ಯವಿರುವ ನೀರಿನ ವ್ಯವ ಸ್ಥೆಯನ್ನು ನಗರಸಭೆಯಿಂದ ಮಾಡಿಸಲಾಗುತ್ತಿದೆ. ಪ್ರತಿ ವಿದ್ಯಾರ್ಥಿಯೂ ವೈಯಕ್ತಿಕವಾಗಿ ಒಂದೊಂದು ಗಿಡದ ರಕ್ಷಣೆಯ ಜವಾಬ್ದಾರಿ ಹೊರುವುದ ರಿಂದ ಹೆಚ್ಚಿನ ನಿಗಾ ಇಡಲು ಸಾಧ್ಯವಾ ಗುತ್ತಿದೆ ಎಂಬುದು ದಾಸ್  ಅಭಿಮತ.

ನಗರಸಭೆಯಿಂದ ಪತ್ರ ನೀಡಿಕೆ: ‘ನೆಟ್ಟ ಗಿಡಗಳ ಪೋಷಣೆ ಹೊಣೆಯನ್ನು ಪ್ರಾರ್ಥನಾ ಕಾಲೇಜು ಹಾಗೂ ವಿವೇಕಾನಂದ ಶಾಲೆಯ ಮಕ್ಕಳಿಗೆ ನೀಡಲಾಗಿದೆ. ಅಲ್ಲಿ ನಗರಸಭೆಯಿಂದ ಫಲಕ ಹಾಕಿ ನಿರ್ವಹಣೆ ಜವಾಬ್ದಾರಿಯನ್ನು ಇಂತಹ ಸಂಸ್ಥೆಗೆ ವಹಿಸಲಾಗಿದೆ ಎಂಬುದನ್ನು ಉಲ್ಲೇಖಿಸಲಾಗುತ್ತದೆ. ಸರ್ಕಾರಿ ಜಾಗ ಒತ್ತುವರಿಯಾಗದಂತೆ ತಡೆಯಲು, ಕಸದ ತೊಟ್ಟಿಯಾಗದಂತೆ ನೋಡಿಕೊಳ್ಳಲು ಹಾಗೂ ಬರಡಾಗದಂತೆ ಮಾಡಲು ಹಸಿರೀಕರಣ ಪ್ರಕ್ರಿಯೆ ಸೂಕ್ತ’ ಎಂದು ಹೇಳುತ್ತಾರೆ.

‘ಹಿಂದಿನ ವರ್ಷ ಹಳೆ ಎಪಿಎಂಸಿ ಹಿಂಭಾಗದಲ್ಲಿನ 10 ಎಕರೆ ಸರ್ಕಾರಿ ಭೂಮಿ ಹಾಗೂ ರೂಪ್‌ಲ್ಯಾಂಡ್ ಉದ್ಯಾನದಲ್ಲಿ 10 ಸಾವಿರ ಗಿಡಗಳನ್ನು ನೆಡಲಾಗಿತ್ತು. ಅವು ಹಾಳಾಗದಂತೆ ಸಂಘಟನೆ ವಹಿಸಿದ ನಿಗಾ ಹಾಗೂ ನಗರಸಭೆಯಿಂದ ಉತ್ತಮ ನಿರ್ವಹಣೆ ದೊರೆತ ಫಲವಾಗಿ ಇಂದು ಸಮೃದ್ಧವಾಗಿ ಬೆಳೆದು ನಳನಳಿಸುತ್ತಿವೆ. ಅಲ್ಲಿ ಹನಿ ನೀರಾವರಿ ವ್ಯವಸ್ಥೆ ಕೂಡ ಮಾಡಿದ್ದೆವು. ಗಿಡಗಳಿಗೆ ಆಧಾರವಾಗಿ ಕಡ್ಡಿ ನೆಡಲು ಅಗತ್ಯವಿರುವ ಹಣವನ್ನು ಸಂಘದ ಸದಸ್ಯರೇ ಭರಿಸಿದ್ದೇವೆ’ ಎಂದು ಶ್ರೀಧರ ದಾಸ್ ತಿಳಿಸಿದರು.

ತ್ಯಾಜ್ಯ ನೀರಿನ ಪುನರ್ಬಳಕೆ..
‘ಸಾಮಾಜಿಕ ಕಾರ್ಯಕರ್ತರ ಸಹಯೋಗದಲ್ಲಿ ನೆಡಲಾದ ಗಿಡಗಳನ್ನು ಉಳಿಸಿಕೊಳ್ಳಲು ತ್ಯಾಜ್ಯ ನೀರನ್ನು ಪುನರ್ಬಳಕೆ ಮಾಡಿ ಕೊಂಡು ಅವುಗಳಿಗೆ ಹನಿ ನೀರಾ ವರಿ (ಡ್ರಿಪ್‌) ವ್ಯವಸ್ಥೆ ಮಾಡು ತ್ತಿದ್ದೇವೆ’ ಎಂದು ನಗರಸಭೆ ಪರಿಸರ ಅಧಿಕಾರಿ ಹನುಮಂತ ಕಲಾದಗಿ ಹೇಳುತ್ತಾರೆ.

‘ನಗರದ ವಿವಿಧೆಡೆ ಇರುವ ಶುದ್ಧ ಕುಡಿಯುವ ನೀರಿನ ಘಟಕ ಗಳಲ್ಲಿ ಸಂಸ್ಕರಣೆಗೊಂಡು ತ್ಯಾಜ್ಯ ಎಂದು ಚರಂಡಿಗೆ ಬಿಡುತ್ತಿದ್ದ ನೀರ ನ್ನೇ ಈಗ ಗಿಡಗಳಿಗೆ ಉಣಬ ಡಿಸು ತ್ತಿದ್ದೇವೆ. ಮುಚಖಂಡಿ ಕ್ರಾಸ್‌ನ ಶುದ್ಧ ಕುಡಿಯುವ ನೀರಿನ ಘಟಕದ ತ್ಯಾಜ್ಯ ನೀರನ್ನು ಬಳಸಿಕೊಂಡು ಸಿಮೆಂಟ್ ಫ್ಯಾಕ್ಟರಿ ರಸ್ತೆಯಲ್ಲಿ ನೆಟ್ಟಿ ರುವ ಗಿಡಗ ಳಿಗೆ ಹನಿ ನೀರಾವರಿ ವ್ಯವಸ್ಥೆ ಮಾಡಿ ದ್ದೇವೆ’ ಎಂದು ಕಲಾದಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.