ADVERTISEMENT

19ರಂದು ಕೂಡ್ಲಿಗಿ ಖಾಲಿ– ಖಾಲಿ...!

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 11:11 IST
Last Updated 16 ಏಪ್ರಿಲ್ 2017, 11:11 IST
ಕೂಡ್ಲಿಗಿ ಪಟ್ಟಣದಲ್ಲಿ ನಡೆಯುವ ಗುಳೆಲಕ್ಕಮ್ಮ ಜಾತ್ರೆಯ ಅಂಗವಾಗಿ ತಮ್ಮ ದಿನ ನಿತ್ಯೆ ಬಳಕೆ ವಸ್ತುಗಳನ್ನು ತುಂಬಿಕೊಂಡ ಬುಟ್ಟಿಯನ್ನು ಹೊತ್ತು ದೇವಿಯ ಹಿಂದೆ ಸಾಗುತಿರುವ ಭಕ್ತರು (ಸಂಗ್ರಹ ಚಿತ್ರ). ಓಳಚಿತ್ರದಲ್ಲಿ ಗುಳೆ ಲಕ್ಕಮ್ಮನ ಮೂರ್ತಿ
ಕೂಡ್ಲಿಗಿ ಪಟ್ಟಣದಲ್ಲಿ ನಡೆಯುವ ಗುಳೆಲಕ್ಕಮ್ಮ ಜಾತ್ರೆಯ ಅಂಗವಾಗಿ ತಮ್ಮ ದಿನ ನಿತ್ಯೆ ಬಳಕೆ ವಸ್ತುಗಳನ್ನು ತುಂಬಿಕೊಂಡ ಬುಟ್ಟಿಯನ್ನು ಹೊತ್ತು ದೇವಿಯ ಹಿಂದೆ ಸಾಗುತಿರುವ ಭಕ್ತರು (ಸಂಗ್ರಹ ಚಿತ್ರ). ಓಳಚಿತ್ರದಲ್ಲಿ ಗುಳೆ ಲಕ್ಕಮ್ಮನ ಮೂರ್ತಿ   

ಜಾತ್ರೆ ಎಂದಾಕ್ಷಣ ಊರಲ್ಲಿ ಸದ್ದು ಗದ್ದಲ ಇರುತ್ತದೆ, ಆದರೆ ಈ ಊರಲ್ಲಿ ಜಾತ್ರೆಯ ದಿನ ಬೆಳಿಗ್ಗೆಯಿಂದ ಸಂಜೆಯ ವರೆಗೆ ಯಾರೊಬ್ಬರು ಕಾಣುವುದಿಲ್ಲ!. ಪ್ರತಿ ಮನೆಗೆ ಬೀಗ ಹಾಕಿರುತ್ತಾರೆ. ಗ್ರಾಮ ದಲ್ಲಿ ನೀರವ ಮೌನ ಆವರಿಸಿರುತ್ತದೆ. ಹೌದು, ಕೂಡ್ಲಿಗಿ ಪಟ್ಟಣದಲ್ಲಿ ಇಂತಹ ಪದ್ಧತಿ ಇದೆ. ಪ್ರತಿಯೊಬ್ಬರು ಊರ ಹೊರಗೆ ನಡೆಯುವ ಜಾತ್ರೆಯಲ್ಲಿ ಪ್ರತಿ ಮನೆಯ ಬೀಗ ಹಾಕಿಕೊಂಡು ಹೋಗು ತ್ತಾರೆ. ಯಾರೊಬ್ಬರೂ ಗ್ರಾಮದಲ್ಲಿ ಇರು ವಂತಿಲ್ಲ. ಅದುವೇ ಗುಳೆ ಲಕ್ಕಮ್ಮ ಜಾತ್ರೆ. ಏ. 19ರಂದು ಈ ಬಾರಿಯ ಜಾತ್ರೆ ನಡೆಯಲಿದೆ.

ಹೆಸರೇ ಸೂಚಿಸುವಂತೆ ಇಡೀ ಊರಿನ ಜನರು ಒಂದು ದಿನದ ಮಟ್ಟಿಗೆ ಊರನ್ನು ಬಿಟ್ಟು ಗುಳೆ ಹೋಗುತ್ತಾರೆ!. ಜಾತ್ರೆ ಆರಂಭದ ಮುನ್ನ ದಿನ ರಾತ್ರಿ ದೇವಿಯನ್ನು ಪಟ್ಟಣದ ಊರಮ್ಮ ಬಯ ಲಿನಲ್ಲಿರುವ ಗುಳೆ ಲಕ್ಕಮ್ಮನ ಕಟ್ಟೆ ಮೇಲೆ ದೇವಿಯನ್ನು ತಂದು ಕೂಡಿಸು ತ್ತಾರೆ. ಜಾತ್ರೆ ನಡೆಯುವ ದಿನ ಬೆಳಿಗ್ಗೆ 3 ಗಂಟೆಯಿಂದ ಪಟ್ಟಣ ಮಹಿಳೆಯರೆಲ್ಲ ದೇವಿಗೆ ಹುಡಿಯನ್ನು  ದೇವಿಗೆ ಆರ್ಪಿಸು ತ್ತಾರೆ. ಬೆಳಿಗ್ಗೆ 6 ಗಂಟೆಯಿಂದ ಪಟ್ಟಣ ದಲ್ಲಿ ಎಲ್ಲ ಮನೆಗಳು ಖಾಲಿಯಾಗುತ್ತವೆ. ನಂತರ ಸಕಲ ವಾದ್ಯಗಳೊಂದಿಗೆ ಗುಳೆ  ಲಕ್ಕಮ್ಮ ಊರಲ್ಲಿ ಒಂದು ಸುತ್ತು ಹಾಕಿ ಬರುತ್ತಾಳೆ. ಊರಲ್ಲಿ ಯಾರಾದರು ಮನೆಯ ಬಾಗಿಲನ್ನು ತೆರೆದಿದ್ದಾರೆ ಅಂತವರನ್ನು ಮನೆಯಿಂದ ಹೊರಹಾಕಿ ಮನೆಗೆ ಬೀಗ ಹಾಕಲಾಗುತ್ತದೆ. ಈ ಸಮಯದಲ್ಲಿ ತಳವಾರ ಪಟ್ಟಣದಲ್ಲಿ ಗಸ್ತು ತಿರುಗುತ್ತಾನೆ. ಪಟ್ಟಣದಲ್ಲಿ ಯಾರೂ ಇಲ್ಲ ಎಂಬುದು ಖಚಿತವಾದ ನಂತರ ಊರ ಬಾಗಿಲಿಗೆ ಬೇಲಿಯನ್ನು ಹಾಕಲಾಗುತ್ತದೆ.

ಬಾಣಂತಿ, ಮಕ್ಕಳೂ ಸೇರಿ ಮನೆ ಮಂದಿ ಎಲ್ಲ ತಮ್ಮ ಸಾಕು ಪ್ರಾಣಿಗ ಳೊಂದಿಗೆ, ಅಂದಿಗೆ ಬೇಕಾಗು ಸರಕು-ಸಾಮಾನುಗಳು, ಆಡುಗೆ  ಮಾಡಲು ಬೇಕಾ ಗುವ ಪಾತಗಳನ್ನು ಕಟ್ಟಿಕೊಂಡು ಊರನ್ನು ಖಾಲಿ ಮಾಡುತ್ತಾರೆ. ಹೀಗೆ ಗುಳೆ  ಹೊರಟ ಜನ ಊರ ಹೊರೆಗಿನ ತೋಟಗಳಲ್ಲಿ, ತಮ್ಮ ಸ್ವಂತ ತೋಟಗ ಳಲ್ಲಿ ಅಥವಾ ತಮಗೆ ಅನುಕೂಲವಾದ ಸ್ಥಳಗಳಲ್ಲಿ ಬೀಡಾರ ಹಾಕಿಕೊಳ್ಳುತ್ತಾರೆ. ಸುತ್ತಮುತ್ತಲಿನ ಊರಿನ ಜನರು, ಅವರ ಸಂಬಂಧಿಕರು ಜಾತ್ರೆಗೆ ಬಂದು ಸೇರುತ್ತಾರೆ.

ADVERTISEMENT

ಲಕ್ಕಮ್ಮ ಊರ ಹೊರೆಗೆ ಹೋಗು ವಾಗ ಊರಿನ ಆಯಾಗಾರರ ಮನೆಯ ವರು ದೇವಿ ಜತೆಗೆ ತಮಗೆ ಬೇಕಾದ ಸಾಮಾನುಗಳನ್ನು ಕಟ್ಟಿಕೊಂಡ ಪುಟ್ಟಿ ಯನ್ನು ತಲೆಯ ಮೇಲೆ ಹೊತ್ತುಕೊಂಡು ಹೊಗುತ್ತಾರೆ. ದೇವಿ ಸಾಗುವ ದಾರಿಯು ದ್ದಕ್ಕು ಮಹಿಳೆಯರು, ಮಕ್ಕಳು ನಿಂತು ತಾವು ಕಟ್ಟಿಕೊಂಡಿದ್ದ ಹರಕೆಗಳನ್ನು, ಹಣ್ಣು, ಕಾಯಿಗಳನ್ನು ದೇವಿಗೆ ಅರ್ಪಿಸು ತ್ತಾರೆ. ಊರಮ್ಮನ ಬಾವಿಯ ಹಾದಿ ಯಲ್ಲಿ ಹೊರಟ ಗುಳೆ ಲಕ್ಕಮ್ಮ ಊರ ಹೊರೆಗೆ ಹಾಕಿರುವ ಪೌಳಿಗಳಲ್ಲಿ ಹಾದು ಪಟ್ಟಣದಿಂದ ಸುಮಾರು 4 ಕಿ.ಮೀ. ದೂರದಲ್ಲಿರುವ ಗೋವಿಂದಗಿರಿ ಬಳಿ ಇರುವ ಅಲದ ಮರದ ಬಳಿ ಸ್ಥಾಪಿಸ ಲಾಗುತ್ತದೆ. ಇಲ್ಲಿ ದೇವಿಯನ್ನು ಸ್ಥಾಪಿಸಿದ ಮೇಲೆ ಗೋವಿಂದಗಿರಿಯ ಗ್ರಾಮದ ಜನೆತೆ ಬಂದು ತಮ್ಮ ಹರಕೆಗಳನ್ನು ಸಲ್ಲಿಸುತ್ತಾರೆ. ನಂತರೆ ದೇವಿಗೆ ಬಂದ ಅಕ್ಕಿ, ಬೇಳೆ, ಬೆಲ್ಲ ಮುಂತಾದವುಗಳನ್ನು ಅಯಾಗಾರರು ಹಂಚಿಕೊಳ್ಳುತ್ತಾರೆ.

ಮತ್ತೆ ಗೋದುಳಿ ಸಮಯಕ್ಕೆ ದೇವಿ ಯನ್ನು ಪಟ್ಟಣಕ್ಕೆ ಕರೆ ತರುತ್ತಾರೆ. ಪಟ್ಟ ಣಕ್ಕೆ ಬರುವಾಗ ಗುಳೆ  ಹೋದ ಜನರೆಲ್ಲ ದೇವಿಯ ಹಿಂದೆನೇ ಬರುತ್ತಾರೆ. ಇದಕ್ಕು ಮುನ್ನ ಊರ ಬಾಗಿಲ ಬಳಿ ಸಗಣಿ ಕುಳ್ಳಿನಲ್ಲಿ ಬೆಂಕಿಯನ್ನು ಹಾಕಿರುತ್ತಾರೆ. ಜನರು ಅಲ್ಲಿಯ ಬೆಂಕಿಯನ್ನು ಮನೆಗೆ ತೆಗೆದುಕೊಂಡು ಹೋಗಿ ಅದರಿಂದ ತಮ್ಮ ಮನೆಯಲ್ಲಿನ ದೀಪ ಬೆಳಗಬೇಕು.   

ಹಿನ್ನೆಲೆ: ಹಿಂದೆ ಕಾಲರ, ಪ್ಲೇಗ್ ಇತ್ಯಾದಿ ಸಾಂಕ್ರಾಮಿಕ ರೋಗಗಳು ಉಲ್ಬಣಿಸಿ ಇಡೀ ಊರನ್ನು ವ್ಯಾಪಿಸಿ ಸಾವು- ನೋವಿಗೆ ಕಾರಣವಾಗುತ್ತಿದ್ದವು. ಈ ವೇಳೆ ಜನ ಊರನ್ನು ಖಾಲಿ ಮಾಡಿ ಗುಳೆ  ಹೋಗುತ್ತಿದ್ದರು. ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಬಂದ ನಂತರ ಊರಿಗೆ ಹಿಂದಿರುಗಿ ಸ್ವಚ್ಛಗೊಳಿಸಿ ಮತ್ತೆ ಬದುಕು ಸಾಗಿಸುತ್ತಿದ್ದರು. ಕಾಲಾನಂತರ ಜನ ಗುಳೆ  ಹೋಗುವ ಅವಧಿಯನ್ನು ಸೀಮಿತಗೋಳಿಸಿ ಪೂರ್ವಜರ ನಡವಳಿಕೆ ಗಳನ್ನು ಮುಂದುವರಿಸಿಕೊಂಡು ಬಂದಿ ದ್ದಾರೆ. ಮೊದಲೆಲ್ಲಾ ವರ್ಷಕ್ಕೊಂದು ಒಂದು ಬಾರಿ ಆಚರಿಸಲಾಗುತ್ತಿತ್ತು. ಆದರೆ, ಇಂದು ಪಟ್ಟಣ ದೊಡ್ಡದಾ ಗಿದ್ದು, ನೀರು ನೆರಳಿನ ಅಭಾವದಿಂದ 5ವರ್ಷಕ್ಕೊಮ್ಮೆ ನಡೆಯುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.