ADVERTISEMENT

‘ವಿದ್ಯಾರ್ಥಿಗಳು ಸ್ವ ಉದ್ಯೋಗಕ್ಕೆ ಆದ್ಯತೆ ನೀಡಲಿ’

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2017, 5:13 IST
Last Updated 11 ನವೆಂಬರ್ 2017, 5:13 IST

ಹರಪನಹಳ್ಳಿ: ಯವಕರು ಸರ್ಕಾರಿ ಉದ್ಯೋಗ ನಿರೀಕ್ಷಿಸದೆ ತಾಂತ್ರಿಕ ವೃತ್ತಿ ಶಿಕ್ಷಣ ಪಡೆದಲ್ಲಿ ಕುಟುಂಬ ನಿರ್ವಣೆ ಮಾಡಬಹುದು ಎಂದು ಉದ್ಯಮಿ ರಮೇಶ್‌ ಬೂಸದ್‌ ತಿಳಿಸಿದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಉದ್ಯಮಿದಾರರ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಉತ್ತಮ ಗಳಿಕೆ ಮತ್ತು ಜೀವನ ನಿರ್ವಹಣೆಗೆ ಸ್ವಗ್ರಾಮ ಬಿಟ್ಟು ಬೇರೆ ಕಡೆ ಹೋಗುವ ಅವಶ್ಯಕತೆ ಇಲ್ಲ. ಹೊರರಾಜ್ಯದಲ್ಲಿ ಕೆಲಸ ಮಾಡಿ ಬಂದರೂ ಇದರಿಂದ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಾಗಲಿಲ್ಲ. ಸ್ವ ಉದ್ಯೋಗದಿಂದ ಇಂದು ಅನೇಕ ಯುವಕರಿಗೆ ಉದ್ಯೋಗ ನೀಡಿದ್ದೇನೆ’ ಎಂದರು.

ಪ್ಯಾರಾ ಮೆಡಿಕಲ್‌ ಉದ್ಯೋಗದಲ್ಲಿ ಅನೇಕ ಸೌಲಭ್ಯಗಳಿವೆ. ಯುವಕರು ಶಿಕ್ಷಣ ಪಡೆದು, ಉದ್ಯೋಗದಲ್ಲಿ ತೊಡಗಬೇಕು ಎಂದು ಡಾ.ಅಂಬಿಕಾ ಹೇಳಿದರು. ಸರ್ಕಾರಿ ಕಾಲೇಜು ಉಪ ಪ್ರಾಂಶುಪಾಲ ಎಂ. ಕುಬೇಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 9ರಿಂದ 10ನೇ ತರಗತಿಗೆ ಇದ್ದ ಆಟೋಮೊಬೈಲ್‌ ಮತ್ತು ಹೆಲ್ತ್‌ಕೇರ್‌ ಕೋರ್ಸ್‌ಗಳನ್ನು ಪಿಯುಸಿವರೆಗೆ ವಿಸ್ತರಿಸಲಾಗಿದೆ ಎಂದರು.

ADVERTISEMENT

ಸುದರ್ಶನ್‌ ಪ್ರಾಸ್ತಾವಿಕ ಭಾಷಣ ಮಾಡಿದರು. ಶಿಲ್ಪಾ ಸ್ವಾಗತಿಸಿ, ಲತಾ ರಾಥೋಡ್‌ ಕಾರ್ಯಕ್ರಮ ನಿರೂಪಿಸಿದರು. ಎಸ್‌.ಎಂ.ಬಸವರಾಜಯ್ಯ, ವಿನೋದ ಪೂಜಾರ್‌. ರುಕ್ಮಿಣಿ, ಮಮ್ತಾಜ್‌, ನಾಗರತ್ನ, ಜಯಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.