ADVERTISEMENT

ಕಾಯಕಲ್ಪಕ್ಕೆ ದುರ್ಗಮ್ಮ ಕಾಯುತ್ತಲೇ ಇರಬೇಕೆ?

ಗಾಣಿಗರು ಮತ್ತು ಮೇದಾರ ಸಮುದಾಯದವರಿಂದ ವಿಶೇಷವಾಗಿ ಪೂಜೆಗೊಳ್ಳುವ ದುರ್ಗಮ್ಮ

ಕೆ.ನರಸಿಂಹ ಮೂರ್ತಿ
Published 6 ಮಾರ್ಚ್ 2017, 11:35 IST
Last Updated 6 ಮಾರ್ಚ್ 2017, 11:35 IST
ಬಳ್ಳಾರಿ: ಮತ್ತೊಮ್ಮೆ ನಗರದಲ್ಲಿ ಕನಕ ದುರ್ಗಮ್ಮ ಸಿಡಿಬಂಡಿ ಉತ್ಸವ ಬಂದಿದೆ, ಆದರೆ ದುರ್ಗಮ್ಮ ಗುಡಿಯ ಕಾಯಕಲ್ಪ ಕಾರ್ಯ ಮಾತ್ರ ಕುಂಟುತ್ತಲೇ ಇದೆ.
 
ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಗುಡಿಯ ಅಭಿವೃದ್ಧಿ ಕಾರ್ಯ ಐದು ವರ್ಷ ದಿಂದ ನಡೆಯುತ್ತಿದ್ದರೂ, ಪೂರ್ಣಗೊಳ್ಳಲು ಸಾಧ್ಯವಾಗಿಲ್ಲ. ಪ್ರತಿ ಬಾರಿ ಮಾರ್ಚ್‌ ತಿಂಗಳಲ್ಲಿ ಉತ್ಸವ ನಡೆಯುವ ಸಂದರ್ಭದಲ್ಲಿ, ಅಭಿವೃದ್ಧಿ ಕಾರ್ಯ ಮುಂದಿನ ದಸರಾ ವೇಳೆಗೆ ಪೂರ್ಣಗೊ ಳ್ಳುತ್ತದೆ ಎಂದು ಧಾರ್ಮಿಕ ದತ್ತಿ ಇಲಾ ಖೆಯ ಅಧಿಕಾರಿಗಳು ಹೇಳುತ್ತಾರೆ. ಆದರೆ ಅಂಥ ಹಲವು ದಸರಾಗಳು ಬಂದುಹೋಗಿದ್ದಾಗಿದೆ. 
 
ಕಾಂಪೌಂಡ್‌ ಇಲ್ಲದಿರುವುದರಿಂದ ದೇವಾಲಯವನ್ನು ಯಾರೇ ಆದರೂ ಎಲ್ಲಿಂದ ಬೇಕಾದರೂ ಪ್ರವೇಶಿಸಬ ಹುದು ಎಂಬ ಸನ್ನಿವೇಶವೇ ಮುಂದು ವರಿದಿದೆ. ಪ್ರತಿ ಮಂಗಳವಾರ, ಶುಕ್ರವಾರ ಇಲ್ಲಿ ವ್ರತದ ಸಲುವಾಗಿ ರಾತ್ರಿ ತಂಗುವ ಭಕ್ತರಿಗೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಆಗಿದೆ. ಅಭಿವೃ ದ್ಧಿಯ ನಡುವೆ ಗುಡಿಯು ಸೊರಗಿದಂತೆ ಕಂಡರೂ,  ಭಕ್ತರ ಸಂಖ್ಯೆ ಕಡಿಮೆ ಆಗಿಲ್ಲ.
 
ಗಾಣಿಗರು ಮತ್ತು ಮೇದಾರ ಸಮುದಾಯದವರಿಂದ ವಿಶೇಷವಾಗಿ ಪೂಜೆಗೊಳ್ಳುವ ದುರ್ಗಮ್ಮ ಗುಡಿಯು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾ ದಾಯ ದತ್ತಿ ಇಲಾಖೆಯು ವಿಂಗಡಿಸಿರುವ ಎ ದರ್ಜೆಗೆ ಸೇರಿದ ಜಿಲ್ಲೆಯ ಏಳು ದೇವಾಲಯಗಳಲ್ಲಿ ಒಂದು. ವಾರ್ಷಿಕ ₹ 25 ಲಕ್ಷಕ್ಕಿಂತ ಹೆಚ್ಚು ಆದಾಯವುಳ್ಳ ದೇವಾಲಯ ಇದು.
 
ಪ್ರವಾಸೋದ್ಯಮ ಇಲಾಖೆ ಮತ್ತು ಧಾರ್ಮಿಕ ದತ್ತಿ ಇಲಾಖೆ ಹಾಗೂ ದೇವಾಲಯದ ನಿಧಿಯಿಂದ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಆದರೆ ಗಡುವಿನೊಳಗೆ ಪೂರ್ಣ ಗೊಳಿಸುವ ಪ್ರಯತ್ನ ಮಾತ್ರ ನಡೆದಿಲ್ಲ.
 
ನಾಲ್ಕೂ ದಿಕ್ಕಿನಲ್ಲಿ ಗೋಪುರ ನಿರ್ಮಾಣ, ಪುಷ್ಕರಣಿ, ಕಾಂಪೌಂಡ್‌ ನಿರ್ಮಾಣ ಕಾರ್ಯ ಪೂರ್ಣಗೊಂಡಿಲ್ಲ. ಕೆಲವು ಕಾರ್ಯಗಳು ಯುಗಾದಿ ವೇಳೆಗೆ ಪೂರ್ಣಗೊಳ್ಳಬಹುದು. ದಸರಾ ಹಬ್ಬದ ವೇಳೆ ಎಲ್ಲವೂ ಪೂರ್ಣಗೊಳ್ಳುತ್ತದೆ ಎನ್ನುತ್ತಾರೆ ದೇವಾಲಯದ ಪ್ರಧಾನ ಅರ್ಚಕ ಪಿ.ಗಾದೆಪ್ಪ ಮತ್ತು ಕಾರ್ಯ ನಿರ್ವಾಹಕ ಅಧಿಕಾರಿ ಹನುಮಂತಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.