ADVERTISEMENT

‘ಬಡವರ ನಿವೇಶನ ಕನಸು ನನಸಾಗಿಲ್ಲ’

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 10:30 IST
Last Updated 12 ಜನವರಿ 2017, 10:30 IST
ದೊಡ್ಡಬಳ್ಳಾಪುರದಲ್ಲಿ ಪ್ರಜಾ ವಿಮೋಚನ ಚಳವಳಿ ವತಿಯಿಂದ ಬದುಕಿಗೊಂದು ಭೂಮಿ, ಜೀವನಕ್ಕೊಂದು ನಿವೇಶನಕ್ಕಾಗಿ ಒತ್ತಾಯಿಸಿ ತಾಲ್ಲೂಕು ಕಚೇರಿ ಮುಂದೆ ಧರಣಿ ನಡೆಸಲಾಯಿತು
ದೊಡ್ಡಬಳ್ಳಾಪುರದಲ್ಲಿ ಪ್ರಜಾ ವಿಮೋಚನ ಚಳವಳಿ ವತಿಯಿಂದ ಬದುಕಿಗೊಂದು ಭೂಮಿ, ಜೀವನಕ್ಕೊಂದು ನಿವೇಶನಕ್ಕಾಗಿ ಒತ್ತಾಯಿಸಿ ತಾಲ್ಲೂಕು ಕಚೇರಿ ಮುಂದೆ ಧರಣಿ ನಡೆಸಲಾಯಿತು   
ದೊಡ್ಡಬಳ್ಳಾಪುರ: ಬದುಕಿಗೊಂದು ಭೂಮಿ, ಜೀವನಕ್ಕೊಂದು ನಿವೇಶನಕ್ಕಾಗಿ ಒತ್ತಾಯಿಸಿ ಪ್ರಜಾ ವಿಮೋಚನಾ ಚಳವಳಿ ತಾಲ್ಲೂಕು ಸಮಿತಿ ವತಿಯಿಂದ ತಾಲ್ಲೂಕು ಕಚೇರಿ ಮುಂದೆ ಧರಣಿ ನಡೆಸಲಾಯಿತು.
 
ಈ ಸಂದರ್ಭದಲ್ಲಿ ಮಾತನಾಡಿದ ಪಿವಿಸಿ ರಾಜ್ಯ ಅಧ್ಯಕ್ಷ ಆನೇಕಲ್‌ ಕೃಷ್ಣಪ್ಪ, ರಾಜ್ಯ ಕಾರ್ಯದರ್ಶಿ ಕೆ.ಎಲ್‌.ಶಂಕರ್‌, ಬೆಂಗಳೂರು ವಿಭಾಗದ ಉಪಾಧ್ಯಕ್ಷ ಚಿಕ್ಕನರಸಪ್ಪ, ದೇಶಕ್ಕೆ ಸ್ವಾತಂತ್ರ್ಯ ಬಂದು ಆರು ದಶಕಗಳೆ ಕಳೆದಿದ್ದರು ಸಹ ಇನ್ನೂ ಬಡವರ ನಿವೇಶನದ ಕನಸು ನನಸಾಗಿಲ್ಲ ಎಂದರು.
 
ಪ್ರತಿಭಟನೆಯಲ್ಲಿ ಪಿವಿಸಿ ಮುಖಂಡರಾದ ಜಾಲಾಕಿಟ್ಟಿ, ಇಂಡ್ಲವಾಡಿ ಬಸವರಾಜು, ಆನಂದ್‌, ಮೂರ್ತಿ ಮತ್ತಿತರರು ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.