ADVERTISEMENT

ಬಾದಾಮಿ: ಪಾರಂಪರಿಕ ಕಟ್ಟಡದ ಸಂರಕ್ಷಣೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2018, 8:39 IST
Last Updated 16 ಜನವರಿ 2018, 8:39 IST
ಬಾದಾಮಿಯಲ್ಲಿ 1925ರಲ್ಲಿ ನಿರ್ಮಿಸಿರುವ ಶಿವಯೋಗಮಂದಿರದ ಶಾಖಾ ಮಠದ ಪಾರಂಪರಿಕ ಕಟ್ಟಡದ ಸಂರಕ್ಷಣೆ.
ಬಾದಾಮಿಯಲ್ಲಿ 1925ರಲ್ಲಿ ನಿರ್ಮಿಸಿರುವ ಶಿವಯೋಗಮಂದಿರದ ಶಾಖಾ ಮಠದ ಪಾರಂಪರಿಕ ಕಟ್ಟಡದ ಸಂರಕ್ಷಣೆ.   

ಬಾದಾಮಿ: ಇಲ್ಲಿನ ಕಾಲೇಜು ರಸ್ತೆಯಲ್ಲಿ ರುವ ಶಿವಯೋಗಮಂದಿರದ ಶಾಖಾ ಮಠದ ಹಳೆಯ ಕಟ್ಟಡವನ್ನು ಸುಂದರಗೊಳಿಸಲಾಗಿದೆ. ಈಗ ಮತ್ತೆ ಹೊಸ ಕಟ್ಟಡದಂತೆ ಗೋಚರಿಸುತ್ತದೆ. ಪಾರಂಪರಿಕ ಕಟ್ಟಡವನ್ನು ರಕ್ಷಿಸಿ ದಂತಾಗಿದೆ ಎಂದು ಭಕ್ತರು ಮತ್ತು ಇತಿಹಾಸ ಪರಂಪರೆಯ ಆಸಕ್ತರು ಖುಷಿಯಾಗಿದ್ದಾರೆ.

ಈ ಕಟ್ಟಡವನ್ನು 1925ರಲ್ಲಿ ‘ಲಿಂ.ಕಿತ್ತೂರ ರೇವಣಸಿದ್ದಪ್ಪಯ್ಯ ಅವರ ಸ್ಮರಣಾರ್ಥ ಶ್ರೀ ಶಿವಯೋಗಮಂದಿರದ ಈ ಶಾಖಾ ಮಂದಿರವನ್ನು ಧಾರ ವಾಡ ನಿವೃತ್ತ ಜಿಲ್ಲಾಧಿಕಾರಿ ರೇವಣ ಸಿದ್ದಪ್ಪಯ್ಯನವರ ಧರ್ಮಪ್ರೇಮ, ಧರ್ಮಾಭಿಮಾನಗಳ ಗುರುತು ಎಂದು ಶಿವಯೋಗಮಂದಿರದ ಭಕ್ತರೂ, ಅಭಿಮಾನಿಗಳೂ, ಹಿತಚಿಂತಕರೂ ಕೂಡಿ ಧರ್ಮಕಾರ್ಯಕ್ಕೆಂದು ಕಟ್ಟಿಸಿ ದರು’ ಎಂದು ಭಿತ್ತಿಯಲ್ಲಿರುವ ಅಮೃತ ಶಿಲಾ ಫಲಕದಲ್ಲಿ ಕಾಣಬಹುದಾಗಿದೆ.

ಪಾರಂಪರಿಕ ಕಟ್ಟಡವನ್ನು ಉಳಿಸಬೇಕು ಎಂಬ ಧ್ಯೇಯದಿಂದ ಶಿವಯೋಗಮಂದಿರ ಸಂಸ್ಥೆಯ ಅಧ್ಯಕ್ಷ ಡಾ.ಸಂಗನಬಸವ ಶ್ರೀಗಳು ಈ ಹಳೆಯ ಕಟ್ಟಡವನ್ನು ಈಗ ನೂತನ ಕಟ್ಟಡವನ್ನಾಗಿ ಪರಿವರ್ತಿಸಿದ್ದಾರೆ.

ADVERTISEMENT

ಇಲ್ಲಿಗೆ ಆಗಮಿಸುವ ಸ್ವಾಮೀಜಿಗಳ ವಾಸ್ತವ್ಯಕ್ಕೆ ಶಾಖಾ ಮಂದಿರವು ಸಂಪೂರ್ಣವಾಗಿ ಸನ್ನದ್ಧಗೊಳ್ಳಲಿದೆ ಎಂದು ತಿಳಿದಿದೆ. ಪಟ್ಟಣದ ಹೃದಯ ಭಾಗದಲ್ಲಿ 1904ರಲ್ಲಿ ಕಟ್ಟಿಸಿದ ಹಳೆಯ ಸರ್ಕಾರಿ ಕಟ್ಟಡವು ಇನ್ನೇನು ಕೆಲವು ದಿನಗಳಲ್ಲಿ ಕಾಲಗರ್ಭದ ಇತಿಹಾಸದಲ್ಲಿ ಸೇರಿ ಮರೆಯಾಗಲಿದೆ. ಇಲ್ಲಿ ತಹಶೀಲ್ದಾರ್‌ ಮತ್ತು ಪೊಲೀಸ್‌ ಇಲಾಖೆ ಸೇರಿದಂತೆ ಅನೇಕ ಸರ್ಕಾರಿ ಇಲಾಖೆಗಳು ಕಾರ್ಯವನ್ನು ನಿರ್ವಹಿಸುತ್ತಿದ್ದವು.

ಈ ಮೊದಲು ನಿರ್ಮಿಸಿದ ಮಿನಿ ವಿಧಾನ ಸೌಧ ಕಟ್ಟಡವು ಚಿಕ್ಕದಾಗಿರುವ ಕಾರಣ ಮತ್ತೆ ಇದೇ ಹಳೆಯ ಕಟ್ಟಡವನ್ನು ಕೆಡವಿ ಇಲ್ಲಿಯೇ ಮಿನಿವಿಧಾನ ಸೌಧ ಕಟ್ಟಡವನ್ನು ನಿರ್ಮಿಸಲು ಸರ್ಕಾರದಿಂದ ₹ 10 ಕೋಟಿ ಮಂಜೂರಾಗಿದೆ.

ಐತಿಹಾಸಿಕ ಪಟ್ಟಣಕ್ಕೆ ಜನವರಿ ಕೊನೆಯ ವಾರದಲ್ಲಿ ಬರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೂತನ ಮಿನಿ ವಿಧಾನಸೌಧ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಶಂಕುಸ್ಥಾಪನೆಯ ನಂತರ ಹಳೆಯ ಕಟ್ಟಡವು ಕಾಲಗರ್ಭಕ್ಕೆ ಸೇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.