ADVERTISEMENT

ಕಸ ಸುರಿಯಲು ಭೂಸ್ವಾಧೀನಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2014, 8:45 IST
Last Updated 25 ಅಕ್ಟೋಬರ್ 2014, 8:45 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಆರೂಢಿ  ಗ್ರಾಮಕ್ಕೆ  ಆಮ್‌ ಆದ್ಮಿ ಪಕ್ಷದ ರಾಜ್ಯ ಮುಖಂಡ ರವಿನಾರಾಯಣರೆಡ್ಡಿ  ಭೇಟಿ ನೀಡಿ ರೈತರೊಂದಿಗೆ ಸಮಾಲೋಚನೆ ನಡೆಸಿದರು
ದೊಡ್ಡಬಳ್ಳಾಪುರ ತಾಲ್ಲೂಕಿನ ಆರೂಢಿ ಗ್ರಾಮಕ್ಕೆ ಆಮ್‌ ಆದ್ಮಿ ಪಕ್ಷದ ರಾಜ್ಯ ಮುಖಂಡ ರವಿನಾರಾಯಣರೆಡ್ಡಿ ಭೇಟಿ ನೀಡಿ ರೈತರೊಂದಿಗೆ ಸಮಾಲೋಚನೆ ನಡೆಸಿದರು   

ದೊಡ್ಡಬಳ್ಳಾಪುರ: ಬಿಬಿಎಂಪಿ ಕಸ ವಿಲೇ­ವಾರಿಯಲ್ಲಿ ತನ್ನ ಜವಾಬ್ದಾರಿ­ಯನ್ನು ಸರಿಯಾಗಿ ನಿರ್ವಹಣೆ ಮಾಡದೆ ಹಳ್ಳಿಗಳಿಗೆ ಕಸ ತಂದು ಸುರಿಯುವ ಮೂಲಕ ರೈತರನ್ನು ಒಕ್ಕಲೆಬ್ಬಿಸುತ್ತಿದೆ.  ಇದರ ವಿರುದ್ಧ ನಡೆಯುವ ಎಲ್ಲ ರೀತಿಯ ಹೋರಾಟಗಳಲ್ಲೂ ಸಕ್ರಿಯ­ವಾಗಿ ಭಾಗವಹಿಸಲಾಗುವುದು ಎಂದು ಆಮ್‌ ಆದ್ಮಿ ಪಕ್ಷದ ರಾಜ್ಯ ಮುಖಂಡ ರವಿನಾರಾಯಣರೆಡ್ಡಿ ಹೇಳಿದರು.

ಅವರು ತಾಲ್ಲೂಕಿನ ಸಾಸಲು ಹೋಬ­ಳಿಯ ಆರೂಢಿ ಹಾಗೂ ಸುತ್ತ­ಮುತ್ತಲಿನ ಗ್ರಾಮದಲ್ಲಿ ಬಿಬಿಎಂಪಿ ಕಸ ಸುರಿಯಲು 476 ಎಕರೆ ಭೂಮಿ ಸ್ವಾಧೀನಕ್ಕೆ ಒಳಪಡುತ್ತಿರುವ ಗ್ರಾಮ­ಗಳಿಗೆ ಭೇಟಿ ನೀಡಿ ರೈತರೊಂದಿಗೆ ಸಮಾಲೋಚನೆ ನಡೆಸಿದರು.

ಬಿಬಿಎಂಪಿ ವೈಜ್ಞಾನಿಕ ಕಸ ವಿಲೇವಾರಿಗೆ ಆಸಕ್ತಿ ವಹಿಸುತ್ತಿಲ್ಲ. ಹೇಗಾ­ದರೂ ಮಾಡಿ ಕಸವನ್ನು ಬಿಬಿಎಂಪಿ ವ್ಯಾಪ್ತಿಯಿಂದ ಹೊರ ಸಾಗಿಸಲು ಮಾತ್ರ ಯೋಜನೆ ರೂಪಿಸುತ್ತಿದೆ. ಇದಕ್ಕೆ ಸಾಕ್ಷಿ­ಯಾಗಿ ತಾಲ್ಲೂಕಿನ ಗುಂಡ್ಲಹಳ್ಳಿ ಹಾಗೂ ಬೆಂಗಳೂರು ಸಮೀಪದ ಮಂಡೂರು ಗ್ರಾಮದ ಸಮೀಪದ ಕಸದ ರಾಶಿ ನೋಡಿದರೆ ಅರ್ಥವಾಗುತ್ತದೆ. ಈ ಭಾಗದ ರೈತರು ಈಗಲೆ ಎಚ್ಚೆತ್ತುಕೊಂಡು ಹೋರಾಟ ನಡೆಸದಿದ್ದರೆ ರೈತರು ಗ್ರಾಮಗಳನ್ನು ತೊರೆಯುವಂತಹ ಸ್ಥಿತಿ ನಿರ್ಮಾಣವಾಗಲಿದೆ ಎಂದು ಅವರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಆರೂಢಿ ಗ್ರಾಮದ ಹಿರಿಯ ರೈತ ನರಸಿಯಪ್ಪ, ವಕೀಲರಾದ ಲೋಕೇಶ್‌ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.