ADVERTISEMENT

‘ಇಷ್ಟಪಟ್ಟು ಓದಿದರೆ ಎಲ್ಲ ಸುಲಭ’

​ಪ್ರಜಾವಾಣಿ ವಾರ್ತೆ
Published 30 ಮೇ 2016, 9:15 IST
Last Updated 30 ಮೇ 2016, 9:15 IST

ಬನಹಟ್ಟಿ:  ಇಂಗ್ಲಿಷ್‌ ವಿಷಯ ಕಠಿಣ ಎಂಬ ಕೀಳರಿಮೆ ಬೇಡ. ಇಷ್ಟಪಟ್ಟು ಓದಿದರೆ ಎಲ್ಲವೂ ಸುಲಭ ಮತ್ತು ಸರಳ ಎನಿಸುತ್ತದೆ. ಇಂಗ್ಲಿಷ್‌ ಮೂಲ ಪಾಠಗಳನ್ನು ಚೆನ್ನಾಗಿ ಅರ್ಥೈಸಿಕೊಂಡು ಶಬ್ದ ಸಂಪತ್ತನ್ನು ಹೆಚ್ಚಿಸಿಕೊಂಡರೆ ಇಂಗ್ಲಿಷ್‌ ವಿಷಯದ ಮೇಲೆ ಪ್ರಭುತ್ವ ಸಾಧಿಸಬಹುದು ಎಂದು ಹಿರಿಯ ಮಕ್ಕಳ ಸಾಹಿತಿ ಪ್ರೊ. ಜಯವಂತ ಕಾಡದೇವರ ತಿಳಿಸಿದರು.

ಅವರು ಶುಕ್ರವಾರ ಸ್ಥಳೀಯ ತಮ್ಮಣ್ಣಪ್ಪ ಚಿಕ್ಕೋಡಿ ಮಹಾವಿದ್ಯಾಲ ಯದ ಎಂ.ಎ ಇಂಗ್ಲಿಷ್‌ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಇಂಗ್ಲಿಷ್‌ ಸಾಹಿತ್ಯದಲ್ಲಿನ ಕಥೆ, ಕವನ, ಕಾದಂಬರಿಗಳನ್ನು ಓದುವ ಹವ್ಯಾಸ ಹೆಚ್ಚಿಸಿಕೊಂಡಲ್ಲಿ ವಿದ್ಯಾರ್ಥಿ ಗಳು ಸಂತೋಷ ಮತ್ತು ಜ್ಞಾನಗಳೆ ರಡನ್ನೂ ಪಡೆಯಬಲ್ಲರು. ಕನ್ನಡ ಪತ್ರಿಕೆ ಯನ್ನು ಓದುವುದರ ಜೊತೆಗೆ ಇಂಗ್ಲಿಷ್‌ ಪತ್ರಿಕೆಗಳನ್ನು ಓದುವ ರೂಢಿಯನ್ನು ಮಾಡಿಕೊಳ್ಳಬೇಕು. ಈ ಸಂದರ್ಭದಲ್ಲಿ ಪ್ರೊ.ಜಯವಂತ ಕಾಡದೇವರ ತಾವೇ ರಚಿಸಿದ ಕನ್ನಡ ಮತ್ತು ಇಂಗ್ಲಿಷ್‌ ಹಾಡುಗಳನ್ನು ಹಾಡಿದರು.

ಇದೇ ಸಂದರ್ಭದಲ್ಲಿ ಮಹಾ ವಿದ್ಯಾಲಯದ ಗ್ರಂಥ ಪಾಲಕ ವೈ.ಬಿ. ಕೊರಡೂರ ಮಾತನಾಡಿ, ವಿದ್ಯಾರ್ಥಿ ಗಳು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳ  ಬೇಕಾದರೆ ಗ್ರಂಥಾಲಯದ ಉಪ ಯೋಗವನ್ನು ಪಡೆದುಕೊಳ್ಳಬೇಕು. ವರ್ಗಗಳು ಮುಗಿದ ನಂತರ ಗ್ರಂಥಾಲಯದಲ್ಲಿ ಹೆಚ್ಚಿನ ಕಾಲ ಕಳೆಯ ಬೇಕು ಮತ್ತು  ವಿಷಯಕ್ಕೆ ಸಂಬಂಧಪಟ್ಟ ಇನ್ನೀತರ ಪುಸ್ತಕಗಳನ್ನು ಓದಬೇಕು ಎಂದು ತಿಳಿಸಿದರು. 
  
ಸಮಾರಂಭದಲ್ಲಿ ಐ.ಬಿ.ಫಣಿಬಂದ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಇಂಗ್ಲಿಷ್‌ ವಿಭಾಗದ ಮುಖ್ಯಸ್ಥೆ ಡಾ.ಶಿಲ್ಪಾ ಅಗಡಿ ಮಾತನಾಡಿ, ವರ್ಗಗಳಿಗೆ ನಿಯಮಿತವಾಗಿ ಬಂದು ಆಸಕ್ತಿಯಿಂದ ಪಾಠ ಕೇಳವುದನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಇಂಗ್ಲಿಷ್‌ನಲ್ಲಿ ಮಾತನಾಡುವ ಬರೆಯುವ ಕಲೆಯನ್ನು ಬೆಳೆಸಿಕೊಂಡರೆ ವಿಷಯದ ಮೇಲೆ ಹಿಡಿತ ಸಾಧಿಸಬಹುದು ಎಂದು ತಿಳಿಸಿದರು. ಸಮಾರಂಭದ ವೇದಿಕೆಯ ಮೇಲೆ ಉಪನ್ಯಾಸಕರಾದ ಬಿ.ಎಸ್‌. ಬಟ್ಟನ್ನವರ, ಮತ್ತು ಶ್ರೀಧರ ಗೊಂದಕರ ಇದ್ದರು.

ಸೌಮ್ಯಾ ಮುಚ್ಚಂಡಿ ಪ್ರಾರ್ಥಿಸಿದರು. ಶ್ರೀಧರ ಗೊಂದಕರ ಸ್ವಾಗತಿಸಿದರು. ಸುಧಾರಾಣಿ ಬಸಪ್ಪಗೋಳ ವಂದಿಸಿದರು. ಐಶ್ವರ್ಯಾ ಉಕ್ಕಲಿ ಮತ್ತು ಸ್ವಪ್ನಾ ವಲ್ಯಾಪುರ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.