ADVERTISEMENT

ಹೊಗೆ, ದೂಳಿಗೆ ರೋಸಿ ಹೋದ ಜನತೆ

ಎಲ್ಲಿ ಬೇಕೆಂದರಲ್ಲಿ ಇದ್ದಿಲು ಭಟ್ಟಿ, ಗ್ರಾನೈಟ್ ತ್ಯಾಜ್ಯ: ಜನಜಾಗೃತಿ ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ದೂರು

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 6:51 IST
Last Updated 19 ಜನವರಿ 2017, 6:51 IST
ಇಳಕಲ್‌ನಲ್ಲಿ ಅಪೂರ್ಣವಾಗಿರುವ ಕಾಮಗಾರಿಯಿಂದಾಗಿ ಮುಖ್ಯರಸ್ತೆಗಳು ದೂಳುಮಯವಾಗಿವೆ
ಇಳಕಲ್‌ನಲ್ಲಿ ಅಪೂರ್ಣವಾಗಿರುವ ಕಾಮಗಾರಿಯಿಂದಾಗಿ ಮುಖ್ಯರಸ್ತೆಗಳು ದೂಳುಮಯವಾಗಿವೆ   

ಇಳಕಲ್: ನಗರದಲ್ಲಿ ದೂಳು ಮತ್ತು ಹೊಗೆಯಿಂದಾಗಿ ಪರಿಸರ ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರಲ್ಲಿ ಉಸಿರಾಟ ಸಂಬಂಧಿ ರೋಗ ಉಂಟಾಗುತ್ತಿವೆ. ನಗರಸಭೆಯ ನಿರ್ಲಕ್ಷ್ಯ ಹಾಗೂ ಕಾಮಗಾರಿಗಳಲ್ಲಿ ಆಗು ತ್ತಿರುವ ವಿಳಂಬ ದೂಳು ಹೆಚ್ಚಾಗಲು ಕಾರಣ ಎನ್ನಲಾಗಿದೆ. 

ಎಡಿಬಿ ನೆರವಿನ ಒಳಚರಂಡಿ ಯೋಜನೆ ಹಾಗೂ ನಿರಂತರ ಕುಡಿ ಯುವ ನೀರು ಪೂರೈಕೆ ಯೋಜನೆ 5 ವರ್ಷಗಳಿಂದ ಪ್ರಗತಿಯಲ್ಲಿವೆ. ಈ ಯೋಜನೆಗಳಿಗಾಗಿ ಅಗೆದ ರಸ್ತೆಗಳನ್ನು ಅದೇ ಯೋಜನೆಯಲ್ಲಿ ಲಭ್ಯವಿರುವ ರಸ್ತೆ ಪುರ್ನನಿರ್ಮಾಣದ ಅನುದಾನ ಬಳಸಿ ಕೊಂಡು ದುರಸ್ತಿ ಮಾಡಬಹುದಿತ್ತು. ಆದರೆ ಆ ಕೆಲಸ ಎಲ್ಲೂ ನಡೆದಿಲ್ಲ.

ಪರಿ ಣಾಮವಾಗಿ ರಸ್ತೆ ಅಗೆದು ಹಾಕಿದ ಮಣ್ಣಿನ ಮೇಲೆ ವಾಹನ ಓಡಾಟದಿಂದ ಮೋಡಗಳ ರೀತಿಯಲ್ಲಿ ದೂಳು ಎರಗು ತ್ತದೆ. ಚಳಿಗಾಲದ ಇಂದಿನ ಸಂದರ್ಭ ದಲ್ಲಿ ದೂಳು ಮೇಲಕ್ಕೆರಗದೇ ಕೆಳಮಟ್ಟ ದಲ್ಲಿಯೇ ಉಳಿಯುವುದರಿಂದ ಹೆಚ್ಚು ಅಪಾಯಕಾರಿ ಆಗುತ್ತಿದೆ. 

ಜತೆಗೆ ನಗರೋತ್ಥಾನ, ಎಸ್‌ಎಸ್‌ಫ್‌ ಸೇರಿದಂತೆ ಇತರ ಅನುದಾನಗಳಲ್ಲಿ ಕೈಗೆ ತ್ತಿಕೊಳ್ಳಲಾದ ಯೋಜನೆ ಕೂಡಾ ಕಾಲ ಮಿತಿಯಲ್ಲಿ ಮುಕ್ತಾಯವಾಗಿಲ್ಲ. ನಗರದ ಬಸವೇಶ್ವರ ವೃತ್ತದಿಂದ ಕಂಠಿವೃತ್ತದವ ರೆಗೆ ಪ್ರಮುಖ ರಸ್ತೆಯ ಇಕ್ಕೆಲಗಳಲ್ಲಿ ಇದ್ದ ಬಹಳಷ್ಟು ಮರಗಳನ್ನು ರಸ್ತೆ ವಿಸ್ತರಣೆ  ನೆಪದಲ್ಲಿ ದಶಕದ ಹಿಂದೆ ಕಡಿದು ಹಾಕ ಲಾಗಿದೆ. ಆ ನಂತರ ನಗರದಲ್ಲಿ ಪ್ರತಿ ವರ್ಷ ನೆಟ್ಟ ಯಾವ ಸಸಿಗಳು ಮರವಾ ಗಿಲ್ಲ. ಪರಿಣಾಮವಾಗಿ ದೂಳು ಅಡೆತಡೆ ಇಲ್ಲದೇ ಹರಡುತ್ತದೆ.

ಹೊಗೆ, ಹೊಂಜು:  ನಗರದ ಹೊರ ವಲಯದಲ್ಲಿ ತೊಂಡಿಹಾಳ ಹತ್ತಿರ ಇರುವ ನಗರಸಭೆ ಘನ ತ್ಯಾಜ್ಯ ವಿಲೇ ವಾರಿ ಘಟಕದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯಕ್ಕೆ ಬೆಂಕಿ ಹಚ್ಚುವ ಮೂಲಕ ವಿಲೇವಾರಿ ಮಾಡುತ್ತಿದೆ. ಸುಡುವಾಗ ಉಂಟಾಗುವ ದಟ್ಟವಾದ ಕಪ್ಪು ಹೊಗೆ ತುಂಬಾ ಅಪಾ ಯಕಾರಿ. ಈ ಬಗ್ಗೆ ಅನೇಕರು ಎಚ್ಚರಿಸಿ ದ್ದರೂ ತ್ಯಾಜ್ಯ ಸುಡುವುದು ನಿಂತಿಲ್ಲ. ಜತೆಗೆ ಜೋಶಿಗಲ್ಲಿ ಹೊಂದಿಕೊಂಡಿರುವ ಹಿರೇಹಳ್ಳದಲ್ಲಿ ಇದ್ದಿಲು ಭಟ್ಟಿಗಳಿದ್ದು, ನಿತ್ಯ ರಾತ್ರಿ ಕಟ್ಟಿಗೆಗೆ ಬೆಂಕಿ ತಗುಲಿಸ ಲಾಗುತ್ತದೆ. ಹೊಗೆ ಇಡೀ ರಾತ್ರಿ ಜೋಶಿ ಗಲ್ಲಿ ಆವರಿಸುತ್ತಿದ್ದು, ಬೆಳಗಿನ ಅವಧಿ ಯಲ್ಲಿ ಇಲ್ಲಿ ಹೊಂಜು ಉಂಟಾಗುತ್ತದೆ.

ಇಲ್ಲಿಯ ಜನಜಾಗೃತಿ ವೇದಿಕೆ  ಜಗದೀಶ ಸರಾಫ, ಬಸಯ್ಯ ಹಿರೇಮಠ, ದಾದಾಪೀರ್ ಪಟೇಲ್ ಇತರರು ದೂಳು ನಿವಾರಣೆಗೆ ನಗರಸಭೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜಿಲ್ಲಾಧಿಕಾರಿ ಗಳಿಗೆ ದೂರು ನೀಡಿದ್ದಾರೆ.

ಮೀತಿ ಮೀರಿದ ಪ್ರಮಾಣ
ಇಳಕಲ್‌ ನಗರದಲ್ಲಿ ಇರುವ ದೂಳಿನ ಪ್ರಮಾಣ ಪ್ರತಿ ಕ್ಯುಬಿಕ್‌ ಮೀಟರ್‌ಗೆ 100 ಮೈಕ್ರೋ ಗ್ರಾಂ ಗೂ ಹೆಚ್ಚಿದೆ. ಇದು ಯಾವುದೇ ಕಾರಣಕ್ಕೂ 60 ಮೈಕ್ರೊ ಗ್ರಾಂ ದಾಟಬಾರದು ಎಂದು ಇಲ್ಲಿಯ ಕಾಲೇಜೊಂದರ ವಿಜ್ಞಾನ ವಿಭಾ ಗದ ಪ್ರಾಧ್ಯಾಪಕರು ಹೇಳುತ್ತಾರೆ. ನಗರಸಭೆ ದೂಳಿನ ನಿಯಂತ್ರಣ ಕ್ಕಾಗಿ ರಸ್ತೆಗಳ ಡಾಂಬರೀಕರಣ ಮಾಡಬೇಕು. ಅಗೆದಿರುವ ರಸ್ತೆಯ ಮೇಲೆ ದೂಳು ಹೀರುವ ಯಂತ್ರ ಓಡಾಡಿಸಿದರೇ ಯಾವುದೇ ಪ್ರಯೋಜನವಾಗುವುದಿಲ್ಲ.

ADVERTISEMENT

ಜತೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಮರಗಳನ್ನು ಬೆಳೆಸಲು ಆದ್ಯತೆ ನೀಡಬೇಕು. ಕಾಮಗಾರಿ ನಡೆದ ರಸ್ತೆಗಳಿಗೆ ದಿನಕ್ಕೆರಡು ಬಾರಿ ನೀರು ಸಿಂಪಡಿಸುವ ವ್ಯವಸ್ಥೆ ಮಾಡಬೇಕು ಎಂಬುದು ಸಾರ್ವ ಜನಿಕರ ಒತ್ತಾಯವಾಗಿದೆ.

*
ಸಾರ್ವಜ ನಿಕರು ನಗರಸಭೆಗೆ ಹೋಗಿ ತಮ್ಮ ಸಮಸ್ಯೆ ಬಗ್ಗೆ ದೂರು ನೀಡಲು ಹಿಂಜರಿ ಯುತ್ತಾರೆ. ಏಕೆಂದರೆ ಪೌರಾಯುಕ್ತರು ಇಲ್ಲವೇ ನಗರಸಭೆ ತಮ್ಮ ಮೇಲೆ ಪ್ರಕರಣ ದಾಖಲಿಸಿಬಿಟ್ಟರೇ ಎಂಬ ಹೆದರಿಕೆ ಸಾರ್ವಜನಿಕರಲ್ಲಿದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
–ಬಸವರಾಜ ಅ. ನಾಡಗೌಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.