ADVERTISEMENT

ತಹಶೀಲ್ದಾರ್ ಅಮಾನತಿಗೆ ಆಗ್ರಹ

ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು; ಬಿಜೆಪಿ ಮುಖಂಡರ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2017, 10:51 IST
Last Updated 5 ಜನವರಿ 2017, 10:51 IST

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ತಹ ಶೀಲ್ದಾರ್‌ ಆನಂದಪ್ಪ ನಾಯಕ ಅವರ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕೂಡಲೇ ಅವರನ್ನು ಸೇವೆಯಿಂದ ಅಮಾನತು ಮಾಡುವಂತೆ ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾ ಘಟಕದ ಅಧ್ಯಕ್ಷ ಮುಟುಗನಹಳ್ಳಿ ಕೊಟ್ರೇಶ್ ಒತ್ತಾಯಿಸಿದರು. ಪಟ್ಟಣದಲ್ಲಿ ಬುಧವಾರ ತಹಶೀ ಲ್ದಾರ್ ಕಚೇರಿ ಮುಂದೆ ಸಹಾಯಕ ಆಯಕ್ತ ಪ್ರಶಾಂತ್‌ ಕುಮಾರ್ ಮಿಶ್ರಾ ಅವರಿಗೆ ಮನವಿ ಪತ್ರ ನೀಡಿದ ಬಳಿಕ ಅವರು ಮಾತನಾಡಿದರು.

ತಹಶೀಲ್ದಾರ್‌ ಆನಂದಪ್ಪ ನಾಯಕ ಅವರ ಮೇಲೆ ತಾಲ್ಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಬುಡ್ಡಿ ಬಸವರಾಜ ಅವರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಡಿಸೆಂಬರ್‌ 31ರಂದು ದೂರು ದಾಖಲಿಸಿದ್ದಾರೆ. ಅದರಲ್ಲಿ ತಹಶೀಲ್ದಾರ್ ಅವರು ಅಧಿ ಕಾರ ದುರಪಯೋಗ ಮಾಡಿಕೊಂಡಿ ರುವುದು, ತಾಲ್ಲೂಕಿನಲ್ಲಿ ಮರಳು ಅಕ್ರಮ ಅಂಧೆಯಲ್ಲಿ ತೊಡಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿರು ವುದು ಸೇರಿದಂತೆ ಭೂ ದಾಖಲೆಗಳನ್ನು ಬೇರೆಯವರ ಹೆಸರಿನಲ್ಲಿ ಮಾಡಿಕೊಡು ವುದು ಸೇರಿ ಹಲವು  ಪ್ರಕರಣಗಳ ದಾಖಲೆಗಳನ್ನು ಸಾಕ್ಷಿ ಸಹಿತ ನ್ಯಾಯಾಲ ಯಕ್ಕೆ ಒದಗಿಸಿದ್ದಾರೆ.

ಆದ್ದರಿಂದ ತಹಶೀಲ್ದಾರ್ ಆನಂದಪ್ಪ ನಾಯಕ ಅವರು ಪೊಲೀಸರ ಮೇಲೆ ಪ್ರಭಾರ ಬೀರುವ ಸಾದ್ಯತೆ ಗಳಿದ್ದು, ಅವರನ್ನು ಅಮಾನತಿನಲ್ಲಿರಿಸಿ ವಿಚಾರಣೆ ನಡೆಸಿದಲ್ಲಿ ಸತ್ಯಾಸತ್ಯತೆ ಹೊರಬೀಳಲಿದೆ ಎಂದರು. ತಾಲ್ಲೂಕು ಪಂಚಾಯಿತಿ ಸದಸ್ಯ ಎಂ. ಪ್ರಭಾಕರ, ಸೊಬಟಿ ಸ್ವಾಮಿ, ಕೆ.ಹುಲುಗಪ್ಪ, ಎಂ.ಕರಿಯಪ್ಪ, ಎಚ್‌.ಎಂ. ಮಂಜು ನಾಥ, ಪಾಂಡುನಾಯ್ಕ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.